AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Gang Rape: ಬೆಂಗಳೂರು ಅತ್ಯಾಚಾರ ಪ್ರಕರಣ; ಸಂತ್ರಸ್ತೆ ಕಲ್ಲಿಕೋಟೆಯಲ್ಲಿ ಪತ್ತೆ

Bangalore Gangrape: ಸಂತ್ರಸ್ತೆ ತನ್ನ ಸ್ನೇಹಿತ ಲಕ್ಷ್ಮೀಲಾಲ್ ಮನೆಯಲ್ಲಿ ಆಶ್ರಯ ಪಡೆದಿದ್ದರು. ಸದ್ಯ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರಿಗೆ ಸಂತ್ರಸ್ತೆ ಕೇರಳಕ್ಕೆ ತೆರಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದ ಇನ್ಸ್ಪೆಕ್ಟರ್, ಮಹಿಳಾ ಪಿಎಸ್ಐ ತಂಡ ಸಂತ್ರಸ್ತೆಯನ್ನು ಪತ್ತೆ ಹಚ್ಚಿದೆ.

Bengaluru Gang Rape: ಬೆಂಗಳೂರು ಅತ್ಯಾಚಾರ ಪ್ರಕರಣ; ಸಂತ್ರಸ್ತೆ ಕಲ್ಲಿಕೋಟೆಯಲ್ಲಿ ಪತ್ತೆ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on:May 28, 2021 | 11:55 AM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಡೀ ಮನುಕುಲವೇ ಶಪಿಸುವಂತಹ ಹೀನ ಕೃತ್ಯ ನಡೆದಿದೆ. ನಗರದಲ್ಲಿ ಬಾಂಗ್ಲಾ ಡ್ಯಾನ್ಸರ್​​ ಮೇಲೆ ಗ್ಯಾಂಗ್‌ರೇಪ್ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಯುವತಿಯನ್ನ ಬೆಂಗಳೂರು ಪೊಲೀಸರು ಪತ್ತೆ ಹಚ್ಚಿದ್ದು ಕೇರಳದ ಕಲ್ಲಿಕೋಟೆಯಿಂದ ಸಂತ್ರಸ್ತೆಯನ್ನು ಕರೆತರುತ್ತಿದ್ದಾರೆ.

ಘಟನೆ ಬಳಿಕ ಸಂತ್ರಸ್ತೆ ತನ್ನ ಸ್ನೇಹಿತ ಲಕ್ಷ್ಮೀಲಾಲ್ ಮನೆಯಲ್ಲಿ ಆಶ್ರಯ ಪಡೆದಿದ್ದರು. ಸದ್ಯ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರಿಗೆ ಸಂತ್ರಸ್ತೆ ಕೇರಳಕ್ಕೆ ತೆರಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದ ಇನ್ಸ್​​ಪೆಕ್ಟರ್, ಮಹಿಳಾ ಪಿಎಸ್ಐ ತಂಡ ಸಂತ್ರಸ್ತೆಯನ್ನು ಪತ್ತೆ ಹಚ್ಚಿದೆ. ಇನ್ನು ಗ್ಯಾಂಗ್​ರೇಪ್, ಹಲ್ಲೆ ಪ್ರಕರಣ ಸಂಬಂಧ ಒಟ್ಟು 6 ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಇಂದು ಬೆಳಗ್ಗೆ ಬೆಂಗಳೂರು ಪೊಲೀಸರು ಸ್ಥಳ ಮಹಜರು ನಡೆಸುವಾಗ ಪರಾರಿಯಾಗಲೆತ್ನಿಸಿದ ಒಂದಿಬ್ಬರಿಗೆ ಗುಂಡೇಟು ಸಹ ಬಿದ್ದಿದೆ.

6 ಆರೋಪಿಗಳ ಪೈಕಿ ಇಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಹಾಗೂ ಬಂಧಿತರಲ್ಲಿ ಇಬ್ಬರು ಮಹಿಳೆಯರಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದವರೆಲ್ಲ ಒಂದೇ ಗುಂಪಿನವರಾಗಿದ್ದು ಬಾಂಗ್ಲಾದೇಶದವರಾಗಿದ್ದರು. ವೇಶ್ಯಾವಾಟಿಕೆಗಾಗಿ ಸಂತ್ರಸ್ತೆಯನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಕರೆತರಲಾಗಿತ್ತು. ಮತ್ತು ಹಣಕಾಸಿನ ವಿಷಯದಿಂದಾಗಿ ಇವರ ನಡುವೆ ಜಗಳ ಶುರುವಾಗಿ ಅದು ಇಂತಹ ಕೃತ್ಯದ ಮೂಲಕ ಕೊನೆಯಾಗಿದೆ. ಸಂತ್ರಸ್ತೆಗೆ ಚಿತ್ರಹಿಂಸೆ ನೀಡಿ ರೇಪ್ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಇನ್ನು ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ‌ ಪ್ರತಿಕ್ರಿಯೆ ನೀಡಿದ್ದಾರೆ. ಸಾಮೂಹಿಕ ಅತ್ಯಾಚಾರ, ಹಲ್ಲೆ ವಿಡಿಯೋ ವೈರಲ್ ಆಗಿತ್ತು. ಕೇಂದ್ರ ಸಚಿವರು ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ್ದರು. ನಮ್ಮ ಪೊಲೀಸರು ಎಲ್ಲಾ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಇಬ್ಬರು ಮಹಿಳೆಯರು ಸೇರಿ ಐವರು ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬೆಂಗಳೂರು ಪೋಲಿಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಘಟನೆ ದೇಶದಲ್ಲಿ ಎಲ್ಲಿ ನಡೆದಿದ್ದು ಅಂತ ಗೊತ್ತಿರಲಿಲ್ಲ. ವಿಡಿಯೋ ಟ್ರೇಸ್ ಮಾಡಿದ ಬಳಿಕ ಬೆಂಗಳೂರಿನಲ್ಲಿ ನಡೆದಿದ್ದು ಅಂತಾ ಗೊತ್ತಾಗಿದೆ. ರಾಮಮೂರ್ತಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ ಎಂದು ಹೇಳಿದ್ರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್; ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳಿಗೆ ಗುಂಡೇಟು

ಬೆಂಗಳೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಖಾಸಗಿ ಭಾಗಕ್ಕೆ ಒದ್ದು ವಿಡಿಯೋ ವೈರಲ್​ ಮಾಡಿದ ಕಾಮುಕರು ಅರೆಸ್ಟ್​

(Bangalore gang rape case bengaluru police team found victim in kerala)

Published On - 11:36 am, Fri, 28 May 21

ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
Daily Devotional: ಹನುಮಂತನಿಗೆ ಯಾವ ರೀತಿಯ ಹಾರ ಹಾಕಿದರೆ ಏನು ಫಲ?
Daily Devotional: ಹನುಮಂತನಿಗೆ ಯಾವ ರೀತಿಯ ಹಾರ ಹಾಕಿದರೆ ಏನು ಫಲ?