
ಬೆಂಗಳೂರು: ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ನಿರ್ಬಂಧದ ನಡುವೆಯೂ ಸಿಗರೇಟ್ ಹಗರಣ ಪ್ರಕರಣ ಸಂಬಂಧ ಆರೋಪಿ ಎಸಿಪಿ ಪ್ರಭುಶಂಕರ್ಗೆ ಬಿಗ್ ರಿಲೀಫ್ ದೊರೆತಿದೆ. ಪ್ರಭುಶಂಕರ್ ವಿರುದ್ಧದ ಎಸಿಬಿ ಕೇಸ್ಗೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಒಂದೇ ಆರೋಪಕ್ಕೆ ಪೊಲೀಸರು ಹಾಗೂ ಎಸಿಬಿ ಎಫ್ಐಆರ್ ದಾಖಲಿಸಿದ್ದಾರೆ. ಕಾನೂನು ಬಾಹಿರವಾಗಿ ಎಫ್ಐಆರ್ ದಾಖಲಿಸಿದ್ದಾರೆಂದು ಆರೋಪಿ ಎಸಿಪಿ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಎಸಿಬಿ FIRಗೂ ಹೈಕೋರ್ಟ್ ತಡೆ ಕೊಟ್ಟಿದೆ.
Published On - 12:24 pm, Thu, 4 June 20