ಮಧ್ಯೆ ಸೇವನೆಗೆಂದು ತೆರಳಿದ್ದ ವ್ಯಕ್ತಿ ಕೊಲೆ ಪ್ರಕರಣ: ಪೊಲೀಸರಿಗೆ ತಲೆನೋವಾದ ಹಂತಕನ ಹೆಜ್ಜೆ
ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಶರತ್ ಎಂಬಾತ ಬಿಟಿಎಂನಿಂದ ತಲಘಟ್ಟಪುರಕ್ಕೆ ಮಧ್ಯೆ ಸೇವನೆಗೆಂದು ತೆರಳಿ ಕೊಲೆಯಾಗಿದ್ದ. ಮರು ದಿನ ಬೆಳಿಗ್ಗೆ ಮೃತದೇಹದ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಬಳಿಕ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಇದುವರೆಗೂ ಹಂತಕರ ಸುಳಿವು ಸಿಕ್ಕಿಲ್ಲ.
ಬೆಂಗಳೂರು, ಡಿ.12: ತಲಘಟ್ಟಪುರದ ಕಲ್ಲು ಕ್ವಾರೆಯಲ್ಲಿ ಡಿ.05 ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕುಡಿಯಲು ಬಂದು ಕೊಲೆಯಾದ ಶರತ್(30) ಎಂಬಾತನ ಸಾವು, ಇನ್ನೂ ನಿಗೂಢವಾಗಿಯೇ ಉಳಿದಿದೆ. ತಲಘಟ್ಟಪುರ ಪೊಲೀಸರು(Talaghattapura Police) ಹಲವು ಆಯಾಮದಲ್ಲಿ ತನಿಖೆ ನಡೆಸುತ್ತಿದ್ದು, ಸಿಸಿಟಿವಿ, ಟೆಕ್ನಿಕಲ್ ಹಾಗೂ ಹಲವು ಹ್ಯಾಂಗಲ್ನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಆದರೆ, ಇನ್ನೂ ಕೂಡ ಯಾವುದೇ ಆಧಾರದಲ್ಲೂ ಹಂತಕನ ಹೆಜ್ಜೆ ಸಿಗುತ್ತಿಲ್ಲ. ಮೇಲ್ನೋಟಕ್ಕೆ ಹಣಕ್ಕಾಗಿ ಅಥವಾ ದ್ವೇಷಕ್ಕಾಗಿ ಈ ಹತ್ಯೆ ನಡೆದಂತಿಲ್ಲ. ಇದರಿಂದ ಕೊಲೆ ಯಾಕೆ ನಡೆದಿದೆ ಎಂಬುದೇ ಪೊಲೀಸರಿಗೆ ಪ್ರಶ್ನೆಯಾಗಿದೆ.
ಮಧ್ಯೆ ಸೇವನೆಗೆಂದು ತೆರಳಿದ್ದ ಶರತ್ ಕೊಲೆಯಾಗಿದ್ದ
ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಶರತ್, ಬಿಟಿಎಂನಿಂದ ತಲಘಟ್ಟಪುರಕ್ಕೆ ಮಧ್ಯೆ ಸೇವನೆಗೆಂದು ತೆರಳಿ ಕೊಲೆಯಾಗಿದ್ದ. ಮರು ದಿನ ಬೆಳಿಗ್ಗೆ ಮೃತದೇಹ ಕಂಡು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಯಾವುದೇ ದ್ವೇಷ ಹೊಂದಿರದ ಶರತ್ ಕೊಲೆಯಾದ ಬಳಿಕವೂ ಆತನ ಮೊಬೈಲ್, ಹಣ ಹಾಗೂ ವಸ್ತುಗಳು ಅಲ್ಲೇ ಇದ್ದವು. ಸದ್ಯ ಸಿಸಿಟಿವಿ ಪರಿಶೀಲನೆ ವೇಳೆ ಸಹ ಒಂಟಿಯಾಗಿ ಸಂಚರಿಸುತಿದ್ದದ್ದು ಪತ್ತೆಯಾಗಿದೆ. ಆತನ ಕೊಲೆ ಮಾಡಿದವರು ಯಾರು ಎಂಬ ಬಗ್ಗೆ ತನಿಖೆ ನಡೆದಿದೆ.
ಇದನ್ನೂ ಓದಿ:ಬೆಂಗಳೂರು: ಬಾರ್ನಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ!
ಬೆಂಗಳೂರಿನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಬೆಂಗಳೂರು: ನಗರದ ದಿನ್ನೂರು ಮುಖ್ಯರಸ್ತೆಯ ಕಟ್ಟಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ದುಷ್ಕರ್ಮಿಗಳು ಹಲ್ಲೆ ಮಾಡಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆರ್.ಟಿ.ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂದಾಜು 55 ರಿಂದ 60 ರ ಅಸುಪಾಸಿನ ವರ್ಷದ ವ್ಯಕ್ತಿಯ ಶವ ಇದಾಗಿದೆ. ಇನ್ನು ಇತ ಸ್ಥಳೀಯ ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡಿದ್ದ. ರಾತ್ರಿ ಹೊತ್ತು ಬಂದು ಅಪಾರ್ಟ್ಮೆಂಟ್ ನ ಕೆಳ ಮಹಡಿಯಲ್ಲಿ ಮಲಗುತಿದ್ದ.ಇಂದು ಕೆಲಸಕ್ಕೆ ಬಾರದ ಹಿನ್ನಲೆ ಬಂದು ನೋಡಿದಾಗ ಮೃತನಾಗಿರುವುದು ಬೆಳಕಿಗೆ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ