ಏರ್​ ಕಸ್ಟಮ್ಸ್​ ಅಧಿಕಾರಿಗಳ ದಾಳಿ, ಬೆಂಗಳೂರಿನಲ್ಲಿ ಮಲೇಷ್ಯಾ ​ ಪ್ರಜೆ ಅರೆಸ್ಟ್​

| Updated By: ಸಾಧು ಶ್ರೀನಾಥ್​

Updated on: Jun 25, 2020 | 5:31 PM

ಬೆಂಗಳೂರು: ಚೆನ್ನೈ ಏರ್​ಕಸ್ಟಮ್ಸ್​ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಎಂಡಿಎಂಎ ಆರ್ಡರ್ ಮಾಡಿದ್ದ ಭಾರತೀಯ ಮೂಲದ ಮಲೇಷಿಯನ್ ಪ್ರಜೆಯನ್ನು ಬಂಧಿಸಿದ್ದಾರೆ. ಕವಿ ಕುಮಾರ್(25) ಬಂಧಿತ ಆರೋಪಿ. ಆರೋಪಿ ಬೆಂಗಳೂರಿನ ಅಮೇಜಾನ್ ಘಟಕದಲ್ಲಿ ಕ್ವಾಲಿಟಿ ಅನಾಲಿಸಿಸ್ಟ್ ಆಗಿದ್ದ. ಜರ್ಮನಿಯಿಂದ ಎಂಡಿಎಂಎ ಮಾತ್ರೆಗಳನ್ನು ಚೆನ್ನೈಗೆ ಆರ್ಡರ್ ಮಾಡಿದ್ದ. ಲಾಕ್​ಡೌನ್​ನಿಂದ ಚೆನ್ನೈಗೆ ಹೋಗಲಾರದೆ ಕೋರಮಂಗಲದ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ. ಎಂಡಿಎಂಎ ಮಾತ್ರೆಗಳಿದ್ದ ಪಾರ್ಸೆಲ್ ಆರೋಪಿಯ ಚೆನ್ನೈ ವಿಳಾಸಕ್ಕೆ ಬಂದಿತ್ತು. ಏರ್​ಪೋರ್ಟ್​ನಲ್ಲೇ ಮಾತ್ರೆಗಳಿದ್ದ ಪಾರ್ಸೆಲ್​ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದರು. ಬಳಿಕ ಬೆಂಗಳೂರು […]

ಏರ್​ ಕಸ್ಟಮ್ಸ್​ ಅಧಿಕಾರಿಗಳ ದಾಳಿ, ಬೆಂಗಳೂರಿನಲ್ಲಿ ಮಲೇಷ್ಯಾ ​ ಪ್ರಜೆ ಅರೆಸ್ಟ್​
Follow us on

ಬೆಂಗಳೂರು: ಚೆನ್ನೈ ಏರ್​ಕಸ್ಟಮ್ಸ್​ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಎಂಡಿಎಂಎ ಆರ್ಡರ್ ಮಾಡಿದ್ದ ಭಾರತೀಯ ಮೂಲದ ಮಲೇಷಿಯನ್ ಪ್ರಜೆಯನ್ನು ಬಂಧಿಸಿದ್ದಾರೆ. ಕವಿ ಕುಮಾರ್(25) ಬಂಧಿತ ಆರೋಪಿ.

ಆರೋಪಿ ಬೆಂಗಳೂರಿನ ಅಮೇಜಾನ್ ಘಟಕದಲ್ಲಿ ಕ್ವಾಲಿಟಿ ಅನಾಲಿಸಿಸ್ಟ್ ಆಗಿದ್ದ. ಜರ್ಮನಿಯಿಂದ ಎಂಡಿಎಂಎ ಮಾತ್ರೆಗಳನ್ನು ಚೆನ್ನೈಗೆ ಆರ್ಡರ್ ಮಾಡಿದ್ದ. ಲಾಕ್​ಡೌನ್​ನಿಂದ ಚೆನ್ನೈಗೆ ಹೋಗಲಾರದೆ ಕೋರಮಂಗಲದ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ.

ಎಂಡಿಎಂಎ ಮಾತ್ರೆಗಳಿದ್ದ ಪಾರ್ಸೆಲ್ ಆರೋಪಿಯ ಚೆನ್ನೈ ವಿಳಾಸಕ್ಕೆ ಬಂದಿತ್ತು. ಏರ್​ಪೋರ್ಟ್​ನಲ್ಲೇ ಮಾತ್ರೆಗಳಿದ್ದ ಪಾರ್ಸೆಲ್​ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದರು. ಬಳಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬಳಿ 3 ಲಕ್ಷ ಮೌಲ್ಯದ ಎಂಡಿಎಂಎ ಮಾತ್ರೆಗಳನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Published On - 5:24 pm, Thu, 25 June 20