AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಗಿಣಿ, ಸಂಜನಾರ ಪಾಪಕೂಪ ಅಗೆದಂತೆಲ್ಲ ಆಳಕ್ಕಿಳಿಯುತ್ತಿದೆ!

ಒಂದೆಡೆ ಅನುಶ್ರೀ ಪ್ರಕರಣ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಂತರ ಹೊಸ ತಿರುವ ಪಡೆದುಕೊಂಡರೆ ಮತ್ತೊಂದೆಡೆ ಜೈಲಿನ ಅತಿಥಿಗಳಾಗಿರುವ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರಿಗೆ ಭೂಗತ ಲೋಕದ ಜೊತಯೂ ನಂಟಿದ್ದ ಭೀತಿ ಹುಟ್ಟಿಸುವ ರಹಸ್ಯ ಬಯಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳುವ ಮೊದಲು ನಟಿಯರಾದ ಸಂಜನಾ ಮತ್ತು ರಾಗಿಣಿ ಜನಸಾಮಾನ್ಯರು ಬೆಚ್ಚಿಬೀಳುವಂಥ ಕೃತ್ಯಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ. ಡ್ರಗ್ಸ್, ಮನಿ ಲಾಂಡರಿಂಗ್ ಮೊದಲಾದ ಕುಕೃತ್ಯಗಳ ಜೊತೆ ಅವರು ಭೂಗತ ಲೋಕದೊಂದಿಗೂ […]

ರಾಗಿಣಿ, ಸಂಜನಾರ ಪಾಪಕೂಪ ಅಗೆದಂತೆಲ್ಲ ಆಳಕ್ಕಿಳಿಯುತ್ತಿದೆ!
ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Oct 03, 2020 | 10:44 PM

Share

ಒಂದೆಡೆ ಅನುಶ್ರೀ ಪ್ರಕರಣ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಂತರ ಹೊಸ ತಿರುವ ಪಡೆದುಕೊಂಡರೆ ಮತ್ತೊಂದೆಡೆ ಜೈಲಿನ ಅತಿಥಿಗಳಾಗಿರುವ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರಿಗೆ ಭೂಗತ ಲೋಕದ ಜೊತಯೂ ನಂಟಿದ್ದ ಭೀತಿ ಹುಟ್ಟಿಸುವ ರಹಸ್ಯ ಬಯಲಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳುವ ಮೊದಲು ನಟಿಯರಾದ ಸಂಜನಾ ಮತ್ತು ರಾಗಿಣಿ ಜನಸಾಮಾನ್ಯರು ಬೆಚ್ಚಿಬೀಳುವಂಥ ಕೃತ್ಯಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ. ಡ್ರಗ್ಸ್, ಮನಿ ಲಾಂಡರಿಂಗ್ ಮೊದಲಾದ ಕುಕೃತ್ಯಗಳ ಜೊತೆ ಅವರು ಭೂಗತ ಲೋಕದೊಂದಿಗೂ ಸಂಬಂಧ ಇಟ್ಟುಕೊಂಡಿರುವ ಭಯಾನಕ ಸಂಗತಿ ಗೊತ್ತಾಗಿದೆ.

ಅಂದಹಾಗೆ, ರಾಗಿಣಿ ಮತ್ತು ಸಂಜನಾ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಭೂಗತ ಲೋಕದ ಲಿಂಕ್ ಇತ್ತೆನ್ನುವ ಮಾಹಿತಿ ಪೊಲೀಸ್ ಮೂಲಗಳಿಂದಲೇ ಹೊರಬಿದ್ದಿದೆ. ನಟಿಯರ ಪಾರ್ಟಿಗಳಲ್ಲಿ ಅಂಡರ್ ವರ್ಲ್ಡ್ ಹಲವಾರು ಸದಸ್ಯರು ಹಾಜರಿರುತ್ತಿದ್ದ, ಲೇಟ್ ನೈಟ್ ಪಾರ್ಟಿಗಳಲ್ಲಿ ನಟೋರಿಯಸ್ ರೌಡಿಗಳ ದಂಡೇ ಭಾಗಿಯಾಗುತ್ತಿದ್ದ ಮಾಹಿತಿ ಲಭ್ಯವಾಗಿದೆ. ಕುಖ್ಯಾತ ರೌಡಿ ಮಸೂರ್ ಅಲಿಯಾಸ್ ಮಸ್ಸಿ, ಇನ್ನೊಬ್ಬ ರೌಡಿಶೀಟರ್ ಇಶ್ತಿಯಾಕ್ ಪೈಲ್ವಾನ್ ನಟಿಯರು ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಮಾಹಿತಿ ದೊರೆತಿದೆ. ಸಂಜನಾ ಆಪ್ತ ರಾಹುಲ್ ಆಯೋಜಿಸಿದ್ದ ಪಾರ್ಟಿಯಲ್ಲೂ ಇಶ್ತಿಯಾಕ್ ಪಾಲ್ಗೊಂಡಿದ್ದನಂತೆ.

ಇದರ ಜೊತೆಗೆ ರಾಗಿಣಿ ಮತ್ತು ಸಂಜನಾ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಎಲ್ಲೆ ಮೀರಿದ ಸ್ವಚ್ಛಂದತೆಯಿರುತ್ತಿದ್ದ ಮಾಹಿತಿ ಕೂಡ ದೊರಕಿದೆ. ಡ್ರಗ್ಸ್​ ಸೇವನೆ ಬಳಿಕ ಪಾರ್ಟಿಗಳಲ್ಲಿ ಭಾಗಿಯಾಗಿದವರು ಲೈಂಗಿಕ ಕ್ರೀಡೆಯಲ್ಲೂ ತೊಡಗುತ್ತಿದ್ದರಂತೆ!

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.