ಬೆಂಗಳೂರು, ಡಿಸೆಂಬರ್ 12: ಜನರಿಂದ 50 ಲಕ್ಷ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಸಿಸಿಬಿ (CCB) ಪೊಲೀಸರು (Police) ಬಂಧಿಸಿದ್ದಾರೆ. ಪ್ರತಾಪ್ ಸಿಂಹ ಬಂಧಿತ ಆರೋಪಿ. ಆರೋಪಿ ಪ್ರತಾಪ್ ಸಿಂಹ ಅಂಧರ, ವೃದ್ಧರ ಮತ್ತು ಅಂಗವಿಕಲರನ್ನು ಪೋಷಿಸುವ ಎನ್ಜಿಓಗಳಿಗೆ ಭೇಟಿ ನೀಡಿ, ನಿಮಗೆ ಸರ್ಕಾರದಿಂದ ಸಿಎಸ್ಆರ್ ಫಂಡ್ ಕೊಡಿಸುತ್ತೇನೆಂದು ಹಣ ಪಡೆದಿದ್ದನು. ಅಲ್ಲದೆ ಸರ್ಕಾರದಿಂದ ಲ್ಯಾಪ್ ಟ್ಯಾಪ್ ಕೊಡಿಸುತ್ತೇನೆ ಎಂದು ಸಾಮಾನ್ಯ ಜನರಿಂದ ಹಣ ಪಡೆದಿದ್ದನು.
ಇದು ಮಾತ್ರವಲ್ಲದೆ ನಿಮ್ಮ ಬೆಳೆಗಳಿಗೆ ಹೆಚ್ಚಿನ ಲಾಭಾಂಶ ಕೊಡಿಸುತ್ತೇನೆ, ಸರ್ಕಾರದಿಂದ ಸಬ್ಸಿಡಿ ಕೊಡಿಸುತ್ತೇನೆ. ಎಳನೀರು ಹೊರರಾಜ್ಯಗಳಿಗೆ ಮಾರಾಟ ಮಾಡಿಸುತ್ತೇನೆ ಎಂದು ಮಂಡ್ಯ, ಮೈಸೂರು ಮತ್ತು ತುಮಕೂರು ಭಾಗದ ರೈತರಿಂದ ಹಣ ಪಡೆದಿದ್ದನು.
ಇಲ್ಲಿಗೆ ಕೃತ್ಯ ನಿಲ್ಲದೆ ಈತನ ದೃಷ್ಟಿ ಉದ್ಯಮಿಗಳ ಮೇಲೂ ಬಿದ್ದಿತ್ತು. ದೆಹಲಿ, ಲಕ್ನೋ, ಆಗ್ರಾ, ಹಿಮಾಚಲ ಪ್ರದೇಶ ವ್ಯಾಪಾರಿಗಳಿಗೆ ವಿವಿಧ ಆಸೆ ತೋರಿಸಿ ಹಣ ಪಡೆದು ವಂಚಿಸಿದ್ದನು. ಹೀಗೆ ಆರೋಪಿ ಪ್ರತಾಪ್ ಸಿಂಹ ಒಟ್ಟು 50 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಸಿಸಿಬಿ ವಿಶೇಷ ವಿಚಾರಣಾ ದಳ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: YMIA Club ಮೇಲೆ ಸಿಸಿಬಿ ಪೊಲೀಸರ ದಾಳಿ, ಜೂಜು ಆಡುತ್ತಿದ್ದವರು ವಶಕ್ಕೆ
ಹಿರಿಯ ನಾಗರಿಕರಿಗೆ ನಂಬಿಸಿ ವಂಚನೆ ಮಾಡುತ್ತಿದ್ದ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಪತ್ನಿ ತೀರ್ಥ ಗೌಡ, ಪತಿ ಉದಯ್ ಬಂಧಿತ ಆರೋಪಿಗಳು. ದಂಪತಿ ಎಲ್ಐಸಿ ಏಜೆಂಟ್ ಆಗಿದ್ದರು. ಲ್ಯಾಪ್ಸ್ ಆಗಿರುವ ಇನ್ಸುರೆನ್ಸ್ಗಳನ್ನು ರಿನಿವಲ್ ಮಾಡಿಸುತ್ತೇನೆ ಅಂತ ನಂಬಿಸಿ ವಂಚಿಸಿದ್ದಾರೆ.
ಆರೋಪಿಗಳಿಗೆ ಸೇರಿದ ಎಂಟು ಅಕೌಂಟ್ಗಳಲ್ಲಿದ್ದ ಸುಮಾರು 1 ಕೋಟಿ ಹಣವನ್ನು ಸೀಜ್ ಮಾಡಲಾಗಿದೆ. ಆರೋಪಿಗಳು ಇಂದಿರಾನಗರದಲ್ಲಿ ಕಾಲ್ಸೆಂಟರ್ ಮಾಡಿಕೊಂಡಿದ್ದು, ಕೆಲ ಯುವತಿಯರನ್ನು ಕಾಲ್ ಸೆಂಟರ್ನಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದರು. ಸದ್ಯ ಪೊಲೀಸರು ದಂಪತಿಯ ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ