ಬೆಳಗ್ಗೆ ಡಾನ್ಸ್ ಕ್ಲಾಸ್, ಸಂಜೆಯಾಗುತ್ತಿದ್ದಂತೆ ದರೋಡೆ; ಸಿಸಿಬಿ ಪೊಲೀಸರಿಂದ ಐವರ ಬಂಧನ

|

Updated on: May 28, 2021 | 4:57 PM

CCB Police: ಬಂಧಿತರು ಜೂಜಾಟದ ಅಡ್ಡೆಗೆ ಲಗ್ಗೆ ಇಟ್ಟು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಡ್ರಳ್ಳಿ, ಕಾಮಾಕ್ಷಿಪಾಳ್ಯ, ಬ್ಯಾಟರಾಯನಪುರ,‌ ಜ್ಞಾನ ಭಾರತಿ ಠಾಣಾ ವ್ಯಾಪ್ತಿಯಲ್ಲಿ ಕೃತ್ಯವೆಸಗುತ್ತಿದ್ದರು ಎಂದು ಹೇಳಲಾಗಿದೆ.

ಬೆಳಗ್ಗೆ ಡಾನ್ಸ್ ಕ್ಲಾಸ್, ಸಂಜೆಯಾಗುತ್ತಿದ್ದಂತೆ ದರೋಡೆ; ಸಿಸಿಬಿ ಪೊಲೀಸರಿಂದ ಐವರ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ನಗರದ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಜೂಜು ಅಡ್ಡೆ ಮೇಲೆ ದಾಳಿ ನಡೆಸಿ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಸೆರೆಹಿಡಿದಿದ್ದಾರೆ. ಸಂಜು, ಮನು, ವಿಜಿ, ಮಣಿ ಎಂಬುವವರೇ ಬಂಧಿತರಾಗಿದ್ದು, ಆರೋಪಿಗಳ ಪೈಕಿ ಮನು ಬೆಳಗ್ಗೆ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದ. ಸಂಜೆಯಾಗುತ್ತಿದ್ದಂತೆ ತನ್ನ ಗ್ಯಾಂಗ್ ಜೊತೆ ದರೋಡೆ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಬಂಧಿತರು ಜೂಜಾಟದ ಅಡ್ಡೆಗೆ ಲಗ್ಗೆ ಇಟ್ಟು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಡ್ರಳ್ಳಿ, ಕಾಮಾಕ್ಷಿಪಾಳ್ಯ, ಬ್ಯಾಟರಾಯನಪುರ,‌ ಜ್ಞಾನ ಭಾರತಿ ಠಾಣಾ ವ್ಯಾಪ್ತಿಯಲ್ಲಿ ಕೃತ್ಯವೆಸಗುತ್ತಿದ್ದರು ಎಂದು ಹೇಳಲಾಗಿದೆ.

ಜ್ಞಾನಭಾರತಿ ಬಳಿಯ ರೈಲ್ವೇ ಲೇಔಟ್ ಬಳಿ ದರೋಡೆಗೆ ಈ ಗ್ಯಾಂಗ್ ಹೊಂಚು ಹಾಕಿದ್ದ ಮಾಹಿತಿ ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸುವ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಮತ್ತೋರ್ವ ಆರೋಪಿಗಾಗಿ ಸಿಸಿಬಿ ಶೋಧ ಮುಂದುವರೆಸಿದೆ.

ಇದನ್ನೂ ಓದಿ: ಕೊರೊನಾ ವೈರಸ್ ಎಲ್ಲಿಂದ ಹರಡಿತು? ಕೊವಿಡ್ ರೋಗದ ಸೋಂಕಿನ ಅರಿಯಲು ಸಿಐಎ ತನಿಖೆಗೆ ಆಮೆರಿಕ ಅಧ್ಯಕ್ಷ ಜೋ ಬೈಡೆನ್ ಆದೇಶ

ಡಿಆರ್‌ಡಿಒದ ಆಂಟಿ-ಕೊವಿಡ್ ಡ್ರಗ್ ಪ್ಯಾಕೆಟ್​ಗೆ ₹990; ಸರ್ಕಾರಿ ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಲಭ್ಯ

(CCB police arrest 5 people who is make Robbery in Bengaluru)