ಲಾಕ್ಡೌನ್ ನೆಪವೊಡ್ಡಿ ಊರಿಗೆ ತೆರಳಿದ ಪತಿ! ಪತ್ನಿ ಕಂಗಾಲು, ಠಾಣೆಯಲ್ಲಿ ದೂರು ದಾಖಲು!
ಬೆಂಗಳೂರು: ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿ ತವರು ಮನೆಗೆ ಹೋದ್ರೆ ಸಾಕಪ್ಪಾ ಅಂತಾ ವೇಟ್ ಮಾಡ್ತಿರ್ತಾರೆ. ಆದರೆ, ಇಲ್ಲೊಬ್ಬ ಮಹಾಶಯ ಲಾಕ್ಡೌನ್ ನೆಪವೊಡ್ಡಿ ಊರಿಗೆ ಹೋದವ ಮತ್ತೆ ಇತ್ತ ತಲೆನೇ ಹಾಕ್ತಿಲ್ಲ ಅಂತಾ ಆತನ ಹೆಂಡ್ತಿ ಪೊಲೀಸರ ಮೊರೆ ಹೋಗಿದ್ದಾರೆ. ಹೌದು, ಕಳೆದ ಆರು ತಿಂಗಳ ಹಿಂದೆ ಸೋಮಶೇಖರ್ ಎಂಬಾತನನ್ನ ಕಾರವಾರದಲ್ಲಿ ಮದುವೆಯಾದ ಸಂತ್ರಸ್ತೆ ಪತಿ ಜೊತೆ ಸಿಲಿಕಾನ್ ಸಿಟಿಗೆ ಬಂದು ನೆಲೆಸಿದ್ದಳು. ಇನ್ನೇನು ನವಜೋಡಿಯ ಸುಖಿ ದಾಂಪತ್ಯ ಶುರುವಾಗಬೇಕಿತ್ತು ಅಷ್ಟರಲ್ಲೇ ವಕ್ಕರಿಸಿತು ಕೊರೊನಾ. ಕೊರೊನಾ ಬೆನ್ನಲ್ಲೇ […]
ಬೆಂಗಳೂರು: ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿ ತವರು ಮನೆಗೆ ಹೋದ್ರೆ ಸಾಕಪ್ಪಾ ಅಂತಾ ವೇಟ್ ಮಾಡ್ತಿರ್ತಾರೆ. ಆದರೆ, ಇಲ್ಲೊಬ್ಬ ಮಹಾಶಯ ಲಾಕ್ಡೌನ್ ನೆಪವೊಡ್ಡಿ ಊರಿಗೆ ಹೋದವ ಮತ್ತೆ ಇತ್ತ ತಲೆನೇ ಹಾಕ್ತಿಲ್ಲ ಅಂತಾ ಆತನ ಹೆಂಡ್ತಿ ಪೊಲೀಸರ ಮೊರೆ ಹೋಗಿದ್ದಾರೆ.
ಹೌದು, ಕಳೆದ ಆರು ತಿಂಗಳ ಹಿಂದೆ ಸೋಮಶೇಖರ್ ಎಂಬಾತನನ್ನ ಕಾರವಾರದಲ್ಲಿ ಮದುವೆಯಾದ ಸಂತ್ರಸ್ತೆ ಪತಿ ಜೊತೆ ಸಿಲಿಕಾನ್ ಸಿಟಿಗೆ ಬಂದು ನೆಲೆಸಿದ್ದಳು. ಇನ್ನೇನು ನವಜೋಡಿಯ ಸುಖಿ ದಾಂಪತ್ಯ ಶುರುವಾಗಬೇಕಿತ್ತು ಅಷ್ಟರಲ್ಲೇ ವಕ್ಕರಿಸಿತು ಕೊರೊನಾ. ಕೊರೊನಾ ಬೆನ್ನಲ್ಲೇ ಬಂತು ಲಾಕ್ಡೌನ್.
ನಿನ್ನ ಮೇಲೆ ಇಂಟರೆಸ್ಟ್ ಇಲ್ಲ ಎಂದ ಪತಿ ಮಹಾಶಯ! ಈ ಮಧ್ಯೆ ಲಾಕ್ಡೌನ್ ನೆಪವೊಡ್ಡಿ ಪತ್ನಿಯನ್ನ ಬೆಂಗಳೂರಲ್ಲೇ ಬಿಟ್ಟು ಸೋಮಶೇಖರ್ ವಾಪಸ್ ಕಾರವಾರಕ್ಕೆ ಹೋಗಿಬಿಟ್ಟನಂತೆ. ಇದೀಗ ಲಾಕ್ಡೌನ್ ಮುಗಿದ್ರೂ ಸೋಮಶೇಖರ್ ಕಿಲ ಕಿಲ ನಾನ್ ಬರಕ್ಕಿಲ್ಲ ಅಂತಾ ತವರು ಮನೆಯಲ್ಲೇ ಕೂತುಬಿಟ್ಟಿದಾನಂತೆ. ಸಂತ್ರಸ್ತೆ ಎಷ್ಟು ಸಲ ಫೋನ್ ಮಾಡಿದ್ರು ಇನಿಯ ಮಾತ್ರ ನಾಟ್ ರೀಚಬಲ್..!
ಕೊನೆಗೆ ಹೇಗೋ ಮಾಡಿ ಆತನಿಗೆ ಕಾಲ್ ಕನೆಕ್ಟ್ ಆಯ್ತು. ಆದರೆ, ಈಗ ನಿನ್ನ ಮೇಲೆ ಇಂಟರೆಸ್ಟ್ ಇಲ್ಲ. ಮೊದಲು ನೀನು ನನ್ನ ಮನೆ ಖಾಲಿ ಮಾಡು ಅಂದನಂತೆ ಪತಿ ಮಹಾಶಯ. ಶಾಕ್ ಆದ ನವ ವಿವಾಹಿತೆ ಈಗ ಕಂಗಾಲಾಗಿದ್ದಾಳೆ. ಗೃಹಿಣಿಯಾದ ಆಕೆ ಇತ್ತ ಬಾಡಿಗೆ ಕಟ್ಟಲು ಆಗದೆ ಜೀವನ ಸಾಗಿಸಲು ಆಗದೆ ದಿಕ್ಕುತೋಚದಂತಾಗಿದ್ದಾಳೆ. ಕೊನೆಗೂ ಧೈರ್ಯ ಮಾಡಿ ಸುದ್ದಗುಂಟೆಪಾಳ್ಯ ಪೊಲೀಸರ ಮೊರೆ ಹೋಗಿದ್ದಾಳೆ. ಹೇಗಾದರು ಮಾಡಿ ಗಂಡನನ್ನ ಕರೆಸಲು ಅಹವಾಲು ನೀಡಿದ್ದಾರಂತೆ.
Published On - 12:20 pm, Sat, 20 June 20