ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿ, ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದ ಅಪ್ಪ-ಅಮ್ಮ

|

Updated on: Jan 17, 2025 | 8:34 PM

ತಮ್ಮ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿ, ಆಕೆಯ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದ ಆರೋಪದ ಮೇಲೆ ಚೆನ್ನೈ ಮೂಲದ ದಂಪತಿಯನ್ನು ಬಂಧಿಸಲಾಗಿದೆ. ಚೆನ್ನೈ ಪೊಲೀಸರ ಪ್ರಕಾರ, ಆ ವ್ಯಕ್ತಿ ತನ್ನ ಹೆಂಡತಿಯ ಸಹಾಯದಿಂದ ತನ್ನ ಸ್ವಂತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ್ದಾನೆ. ಅಲ್ಲದೆ, ಅಪ್ರಾಪ್ತ ಹುಡುಗಿಯರ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಚಿತ್ರೀಕರಿಸಿದ್ದಾನೆ.

ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿ, ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದ ಅಪ್ಪ-ಅಮ್ಮ
Harassment
Follow us on

ಚೆನ್ನೈ: ತಮ್ಮ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ ಮತ್ತು ಅಶ್ಲೀಲ ಫೋಟೋಗಳು, ವೀಡಿಯೊಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಚೆನ್ನೈನಲ್ಲಿ ದಂಪತಿಯನ್ನು ಬಂಧಿಸಲಾಗಿದೆ. ಅವರಿಬ್ಬರೂ ಹಣ ಸಂಪಾದಿಸಲು ಆ ಫೋಟೋ, ವಿಡಿಯೋಗಳನ್ನು ಇಂಟರ್ನೆಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು ಎನ್ನಲಾಗಿದೆ.

ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ದೂರು ದಾಖಲಿಸಿದ ನಂತರ, ಪೊಲೀಸ್ ತಂಡವು ಆ ದಂಪತಿಯನ್ನು ಪತ್ತೆಹಚ್ಚಿತು. ಪೊಲೀಸರು ಆರೋಪಿಗಳಲ್ಲಿ ಒಬ್ಬರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡರು. ಅದರಲ್ಲಿ ಅಪ್ರಾಪ್ತ ಹುಡುಗಿಯರ ಹಲವಾರು ಅಶ್ಲೀಲ ವೀಡಿಯೊ ತುಣುಕುಗಳು ಕಂಡುಬಂದಿವೆ.

ಇದನ್ನೂ ಓದಿ: ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಹೆಚ್ಚಿನ ವೀಡಿಯೊಗಳನ್ನು ಹುಡುಗಿಯರ ಒಪ್ಪಿಗೆಯಿಲ್ಲದೆ ಗುಪ್ತ ಕ್ಯಾಮೆರಾದಂತೆ ಕಾಣುವ ಕ್ಯಾಮೆರಾದ ಮೂಲಕ ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಿದಾಗ ಉದ್ಯಮಿ ಮತ್ತು ಅವರ ಪತ್ನಿ ತಮ್ಮ ಸ್ವಂತ ಮಗಳನ್ನು ಕೂಡ ವೇಶ್ಯಾವಾಟಿಕೆಗೆ ದೂಡಿದ್ದಾರೆ ಮತ್ತು ಅವಳ ವಿಡಿಯೋವನ್ನು ಕೂಡ ಇತರ ಹುಡುಗಿಯರೊಂದಿಗೆ ಚಿತ್ರೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬುರ್ಖಾ ಧರಿಸಿದ ಪ್ರೇಯಸಿಯೊಂದಿಗಿದ್ದ ಗಂಡನನ್ನು ಹಿಡಿದು ರಸ್ತೆಯಲ್ಲೇ ಥಳಿಸಿದ ಹೆಂಡತಿ

ಪೊಲೀಸ್ ತಂಡ ದಂಪತಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿತು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಅಪ್ರಾಪ್ತ ಬಾಲಕಿಯನ್ನು ಸರ್ಕಾರಿ ಆರೈಕೆ ಕೇಂದ್ರದಲ್ಲಿ ಇರಿಸಲಾಗಿದ್ದು, ಆಕೆ ಅನುಭವಿಸಿದ ಆಘಾತಕ್ಕೆ ಕೌನ್ಸೆಲಿಂಗ್ ಜೊತೆಗೆ ಇತರ ಅಗತ್ಯ ಬೆಂಬಲವನ್ನು ನೀಡಲಾಗಿದೆ. ಆರೋಪಿ ದಂಪತಿಗಳ ಮೊಬೈಲ್ ಫೋನ್ ಮತ್ತು ಇತರ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ