ಆಸ್ತಿಗಾಗಿ ಸಿರಿವಂತ ಅಪ್ಪನ ಹತ್ಯೆ ಮಾಡಿಸಿದ ಮಗ-ಚಿಕ್ಕಪ್ಪ ಜೋಡಿ ಇನ್ನೂ ನಾಪತ್ತೆ

ಬೆಂಗಳೂರು: ಆಸ್ತಿ ವಿಚಾರಕ್ಕೆ ಸ್ವಂತ ತಮ್ಮ ಹಾಗೂ ಮಗನೇ ತಂದೆಯ ಕೊಲೆ ಮಾಡಿ ತಲೆ ಮರಿಸಿಕೊಂಡಿದ್ದವರನ್ನ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಫೆಬ್ರವರಿ 14 ರಂದು ತಲಘಟ್ಟಪುರ ಠಾಣಾ ವ್ಯಾಪ್ತಿಯ ಗುಬ್ಬಲಾಳ ಬಳಿ ನಡೆದಿತ್ತು. ಬಳ್ಳಾರಿಯಲ್ಲಿ 100 ಕೋಟಿ ಮೌಲ್ಯದ ಗಣಿ ಭೂಮಿ ಹೊಂದಿದ್ದ ಮಾಧವನನ್ನು ಕೊಲೆ ಮಾಡಲು ಸ್ವಂತ ಮಗ ಹಾಗೂ ತಮ್ಮನೇ ಮುಹೂರ್ತ ಫಿಕ್ಸ್ ಮಾಡಿದ್ರು. ನೂರು ಕೋಟಿ ರೂ. ಮೌಲ್ಯದ 2 ಸಾವಿರ ಎಕರೆ ಗಣಿ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಚಿಕ್ಕಪ್ಪನ ಜತೆ ಸೇರಿ […]

ಆಸ್ತಿಗಾಗಿ ಸಿರಿವಂತ ಅಪ್ಪನ ಹತ್ಯೆ ಮಾಡಿಸಿದ ಮಗ-ಚಿಕ್ಕಪ್ಪ ಜೋಡಿ ಇನ್ನೂ ನಾಪತ್ತೆ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Jun 20, 2020 | 8:50 AM

ಬೆಂಗಳೂರು: ಆಸ್ತಿ ವಿಚಾರಕ್ಕೆ ಸ್ವಂತ ತಮ್ಮ ಹಾಗೂ ಮಗನೇ ತಂದೆಯ ಕೊಲೆ ಮಾಡಿ ತಲೆ ಮರಿಸಿಕೊಂಡಿದ್ದವರನ್ನ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಫೆಬ್ರವರಿ 14 ರಂದು ತಲಘಟ್ಟಪುರ ಠಾಣಾ ವ್ಯಾಪ್ತಿಯ ಗುಬ್ಬಲಾಳ ಬಳಿ ನಡೆದಿತ್ತು. ಬಳ್ಳಾರಿಯಲ್ಲಿ 100 ಕೋಟಿ ಮೌಲ್ಯದ ಗಣಿ ಭೂಮಿ ಹೊಂದಿದ್ದ ಮಾಧವನನ್ನು ಕೊಲೆ ಮಾಡಲು ಸ್ವಂತ ಮಗ ಹಾಗೂ ತಮ್ಮನೇ ಮುಹೂರ್ತ ಫಿಕ್ಸ್ ಮಾಡಿದ್ರು.

ನೂರು ಕೋಟಿ ರೂ. ಮೌಲ್ಯದ 2 ಸಾವಿರ ಎಕರೆ ಗಣಿ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಚಿಕ್ಕಪ್ಪನ ಜತೆ ಸೇರಿ ಹೆತ್ತ ತಂದೆಯ ಕೊಲೆಗೆ ಸುಪಾರಿ ಕೊಟ್ಟಿದ್ದ ಪುತ್ರನ ಕುತಂತ್ರವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಹಾಗೂ ಪ್ರಕರಣ ಸಂಬಂಧಿಸಿ ಐವರು ಸುಪಾರಿ ಹಂತಕರನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೋಡಿ ಸೂತ್ರಧಾರರಿಬ್ಬರೂ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ..  ಬಳ್ಳಾರಿಯಲ್ಲಿ 100 ಕೋಟಿ ಮೌಲ್ಯದ ಗಣಿ ಭೂಮಿಯನ್ನು ಮಾರಾಟ ಮಾಡುವಂತೆ ಮಗ ಹರಿಕೃಷ್ಣ ಹಾಗೂ ತಮ್ಮ ಶಿವರಾಂ ಪ್ರಸಾದ್ ಬೆದರಿಕೆ ಹಾಕಿದ್ರು. ಒಪ್ಪದಿದ್ದಾಗ 25 ಲಕ್ಷ ಸುಪಾರಿ ನೀಡಿ 3 ಬಾರಿ ಕೊಲೆ ಯತ್ನ ನಡೆಸಿದ್ರು. ಮೂರು ಬಾರಿ ಸ್ಕೆಚ್ ಮಿಸ್ ಆಗಿ ನಾಲ್ಕನೇ ಬಾರಿ ಕತ್ತು ಸೀಳಿ ಕಿಡಿಗೇಡಿಗಳು ಕೊಲೆ ಮಾಡಿದ್ರು. ಪ್ರಮುಖ ಆರೋಪಿಗಳಾದ ಹರಿಕೃಷ್ಣ ಮತ್ತು ಶಿವರಾಂ ಪ್ರಸಾದ್ ಎಸ್ಕೇಪ್ ಆಗಿದ್ದಾರೆ. ಅವರ ಬಂಧನಕ್ಕೆ ಬೆಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.

ಸುಪಾರಿ ಪಡೆದು ಕೊಲೆ ಮಾಡಿದ್ದ 5 ಆರೋಪಿಗಳಾದ ರಿಯಾಜ್ ಅಹಮ್ಮದ್, ಶಾರುಕ್ ಖಾನ್, ಸೈಯದ್ ಸಲ್ಮಾನ್, ಆದಿಲ್ ಖಾನ್, ಶಾಬಾಜ್ ನಜೀರ್ ಬಂಧಿತರು. ಇವರಲ್ಲಿ ಇಬ್ಬರು ಆರೋಪಿಗಳು ಗೋವಾದಲ್ಲಿ ತಲೆ ಮರೆಸಿಕೊಂಡಿದ್ದರು. ಇನ್ನುಳಿದ ಆರೋಪಿಗಳು ಬೆಂಗಳೂರಲ್ಲೇ ಬಚ್ಚಿಟ್ಟುಕೊಂಡಿದ್ದರು.

Published On - 7:13 am, Sat, 20 June 20