ಚಿಕ್ಕಬಳ್ಳಾಪುರ ಸಾಫ್ಟ್​ವೇರ್​ ಇಂಜಿನಿಯರ್ ಕಿಡ್ನಾಪ್​: ಸುಪಾರಿ ನೀಡಿದ್ದ ಪ್ರಿಯತಮೆ ಅಂದರ್​, ಪ್ರಕರಣದ ರೋಚಕ ಕಹಾನಿ ಇಲ್ಲಿದೆ

|

Updated on: Jun 25, 2023 | 1:12 PM

ಸಾಫ್ಟ್​ವೇರ್​ ಇಂಜಿನಿಯರ್ ವಿಜಯಸಿಂಗ್ ಅವರನ್ನು ಅಪಹರಿಸಿ​ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳನ್ನು ಚಿಕ್ಕಬಳ್ಳಾಪುರದ ನಂದಿಗಿರಿಧಾಮ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ಸಾಫ್ಟ್​ವೇರ್​ ಇಂಜಿನಿಯರ್ ಕಿಡ್ನಾಪ್​: ಸುಪಾರಿ ನೀಡಿದ್ದ ಪ್ರಿಯತಮೆ ಅಂದರ್​, ಪ್ರಕರಣದ ರೋಚಕ ಕಹಾನಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಚಿಕ್ಕಬಳ್ಳಾಪುರ: ಸಾಫ್ಟ್​ವೇರ್​ ಇಂಜಿನಿಯರ್ (Shoftwer Engeneer) ವಿಜಯಸಿಂಗ್ ಅವರನ್ನು ಅಪಹರಿಸಿ​ (Kidnap) ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳನ್ನು ಚಿಕ್ಕಬಳ್ಳಾಪುರದ (Chikkaballapur) ನಂದಿಗಿರಿಧಾಮ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಭಾವನಾ ರೆಡ್ಡಿ, ಪುಲ್ಲಾರೆಡ್ಡಿ ಬಂಧಿತ ಆರೋಪಿಗಳು.

ಮೂಲತಃ ಆಂಧ್ರ ಪ್ರದೇಶದ ಅನಂತಪುರ ನಿವಾಸಿಯಾಗಿರುವ ವಿಜಯಸಿಂಗ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಭಾವನಾ ರೆಡ್ಡಿ ಎಂಬುವರನ್ನು ಪ್ರೀತಿಸುತ್ತಿದ್ದರು. ಆದರೆ ಪ್ರಿಯತಮೆ ಭಾವನಾ ರೆಡ್ಡಿಯೇ ಕೆಲ ದುಷ್ಕರ್ಮಿಗಳಿಗೆ ವಿಜಯಸಿಂಗ್​ ಅವರನ್ನು ಕಿಡ್ನಾಪ್​ ಮಾಡಲು ಸುಪಾರಿ ನೀಡಿದ್ದಳು.

ಅದರಂತೆ ಕಿಡಿಗೇಡಿಗಳು ಜೂನ್ 16ರಂದು ಪ್ರಿಯತಮೆ ಭಾವನಾ ರೆಡ್ಡಿ ಮೂಲಕ ದೇವನಹಳ್ಳಿಗೆ ಕರೆಸಿಕೊಂಡಿದ್ದಾರೆ. ನಂತರ ಅಲ್ಲಿಂದ ಅಪಹರಿಸಿ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ಬಳಿಯ ರೆಸಾರ್ಟ್​ನಲ್ಲಿ ಕೂಡಿಹಾಕಿದ್ದಾರೆ. ಬಳಿಕ ಜೂನ್ 18ರ ವರೆಗೂ ಮೂರು ದಿನಗಳ ಕಾಲ ಚಿತ್ರ ಹಿಂಸೆ ನೀಡಿದ್ದಾರೆ.

ನಂತರ 2 ಲ್ಯಾಪ್​ಟಾಪ್, 3 ಮೊಬೈಲ್​, 12 ಗ್ರಾಂ ಚಿನ್ನದ ಸರ ಕಸಿದು ಕೊನೆಗೆ 21 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ವಿಜಯಸಿಂಗ್ ಪ್ರಿಯತಮೆ ಸೇರಿ 6 ಮಂದಿ ವಿರುದ್ಧ ಚಿಕ್ಕಬಳ್ಳಾಪುರದ ನಂದಿಗಿರಿಧಾಮ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಬೆನ್ನು ಬಹತ್ತಿದ ಪೊಲೀಸರಿಗೆ ಭಾವನಾ ರೆಡ್ಡಿ, ಪುಲ್ಲಾರೆಡ್ಡಿ ಅಡಗಿರುವ ತಾಣ ತಿಳಿದಿದ್ದು, ಈ ಇಬ್ಬರು ಹುಬ್ಬಳ್ಳಿಯ ಖಾಸಗಿ ಹೋಟೆಲ್​ವೊಂದರಲ್ಲಿ ಇರುವುದು ಗೊತ್ತಿಗಿದೆ. ಪೊಲೀಸರು ಹುಬ್ಬಳ್ಳಿಗೆ ತೆರಳಿ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ. ಇನ್ನುಳಿದ ಸುಬ್ರಮಣಿ, ನಾಗೇಶ್ ರೆಡ್ಡಿ, ಸಿದ್ದೇಶ, ಸುಧೀರ್​​ಗಾಗಿ ಹುಡುಕಾಟ ನಡೆಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:12 pm, Sun, 25 June 23