ಸ್ಯಾಂಡಲ್​ವುಡ್​ನಲ್ಲಿ Drugs: ಪಾರ್ಟಿ ಆಯೋಜಕ ವೀರೇನ್ ಖನ್ನಾ arrest, ಯಾರು ಈತ?

ಬೆಂಗಳೂರು: ಸ್ಯಾಂಡಲ್​ವುಡ್ ನಶೆ ನಂಟಿನ ಬಗ್ಗೆ ತನಿಖೆ ನಡೆಸುತ್ತಿರುವ CCB ಅಧಿಕಾರಿಗಳಿಂದ ಮತ್ತೋರ್ವ ಆರೋಪಿಯ ಬಂಧನವಾಗಿದೆ. ಪಾರ್ಟಿಗಳನ್ನು ಆಯೋಜಿಸುತ್ತಿದ್ದ ವೀರೇನ್ ಖನ್ನಾ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ಖನ್ನಾ ಅರೆಸ್ಟ್ ಆಗಿದ್ದು,  ಸ್ಯಾಂಡಲ್​ವುಡ್​ನಲ್ಲಿ Drugs ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಸಿಸಿಬಿ ಪೊಲೀಸರು ಒಟ್ಟು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ದೆಹಲಿ‌ ಮೂಲದ ವೀರೇನ್ ಖನ್ನಾ ಬೆಂಗಳೂರಿನ‌ ಖಾಸಗಿ ಕಾಲೇಜಿನಲ್ಲಿ‌ ವ್ಯಾಸಂಗ ಮಾಡಿದ್ದನಂತೆ. ಇಲ್ಲಿಂದಲೇ ಆತನಿಗೆ ಪ್ರತಿಷ್ಠಿತ ನಟ-ನಟಿಯರು ಮತ್ತು ಗಣ್ಯರ ಮಕ್ಕಳ ಸ್ನೇಹ ಸಂಪರ್ಕ ಬೆಳೆದಿದೆ ಎಂದು […]

ಸ್ಯಾಂಡಲ್​ವುಡ್​ನಲ್ಲಿ Drugs: ಪಾರ್ಟಿ ಆಯೋಜಕ ವೀರೇನ್ ಖನ್ನಾ arrest, ಯಾರು ಈತ?

Updated on: Sep 04, 2020 | 7:43 PM

ಬೆಂಗಳೂರು: ಸ್ಯಾಂಡಲ್​ವುಡ್ ನಶೆ ನಂಟಿನ ಬಗ್ಗೆ ತನಿಖೆ ನಡೆಸುತ್ತಿರುವ CCB ಅಧಿಕಾರಿಗಳಿಂದ ಮತ್ತೋರ್ವ ಆರೋಪಿಯ ಬಂಧನವಾಗಿದೆ. ಪಾರ್ಟಿಗಳನ್ನು ಆಯೋಜಿಸುತ್ತಿದ್ದ ವೀರೇನ್ ಖನ್ನಾ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ಖನ್ನಾ ಅರೆಸ್ಟ್ ಆಗಿದ್ದು,  ಸ್ಯಾಂಡಲ್​ವುಡ್​ನಲ್ಲಿ Drugs ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಸಿಸಿಬಿ ಪೊಲೀಸರು ಒಟ್ಟು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ದೆಹಲಿ‌ ಮೂಲದ ವೀರೇನ್ ಖನ್ನಾ ಬೆಂಗಳೂರಿನ‌ ಖಾಸಗಿ ಕಾಲೇಜಿನಲ್ಲಿ‌ ವ್ಯಾಸಂಗ ಮಾಡಿದ್ದನಂತೆ. ಇಲ್ಲಿಂದಲೇ ಆತನಿಗೆ ಪ್ರತಿಷ್ಠಿತ ನಟ-ನಟಿಯರು ಮತ್ತು ಗಣ್ಯರ ಮಕ್ಕಳ ಸ್ನೇಹ ಸಂಪರ್ಕ ಬೆಳೆದಿದೆ ಎಂದು ತಿಳಿದುಬಂದಿದೆ.

ದೊಡ್ಡ ದೊಡ್ಡ ಪಾರ್ಟಿಗಳನ್ನ ಆಯೋಜಿಸುತ್ತಿದ್ದ ವೀರೇನ್ ಖನ್ನಾನ ಬಂಧಿಸಲು CCB ಇನ್​ಸ್ಪೆಕ್ಟರ್​ಗಳು ದೆಹಲಿಗೆ ತೆರಳಿದ್ದರು. CCB ಇನ್​ಸ್ಪೆಕ್ಟರ್​ಗಳಾದ ಶ್ರೀಧರ್ ಮತ್ತು ಲಕ್ಷ್ಮೀಕಾಂತ್ ದೆಹಲಿಗೆ ತೆರಳಿ ವೀರೇನ್ ಖನ್ನಾನನ್ನು ಬಂಧಿಸಿದ್ದಾರೆ.

Published On - 7:31 pm, Fri, 4 September 20