ದೆಹಲಿ ಮೂಲದ ಖನ್ನಾ ಡ್ರಗ್ಸ್ ಪಾರ್ಟಿಗಳನ್ನ ಆಯೋಜನೆ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ. ಶುಕ್ರವಾರವಾರದಂದು ಸಿಸಿಬಿಯ ಇಬ್ಬರು ಇನ್ಸ್ಪೆಕ್ಟರ್ಗಳು ಆತನನ್ನು ದೆಹಲಿಯಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದರು.
ಖನ್ನಾನನ್ನು ಸಿಸಿಬಿ ಕಚೇರಿಗೆ ಕರೆತಂದಾಗ ಅವನ ಮುಖದಲ್ಲಿ ಆತಂಕವಾಗಲೀ, ಭಯವಾಗಲೀ ಕಾಣಿಸಲಿಲ್ಲ. ಪೊಲೀಸರ ವಶದಲ್ಲಿದ್ರೂ ಖನ್ನಾ ದರ್ಪದಿಂದ ವರ್ತಿಸುತ್ತಿದ್ದ ಮತ್ತು ಮಾಧ್ಯಮದವರ ಮೇಲೆ ಕೂಗಾಡಿದ. ವಿಚಾರಣೆ ಸಂದರ್ಭದಲ್ಲೂ ಅವನು ಬಾಯಿ ಬಿಚ್ಚುತ್ತಿಲ್ಲವೆಂದು ಮೂಲಗಳಿಂದ ಗೊತ್ತಾಗಿದೆ.