ರಾಗಿಣಿ ಬಂಧನ ಆಗ್ತಾರಾ? ಅರೆಸ್ಟ್ ಆದ್ರೆ ತಕ್ಷಣಕ್ಕೆ ಜಾಮೀನು ಇಲ್ಲ!

ರಾಗಿಣಿ ಬಂಧನ ಆಗ್ತಾರಾ? ಅರೆಸ್ಟ್ ಆದ್ರೆ ತಕ್ಷಣಕ್ಕೆ ಜಾಮೀನು ಇಲ್ಲ!

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಟಿ ರಾಗಿಣಿ ದ್ವಿವೇದಿ ಬೆಂಗಳೂರಿನ 34ನೇ ಸಿಸಿಹೆಚ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಈಗಾಗಲೇ ಪೊಲೀಸ್ ವಿಚಾರಣೆಯಲ್ಲಿರುವ ರಾಗಿಣಿ‌ ಅರ್ಜಿ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ಸೆ.7 ಕ್ಕೆ ಮುಂದೂಡಿದೆ. ಹಾಗಾಗಿ, ಒಂದು ವೇಳೆ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದರೆ ನಿರೀಕ್ಷಣಾ ಜಾಮೀನು ಅರ್ಜಿ ನಿಷ್ಪಲವಾಗಲಿದೆ.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಹಿನ್ನೆಲೆಯಲ್ಲಿ ರಾಗಿಣಿ ಬಂಧನ ಪೊಲೀಸರ ಕೈಯಲ್ಲಿದೆ. ತಮ್ಮನ್ನು ಬಂಧಿಸಿದರೆ ನಟಿ ರಾಗಿಣಿ ಅವರು ಜಾಮೀನು ಕೋರಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಈ ಮಧ್ಯೆ, ನಟಿ ರಾಗಿಣಿ ಬಂಧನ ಸಾಧ್ಯತೆ 50-50 ಎಂದು ಹೇಳಲಾಗುತ್ತಿದೆ. ಇನ್ನು ರಾಗಿಣಿ ಬಂಧನ ಮಾಡುವ ಬಗ್ಗೆ ಸಿಸಿಬಿ ಅಧಿಕಾರಿಗಳು ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಕೇಸ್​ಗೆ ಸಂಬಂಧಿಸಿದಂತೆ ಪೆಪರ್ ವರ್ಕ್ ಸಾಕಷ್ಟು ಬಾಕಿ ಇದೆ ಎಂದು ಮೂಲಗಳು ಹೇಳುತ್ತಿವೆ.

ರಾಗಿಣಿ ವಿರುದ್ಧ ಪ್ರತ್ಯೇಕ, ಸ್ವಯಂಪ್ರೇರಿತ FIR‌ ದಾಖಲಿಸಿದ್ದೇವೆ: ಆಯುಕ್ತ​​ ಕಮಲ್‌ಪಂತ್

Published On - 5:45 pm, Fri, 4 September 20

Click on your DTH Provider to Add TV9 Kannada