ಭೋಪಾಲ್: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆ ಮೇಲೆ 3 ಬಾರಿ ಅತ್ಯಾಚಾರ

ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆ ಮೇಲೆ ಅಪರಿಚಿತ ವ್ಯಕ್ತಿ ಅತ್ಯಾಚಾರವೆಸಗಿರುವ ಘಟನೆ ಭೋಪಾಲ್​ನಲ್ಲಿ ನಡೆದಿದೆ. 40 ಕಿ.ಮೀ ಅಂತರದಲ್ಲಿ ಮೂರು ಬಾರಿ ಅತ್ಯಾಚಾರವೆಸಗಲಾಗಿದೆ, ಆದರೂ ಆತನಿಂದ ತಪ್ಪಿಸಿಕೊಳ್ಳುವಲ್ಲಿ ಮಹಿಳೆ ಯಶಸ್ವಿಯಾಗಿದ್ದಾರೆ.  ಮಹಿಳೆ ತನ್ನ ಬೋಗಿಯಿಂದ ಎಸಿ ಕೋಚ್​ನಲ್ಲಿರುವ ವಾಶ್​ರೂಂಗೆ ಹೋಗಿದ್ದರು, ಆಕೆ ವಾಪಸಾಗುವ ವೇಳೆ ಆಕೆಗೆ ಬಲವಾದ ಆಯುಧದಿಂದ ವ್ಯಕ್ತಿಯೊಬ್ಬ ಹೊಡೆದಿದ್ದಾನೆ.

ಅತ್ಯಾಚಾರ-ಸಾಂದರ್ಭಿಕ ಚಿತ್ರImage Credit source: India Today
Follow us
ನಯನಾ ರಾಜೀವ್
|

Updated on: Dec 12, 2023 | 2:39 PM

ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆ ಮೇಲೆ ಅಪರಿಚಿತ ವ್ಯಕ್ತಿ ಅತ್ಯಾಚಾರವೆಸಗಿರುವ ಘಟನೆ ಭೋಪಾಲ್​ನಲ್ಲಿ ನಡೆದಿದೆ. 40 ಕಿ.ಮೀ ಅಂತರದಲ್ಲಿ ಮೂರು ಬಾರಿ ಅತ್ಯಾಚಾರವೆಸಗಲಾಗಿದೆ, ಆದರೂ ಆತನಿಂದ ತಪ್ಪಿಸಿಕೊಳ್ಳುವಲ್ಲಿ ಮಹಿಳೆ ಯಶಸ್ವಿಯಾಗಿದ್ದಾರೆ.  ಮಹಿಳೆ ತನ್ನ ಬೋಗಿಯಿಂದ ಎಸಿ ಕೋಚ್​ನಲ್ಲಿರುವ ವಾಶ್​ರೂಂಗೆ ಹೋಗಿದ್ದರು, ಆಕೆ ವಾಪಸಾಗುವ ವೇಳೆ ಆಕೆಗೆ ಬಲವಾದ ಆಯುಧದಿಂದ ವ್ಯಕ್ತಿಯೊಬ್ಬ ಹೊಡೆದಿದ್ದಾನೆ.

ಅವರು ನೆಲಕ್ಕೆ ಬಿದ್ದ ಬಳಿಕ ಎತ್ತಿಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಅಂದು ಕೋಚ್​ನಲ್ಲಿ ಯಾರೂ ಇರಲಿಲ್ಲ. ಪಕಾರಿಯಾದಿಂದ ಮೈಹಾರ್ ರೈಲು ನಿಲ್ದಾಣಗಳ ನಡುವೆ ಮೂರು ಬಾರಿ ಅತ್ಯಾಚಾರವೆಸಗಿದ್ದಾನೆ. ಆಕೆ ಅತ್ಯಾಚಾರವನ್ನು ವಿರೋಧಿಸಿದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ರೈಲು ಒಂದು ನಿಲ್ದಾಣದಲ್ಲಿ ನಿಂತಾದ ತನಗೆ ಬಾಯಾರಿಕೆಯಾಗುತ್ತಿದೆ ನೀರು ಕೊಡಿ ಎಂದಿದ್ದಾರೆ ಆಗ ಆತ ನೀರು ತರಲು ಹೋದಾಗ ಬಿಚ್ಚಿ ಹೋದ ಸೀರೆಯನ್ನು ಕಟ್ಟಿಕೊಳ್ಳುತ್ತಾ, ಬರಿಗಾಲಿನಲ್ಲಿ ಸಹಾಯಕ್ಕಾಗಿ ಓಡಿದ್ದಾರೆ.

ಮತ್ತಷ್ಟು ಓದಿ: ಕೊಪ್ಪಳದಲ್ಲಿ ಮಹಿಳೆ ಮೇಲೆ ಅತ್ಯಾಚಾರ: ವಿಡಿಯೋ ವೈರಲ್, 16 ಜನರ ವಿರುದ್ಧ ಎಫ್​ಐಆರ್

ಮಹಿಳೆ ಸತ್ನಾ ನಿಲ್ದಾಣದ ಆರ್​ಪಿಎಫ್​ ಕಾನ್​ಸ್ಟೆಬಲ್​ ಬಳಿ ಓಡಿಹೋಗಿದ್ದಾರೆ, ನಡೆದಿದ್ದೆಲ್ಲವನ್ನೂ ವಿವರಿಸಿದ್ದಾರೆ. ಬಳಿಕ ಪೊಲೀಸರು ರೈಲಿನ ಬಳಿ ತೆರಳಿದಾಗ ಆತ ಕೋಚ್​ನ ಬಾಗಿಲನ್ನು ಹಾಕಿಕೊಂಡಿದ್ದ, ಏನೇ ಮಾಡಿದರೂ ಬಾಗಿಲು ತೆರೆಸಲು ಸಾಧ್ಯವಾಗಲಿಲ್ಲ. ಕೆಲವು ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳ ಆ ಕೋಚ್​ ಬಳಿಯೇ ಇದ್ದರು.

ರೈಲನ್ನು ಕೈಮಾ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು, ಆಗ ರೈಲ್ವೆ ಮೆಕ್ಯಾನಿಕಲ್ ತಂಡವು ಬಾಗಿಲನ್ನು ತೆಗೆಯುವಲ್ಲಿ ಯಶಸ್ವಿಯಾಯಿತು. ಆರೋಪಿಯನ್ನು ಸೆರೆಹಿಡಿಯಲಾಯಿತು. ಒಂದೊಮ್ಮೆ ಆರ್​ಪಿಎಫ್​ ಕಾನ್​ಸ್ಟೆಬಲ್​ ರೈಲು ಹತ್ತದಿದ್ದರೆ ಆರೋಪಿ ಸುಲಭವಾಗಿ ತಪ್ಪಿಸಿಕೊಂಡುಬಿಡುತ್ತಿದ್ದ. ಇದೀಗ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ, ತನಿಖೆ ನಡೆಯುತ್ತಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ