ರವಿ ಪೂಜಾರಿಗೆ ಜಡ್ಜ್​ ಕೇಳಿದ ಪ್ರಶ್ನೆಗಳೇನು? ಸಿಸಿಬಿ ವಶಕ್ಕೆ ರವಿ

ರವಿ ಪೂಜಾರಿಗೆ ಜಡ್ಜ್​ ಕೇಳಿದ ಪ್ರಶ್ನೆಗಳೇನು? ಸಿಸಿಬಿ ವಶಕ್ಕೆ ರವಿ

ಬೆಂಗಳೂರು: ನಟೋರಿಯಸ್ ಗ್ಯಾಂಗ್‌ಸ್ಟರ್ ರವಿ ಪೂಜಾರಿಯನ್ನು ಮಾರ್ಚ್ 7 ರವರೆಗೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ತಿಲಕ್ ನಗರದ ಡಬಲ್ ಮರ್ಡರ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರ ವಶಕ್ಕೆ ನೀಡಿ 1ನೇ ACMM ಕೋರ್ಟ್​ನ ನ್ಯಾಯಾಧೀಶರು ಆದೇಶಿಸಿದ್ದಾರೆ. ವಿಚಾರಣೆ ಸಮಯದಲ್ಲಿ ವಕೀಲರು ಪಕ್ಕದಲ್ಲೇ ಇರಲು ರವಿ ಪೂಜಾರಿ ಪರ ವಕೀಲರು ಅನುಮತಿ ಕೋರಿದರು. ಸದಾಕಾಲವೂ ವಕೀಲರ ಜೊತೆಯಲ್ಲೆ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಬದಲಾಗಿ ಸ್ವಲ್ಪ ದೂರದಲ್ಲೇ ವಕೀಲರು ಇರಲು ನ್ಯಾಯಾಲಯ ಅವಕಾಶ ನೀಡಿದೆ. ವಿಚಾರಣೆ ವೇಳೆ […]

sadhu srinath

|

Feb 24, 2020 | 1:54 PM

ಬೆಂಗಳೂರು: ನಟೋರಿಯಸ್ ಗ್ಯಾಂಗ್‌ಸ್ಟರ್ ರವಿ ಪೂಜಾರಿಯನ್ನು ಮಾರ್ಚ್ 7 ರವರೆಗೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ತಿಲಕ್ ನಗರದ ಡಬಲ್ ಮರ್ಡರ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರ ವಶಕ್ಕೆ ನೀಡಿ 1ನೇ ACMM ಕೋರ್ಟ್​ನ ನ್ಯಾಯಾಧೀಶರು ಆದೇಶಿಸಿದ್ದಾರೆ.

ವಿಚಾರಣೆ ಸಮಯದಲ್ಲಿ ವಕೀಲರು ಪಕ್ಕದಲ್ಲೇ ಇರಲು ರವಿ ಪೂಜಾರಿ ಪರ ವಕೀಲರು ಅನುಮತಿ ಕೋರಿದರು. ಸದಾಕಾಲವೂ ವಕೀಲರ ಜೊತೆಯಲ್ಲೆ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಬದಲಾಗಿ ಸ್ವಲ್ಪ ದೂರದಲ್ಲೇ ವಕೀಲರು ಇರಲು ನ್ಯಾಯಾಲಯ ಅವಕಾಶ ನೀಡಿದೆ. ವಿಚಾರಣೆ ವೇಳೆ ವಿಡಿಯೋ ರೆಕಾರ್ಡಿಂಗ್ ಮಾಡುವಂತೆಯೂ ಕೋರ್ಟ್ ಸೂಚಿಸಿದೆ. ಇದೇ ವೇಳೆ ತನಗೆ ಹೃದಯ ಸಮಸ್ಯೆ ಮತ್ತು ಸಕ್ಕರೆ ಕಾಯಿಲೆ ಇದೆ ಎಂದು ನ್ಯಾಯಾಧೀಶರ ಮುಂದೆ ರವಿ ಪೂಜಾರಿ ತಿಳಿಸಿದ್ದಾರೆ.

ಕನ್ನಡ ಬರಲ್ಲ ಎಂದು ಕನ್ನಡದಲ್ಲೇ ಉತ್ತರಿಸಿದ ಪಾತಕಿ: ನ್ಯಾಯಾಲಯದ ಮುಂದೆ ಹಾಜರಾದ ಭಾರತದ ಮೋಸ್ಟ್ ವಾಂಟೆಡ್​ ಗ್ಯಾಂಗ್​ಸ್ಟರ್ ರವಿ ಪೂಜಾರಿಗೆ ನ್ಯಾಯಾಧೀಶರ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ನಿನ್ನ ಹೆಸರೇನು, ನಿನ್ನ ತಂದೆ ಹೆಸರೇನು? ಪೊಲೀಸರು ನಿನಗೆ ಕಿರುಕುಳ ಕೊಟ್ರಾ ಎಂದು ಜಡ್ಜ್​ ಪ್ರಶ್ನಿಸಿದ್ದಾರೆ. ಪೊಲೀಸರು ಯಾವುದೇ ಕಿರುಕುಳ ನೀಡಿಲ್ಲ ಎಂದು ಉತ್ತರಿಸಿದ್ದಾರೆ. ಇದೇ ವೇಳೆ ಕನ್ನಡ ಬರುತ್ತಾ ಎಂದು ನ್ಯಾಯಾಧೀಶರ ಪ್ರಶ್ನೆಗೆ, ನನಗೆ ಕನ್ನಡ ಬರಲ್ಲ.. ಮಾತನಾಡೋಕೆ ಬರಲ್ಲ. ಆದ್ರೆ ಅರ್ಥ ಆಗತ್ತೆ, ಕನ್ನಡ ಕಲಿತುಕೊಳ್ಳಬೇಕು ಎಂದು ಕನ್ನಡದಲ್ಲೇ ರವಿ ಪೂಜಾರಿ ಉತ್ತರಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada