ಕೈಗೆ ಚಾಕು ಇರಿದು ಮಾಂಗಲ್ಯ ಸರ ಕದ್ದ ಖದೀಮರು, ಎಲ್ಲಿ?
ಚಿತ್ರದುರ್ಗ: ಮಹಿಳೆ ಕೈಗೆ ಚಾಕು ಇರಿದು ಮಾಂಗಲ್ಯ ಸರ ದರೋಡೆ ಮಾಡಿರುವ ಘಟನೆ ಚಳ್ಳಕೆರೆ ತಾಲೂಕಿನ ಕರೀಕೆರೆ ಗ್ರಾಮದ ಬಳಿ ನಡೆದಿದೆ. ಬೈಕ್ನಲ್ಲಿ ಬಂದಿದ್ದ ಇಬ್ಬರು ಕಳ್ಳರು ಮಹಿಳೆ ಕೈಗೆ ಚಾಕು ಇರಿದು ದರೋಡೆ ಮಾಡಿ ವರಲಕ್ಷ್ಮೀ ಬಳಿ ₹1.40 ಲಕ್ಷ ಮೌಲ್ಯದ 45 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಪತಿ ಶಿವಣ್ಣ ಜತೆ ಬೈಕ್ನಲ್ಲಿ ಗ್ರಾಮಕ್ಕೆ ಮರಳುವಾಗ ಈ ಕೃತ್ಯ ನಡೆದಿದೆ. ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ವರಲಕ್ಷ್ಮೀ ದಾಖಲಾಗಿದ್ದು, ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ […]
ಚಿತ್ರದುರ್ಗ: ಮಹಿಳೆ ಕೈಗೆ ಚಾಕು ಇರಿದು ಮಾಂಗಲ್ಯ ಸರ ದರೋಡೆ ಮಾಡಿರುವ ಘಟನೆ ಚಳ್ಳಕೆರೆ ತಾಲೂಕಿನ ಕರೀಕೆರೆ ಗ್ರಾಮದ ಬಳಿ ನಡೆದಿದೆ.
ಬೈಕ್ನಲ್ಲಿ ಬಂದಿದ್ದ ಇಬ್ಬರು ಕಳ್ಳರು ಮಹಿಳೆ ಕೈಗೆ ಚಾಕು ಇರಿದು ದರೋಡೆ ಮಾಡಿ ವರಲಕ್ಷ್ಮೀ ಬಳಿ ₹1.40 ಲಕ್ಷ ಮೌಲ್ಯದ 45 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಪತಿ ಶಿವಣ್ಣ ಜತೆ ಬೈಕ್ನಲ್ಲಿ ಗ್ರಾಮಕ್ಕೆ ಮರಳುವಾಗ ಈ ಕೃತ್ಯ ನಡೆದಿದೆ. ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ವರಲಕ್ಷ್ಮೀ ದಾಖಲಾಗಿದ್ದು, ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.