ವಿಜಯಪುರದಲ್ಲಿ ಭೂಕಂಪನ; 3.9ರಷ್ಟು ತೀವ್ರತೆ ದಾಖಲು, ಭಯದಲ್ಲಿ ಜನ

ನಿನ್ನೆ ರಾತ್ರಿ ಎರಡು ಬಾರಿ ಭೂಮಿ ಕಂಪಿಸಿದ ಅನುಭವ ಆಗಿದೆ. ಮೊದಲಿಗೆ ಎರಡು ಕ್ಷಣಗಳ ಕಾಲ ಭೂಮಿಯಿಂದ ವಿಚಿತ್ರ ಶಬ್ದ ಕೇಳಿ‌ ಬಂದಿದೆ. ನಂತರ ಭೂಮಿ ನಡುಗಿದ ಅನುಭವವಾಗಿದೆ. ಹೀಗಾಗಿ ಜನರು ಭಯದಲ್ಲೇ ಕಾಲ ಕಳೆಯುವಂತಾಗಿದೆ.

ವಿಜಯಪುರದಲ್ಲಿ ಭೂಕಂಪನ; 3.9ರಷ್ಟು ತೀವ್ರತೆ ದಾಖಲು, ಭಯದಲ್ಲಿ ಜನ
ಸಾಂಕೇತಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Sep 05, 2021 | 1:45 PM

ವಿಜಯಪುರ: ರಾತ್ರಿ 11.47ರ ಸುಮಾರಿಗೆ ವಿಜಯಪುರ ಸೇರಿದಂತೆ ಜಿಲ್ಲೆಯಾದ್ಯಂತ ಭೂಮಿ ಕಂಪಿಸಿದ ಅನುಭವ, ವಿಚಿತ್ರ ಶಬ್ದ ಎದುರಾಗಿದೆ. ಭಯದಿಂದ ಜನರು ತಮ್ಮ ಮನೆಗಳಿಂದ ಹೊರಗಡೆ ಓಡಿಬಂದಿದ್ದಾರೆ. 3 ರಿಂದ 4 ಸೆಕೆಂಡ್ ಕಾಲ ಭೂಮಿ‌ ನಡುಗಿದ ಅನುಭವವಾಗಿದ್ದು ಭೂಮಿಯಿಂದ ಕೇಳಿ‌ ಬಂದ ವಿಚಿತ್ರ ಶಬ್ದಕ್ಕೆ ಜನರಲ್ಲಿ ಭೀತಿ ಎದುರಾಗಿದೆ. ಸದ್ಯ ಗಣಿ, ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ನಿನ್ನೆ ರಾತ್ರಿ ಎರಡು ಬಾರಿ ಭೂಮಿ ಕಂಪಿಸಿದ ಅನುಭವ ಆಗಿದೆ. ಮೊದಲಿಗೆ ಎರಡು ಕ್ಷಣಗಳ ಕಾಲ ಭೂಮಿಯಿಂದ ವಿಚಿತ್ರ ಶಬ್ದ ಕೇಳಿ‌ ಬಂದಿದೆ. ನಂತರ ಭೂಮಿ ನಡುಗಿದ ಅನುಭವವಾಗಿದೆ. ಹೀಗಾಗಿ ಜನರು ಭಯದಲ್ಲೇ ಕಾಲ ಕಳೆಯುವಂತಾಗಿದೆ. ಇನ್ನು ಮತ್ತೊಂದು ಕಡೆ ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.9ರಷ್ಟು ದಾಖಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರ ಭೂಕಂಪನದ ಕೇಂದ್ರ ಬಿಂದುವಾಗಿದ್ದು ಅದರ ಅಲೆ ವಿಜಯಪುರ ಜಿಲ್ಲೆಯಲ್ಲಿ ಉಂಟಾಗಿ ಭೂಮಿ‌ಕಂಪಿಸಿದೆ. ಭೂಕಂಪದ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದಿಂದ ಮಾಹಿತಿ ಪಡೆದುಕೊಳ್ಳುತ್ತಿದೆ. ಹಾಗೂ ಆಲಮಟ್ಟಿಯ ಭೂಕಂಪ ಮಾಪನ‌ ಕೇಂದ್ರದಿಂದ ಮಾಹಿತಿ ಸಂಗ್ರಹಿಸುತ್ತಿದೆ.

ಇನ್ನು ತಡರಾತ್ರಿ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನವಾದ ಹಿನ್ನೆಲೆಯಲ್ಲಿ ಬಬಲಾದಿ ಸದಾಶಿವ ಮುತ್ಯಾ ಮಠದ ಶ್ರೀಗಳ ಕಾಲಜ್ಞಾನ ಹೇಳಿದ ವಿಡಿಯೋ ವೈರಲ್ ಆಗಿದೆ. ಕಳೆದ ಶಿವರಾತ್ರಿ ಜಾತ್ರೆಯ ದಿನ ಬಬಲಾದಿ ಸದಾಶಿವ ಮಠದ ಸಿದ್ದು ಮುತ್ಯಾ ಕಾಲಜ್ಞಾನ ಹೇಳಿದ್ದರು. ಶ್ರೀಗಳು 2021ರಲ್ಲಿ ಭೂಕಂಪನ ಉಂಟಾಗುತ್ತೆ ಎಂದು ಹೇಳಿದ್ದರು. ಅದರಂತೆ ಇದೀಗ ತಡರಾತ್ರಿ ಭೂಕಂಪನದ ಅನುಭವ ಉಂಟಾಗಿದೆ. ಹೀಗಾಗಿ ಶ್ರೀಗಳ ಹೇಳಿಕೆ ವಿಡಿಯೋ ವೈರಲ್ ಆಗಿದೆ. ಅಲ್ಲದೆ ಶ್ರೀಗಳು ರಾಜಕೀಯದಲ್ಲಿ ಏರಿಳಿತವಾಗುತ್ತೆ. ಒಂದೇ ಪಕ್ಷದಲ್ಲಿ ಅಸೂಯೆ ರಾಜಕಾರಣ ಹುಟ್ಟುತ್ತೆ ಎಂದಿದ್ದರು.

ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಭೂಕಂಪನವಾಗಿದೆ. ರಿಕ್ಟರ್ ಮಾಪನದಲ್ಲಿ 3.9 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ನಿಡಗುಂದಿ ತಾಲೂಕಿನ ಆಲಮಟ್ಟಿಯ ಡ್ಯಾಂ ಆವರಣದಲ್ಲಿನ ಭೂಕಂಪನ ಮಾಪನ ಕೇಂದ್ರದಲ್ಲಿ ಹಾಗೂ ನೆರೆಯ ಕಲಬುರಗಿ ಜಿಲ್ಲೆಯ ಭೂಕಂಪನ ಮಾಪನ ಕೇಂದ್ರದಲ್ಲಿ ಭೂಕಂಪನವಾಗಿದ್ದು ದಾಖಲಾಗಿದೆ. ಈ ನಿಟ್ಟಿನಲ್ಲಿ ಇಂದು ವಿಜಯಪುರ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ನೇತೃತ್ವದಲ್ಲಿ ತುರ್ತು ಸಭೆ ನಡೆಸಲಾಯಿತು. ಸಭೆಯಲ್ಲಿ ಎಲ್ಲೆಲ್ಲಿ ಭೂಕಂಪನವಾಗಿದೆ. ಎಷ್ಟು ಪ್ರಮಾಣದಲ್ಲಿ ಕಂಪನವಾಗಿದೆ ಎಂಬಿತ್ಯಾಧಿ ವಿಚಾರಗಳನ್ನು ಚರ್ಚೆ ಮಾಡಲಾಯಿತು.

ಇದನ್ನೂ ಓದಿ: Hyderabad Earthquake ಹೈದರಾಬಾದ್‌ ಸಮೀಪ ಭೂಕಂಪನ; 4.0 ತೀವ್ರತೆ ದಾಖಲು

Haiti Earthquake: ಹುಡುಕಿದಷ್ಟೂ ಸಿಗುತ್ತಿವೆ ಶವಗಳು; ಹೈಟಿ ಭೂಕಂಪ ಭೀಕರತೆ, ಸಾವಿನ ಸಂಖ್ಯೆ 2207ಕ್ಕೆ ಏರಿಕೆ

Published On - 7:46 am, Sun, 5 September 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್