ಬೆಂಗಳೂರು: ಕಟ್ಟಡ ಸಾಮಗ್ರಿ ಪೂರೈಕೆ ಹೆಸರಲ್ಲಿ ವಂಚಿಸುತ್ತಿದ್ದವನನ್ನ ಈಶಾನ್ಯ ವಿಭಾಗದ CEN ಪೊಲೀಸರು ಸೆರೆಹಿಡಿದಿದ್ದಾರೆ. ವಂಚಕ ದಾವೂದ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಿಷ್ಠಿತ ಕಂಪನಿ ಮ್ಯಾನೇಜರ್ ಎಂದು ಪರಿಚಯಿಸಿಕೊಳ್ತಿದ್ದ ದಾವೂದ್ ಪಾಷಾ ಕಟ್ಟಡ ನಿರ್ಮಾಣ ಕಂಪನಿಗಳಿಗೆ ಕಬ್ಬಿಣ, ಸಿಮೆಂಟ್ ಸೇರಿ ಕಚ್ಚಾ ವಸ್ತು ಪೂರೈಸುತ್ತೇನೆ ಎಂದು ಸಂಪರ್ಕಿಸುತ್ತಿದ್ದನಂತೆ. ಬಳಿಕ ಕಟ್ಟಡ ನಿರ್ಮಾಣ ಕಂಪನಿಗಳಿಂದ ಹಣ ಪಡೆದು ವಂಚಿಸ್ತಿದ್ದ ಎಂದು ಹೇಳಲಾಗಿದೆ.
ಅಂತೆಯೇ, ಬಾಲಾಜಿ ಕನ್ಸ್ಟ್ರಕ್ಷನ್ ಅನ್ನೋ ಕಂಪನಿಗೆ ಮೋಸ ಮಾಡಿದ್ದ. ಹಾಗಾಗಿ, ಕಂಪನಿಯವರು CEN ಪೊಲೀಸರಿಗೆ Cyber Crime, Economic Offences & Narcotics Police ದೂರು ನೀಡಿದ್ದರು. ಕಂಪನಿ ನೀಡಿದ ದೂರಿನನ್ವಯ ದಾವೂದ್ ಬಂಧನವಾಗಿದೆ.