ದರೋಡೆಗೆ ಸಂಚು ರೂಪಿಸುತ್ತಿದ್ದ ಐವರು ರೌಡಿಶೀಟರ್​ಗಳ ಬಂಧನ

|

Updated on: Jun 19, 2020 | 9:14 AM

ಬೆಂಗಳೂರು: ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿಶೀಟರ್​ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಐವರು ಆರೋಪಿಗಳು ಅರೆಸ್ಟ್​ ಆಗಿದ್ದು ಸಿಸಿಬಿ ಪೊಲೀಸರು ಆರೋಪಿಗಳಿಂದ ಕಳ್ಳತನದ ಮಾಲನ್ನು ಜಪ್ತಿ ಮಾಡಿದ್ದಾರೆ. ಸಾಧಿಕ್, ಮುಬಾರಕ್, ಸೈಯದ್ ಹನೀಫ್, ಮಹಮ್ಮದ್ ಇಮ್ರಾನ್, ಅಕ್ರಮ್ ಪಾಷಾ ಬಂಧಿತ ಆರೋಪಿಗಳು. ಇವರು ಎಚ್.ಎ.ಎಲ್ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದರು. ಈ ವೇಳೆ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ 4 ಬೈಕ್ ಹಾಗೂ ಕಳ್ಳತನದ ಮಾಲುಗಳನ್ನು ವಶಕ್ಕೆ ಪಡೆಯಲಾಗಿದೆ. ಇವರ ಮೇಲೆ ಎಚ್.ಎ.ಎಲ್ ಠಾಣೆಯಲ್ಲಿ ದರೋಡೆ ಪ್ರಕರಣ, […]

ದರೋಡೆಗೆ ಸಂಚು ರೂಪಿಸುತ್ತಿದ್ದ ಐವರು ರೌಡಿಶೀಟರ್​ಗಳ ಬಂಧನ
Follow us on

ಬೆಂಗಳೂರು: ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿಶೀಟರ್​ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಐವರು ಆರೋಪಿಗಳು ಅರೆಸ್ಟ್​ ಆಗಿದ್ದು ಸಿಸಿಬಿ ಪೊಲೀಸರು ಆರೋಪಿಗಳಿಂದ ಕಳ್ಳತನದ ಮಾಲನ್ನು ಜಪ್ತಿ ಮಾಡಿದ್ದಾರೆ.

ಸಾಧಿಕ್, ಮುಬಾರಕ್, ಸೈಯದ್ ಹನೀಫ್, ಮಹಮ್ಮದ್ ಇಮ್ರಾನ್, ಅಕ್ರಮ್ ಪಾಷಾ ಬಂಧಿತ ಆರೋಪಿಗಳು. ಇವರು ಎಚ್.ಎ.ಎಲ್ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದರು. ಈ ವೇಳೆ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ 4 ಬೈಕ್ ಹಾಗೂ ಕಳ್ಳತನದ ಮಾಲುಗಳನ್ನು ವಶಕ್ಕೆ ಪಡೆಯಲಾಗಿದೆ. ಇವರ ಮೇಲೆ ಎಚ್.ಎ.ಎಲ್ ಠಾಣೆಯಲ್ಲಿ ದರೋಡೆ ಪ್ರಕರಣ, ಬಾಣಸವಾಡಿಯಲ್ಲಿ‌ ಬೈಕ್ ಕಳುವು ಪ್ರಕರಣ ದಾಖಲಾಗಿದೆ.