10 ತಿಂಗಳ ಮಗುವನ್ನ ಕೊಂದು, ತಾಯಿಯೂ ಆತ್ಮಹತ್ಯೆಗೆ ಶರಣು!
ಚಿತ್ರದುರ್ಗ: ಹತ್ತು ತಿಂಗಳ ಹೆಣ್ಣು ಮಗುವನ್ನು ಸಾಯಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಳಲ್ಕೆರೆ ತಾಲೂಕಿನ ಐನಳ್ಳಿ ಗ್ರಾಮದಲ್ಲಿ ನಡೆದಿದೆ. ಮಗುವನ್ನು ನೀರಿನ ಟಬ್ನಲ್ಲಿ ಮುಳುಗಿಸಿ ಹತ್ಯೆ ಮಾಡಿ ಬಳಿಕ ತಾಯಿ ಆಶಾಬಾಯಿ ನೇಣಿಗೆ ಶರಣಾಗಿದ್ದಾಳೆ. ಎರಡು ವರ್ಷದ ಹಿಂದಷ್ಟೇ ಹೊಳಲ್ಕೆರೆಯ ಲಂಬಾಣಿಹಟ್ಟಿ ನಿವಾಸಿ ಹೇಮಂತ್ ಜತೆ ಪ್ರೇಮವಿವಾಹವಾಗಿದ್ದರು. ಹೆರಿಗೆ ಬಳಿಕ ಆಶಾಬಾಯಿ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೀಗಾಗಿ ನೋವು, ಅನಾರೋಗ್ಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿದ್ದಾರೆ. ತಾನು ಸತ್ತ ಮೇಲೆ ಮಗು […]
ಚಿತ್ರದುರ್ಗ: ಹತ್ತು ತಿಂಗಳ ಹೆಣ್ಣು ಮಗುವನ್ನು ಸಾಯಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಳಲ್ಕೆರೆ ತಾಲೂಕಿನ ಐನಳ್ಳಿ ಗ್ರಾಮದಲ್ಲಿ ನಡೆದಿದೆ. ಮಗುವನ್ನು ನೀರಿನ ಟಬ್ನಲ್ಲಿ ಮುಳುಗಿಸಿ ಹತ್ಯೆ ಮಾಡಿ ಬಳಿಕ ತಾಯಿ ಆಶಾಬಾಯಿ ನೇಣಿಗೆ ಶರಣಾಗಿದ್ದಾಳೆ.
ಎರಡು ವರ್ಷದ ಹಿಂದಷ್ಟೇ ಹೊಳಲ್ಕೆರೆಯ ಲಂಬಾಣಿಹಟ್ಟಿ ನಿವಾಸಿ ಹೇಮಂತ್ ಜತೆ ಪ್ರೇಮವಿವಾಹವಾಗಿದ್ದರು. ಹೆರಿಗೆ ಬಳಿಕ ಆಶಾಬಾಯಿ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೀಗಾಗಿ ನೋವು, ಅನಾರೋಗ್ಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿದ್ದಾರೆ.
ತಾನು ಸತ್ತ ಮೇಲೆ ಮಗು ಅನಾಥ ಆಗುತ್ತದೆಂಬ ಕಾರಣಕ್ಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗುವನ್ನು ಹತ್ಯೆ ಮಾಡಿ ಬಳಿಕ ಆಶಾಬಾಯಿ ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ್ದಾಳೆ. ಘಟನೆ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 7:41 am, Tue, 25 February 20