ಟಾಯ್ಲೆಟ್ಗೆ ಹೋಗ್ಬೇಕು ಬಸ್ ನಿಲ್ಲಿಸಿ ಎಂದಿದ್ದಕ್ಕೆ ಕೋಪಗೊಂಡ ಕಂಡಕ್ಟರ್ ಕಾರ್ಮಿಕರೊಬ್ಬರನ್ನು ಬಸ್ನಿಂದ ಹೊರಗೆ ತಳ್ಳಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಕಾರ್ಮಿಕ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾರೆ, ಆ ಬಸ್ ಡಬಲ್ ಡೆಕ್ಕರ್ ಆಗಿತ್ತು, ಜೈಪುರಕ್ಕೆ ಹೋಗುತ್ತಿತ್ತು. ಅದೇ ವೇಳೆ ಅಲ್ಲೇ ಚಲಿಸುತ್ತಿದ್ದ ಕೆಲವು ವಾಹನ ಚಾಲಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ತಕ್ಷಣವೇ ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಮಿಕರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಸ್ ಚಾಲಕ ಮತ್ತು ಕಂಡಕ್ಟರ್ ತಲೆಮರೆಸಿಕೊಂಡಿದ್ದಾರೆ. ಪಿಲಿಭಿತ್‌ನ ಜೆಹಾನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಗರ ಗ್ರಾಮದ ನಿವಾಸಿ ವಿಜಯಪಾಲ್ ದೀಪಾವಳಿಯಂದು ಮನೆಗೆ ಬಂದಿದ್ದರು. ರಾಜಸ್ಥಾನದ ಜೈಪುರಕ್ಕೆ ಕೂಲಿ ಕೆಲಸಕ್ಕೆಂದು ಮನೆಯಿಂದ ಹೋಗುತ್ತಿದ್ದರು.ವಿಜಯಪಾಲ್ ಡಬಲ್ ಡೆಕ್ಕರ್ ಖಾಸಗಿ ಬಸ್‌ನಲ್ಲಿ ಕುಟುಂಬ ಸಮೇತ ಜೈಪುರಕ್ಕೆ ತೆರಳಿದ್ದರು ಎಂದು ಹೇಳಲಾಗುತ್ತಿದೆ.
ತಡರಾತ್ರಿ ಬಸ್ ಬರೇಲಿಗೆ ಬಂದಿದ್ದು, ಮಾರ್ಗಮಧ್ಯೆ ವಿಜಯಪಾಲ್ ಅವರಿಗೆ ಮೂತ್ರ ವಿಸರ್ಜನೆ ಮಾಡಬೇಕೆನಿಸಿತು, ಆಗ ಬಸ್ ನಿಲ್ಲಿಸುವಂತೆ ಕಂಡಕ್ಟರ್‌ಗೆ ಕೇಳಿದಾಗ ಅವರು ನಿರಾಕರಿಸಿದ್ದಾರೆ. ಪದೇ ಪದೇ ಕೇಳಿದಾಗ ಬಸ್ ಬರೇಲಿ ಪಿಲಿಭಿತ್‌ನ ತಲುಪಿದ ತಕ್ಷಣ ಕಂಡಕ್ಟರ್ ಕಾರ್ಮಿಕನನ್ನು ಬಸ್ ಇಂದ ತಳ್ಳಿದ್ದಾರೆ. ವಿಜಯಪಾಲ್ ಬಸ್ನ ಹಿಂಬದಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: ಕೇರಳದಲ್ಲಿ ಇಸ್ರೇಲಿ ಮಹಿಳೆ ಮನೆಯಲ್ಲಿಯೇ ಶವವಾಗಿ ಪತ್ತೆ, ಕೊಲೆ ಶಂಕೆ
ರಕ್ತದಲ್ಲಿ ಮಡುವಿನಲ್ಲಿ ನೆಲದ ಮೇಲೆ ಬಿದ್ದಿದ್ದ ವಿಜಯ್ ಪಾಲ್ ಅವರನ್ನು ನೋಡಿದ ಪತ್ನಿಗೆ ಪ್ರಜ್ಞೆ ತಪ್ಪಿತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಲಿ ಕಾರ್ಮಿಕನ ಕುಟುಂಬದವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕಾರ್ಮಿಕನ ಸಾವಿನ ನಂತರ ಸುದೀರ್ಘ ಟ್ರಾಫಿಕ್ ಜಾಮ್ ಉಂಟಾಗಿತ್ತು, ಕೋಪಗೊಂಡ ಜನರು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಬಸ್ ಚಾಲಕ ಹಾಗೂ ಕಂಡಕ್ಟರ್ ನನ್ನು ಬಂಧಿಸುವಂತೆ ಕುಟುಂಬಸ್ಥರು ಪಟ್ಟು ಹಿಡಿದಿದ್ದರು.ಪೊಲೀಸರು ಹೇಗೋ ಜನರನ್ನು ಒಪ್ಪಿಸಿ ಸಮಾಧಾನಪಡಿಸಿದರು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ