AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದಲ್ಲಿ ಇಸ್ರೇಲಿ ಮಹಿಳೆ ಮನೆಯಲ್ಲಿಯೇ ಶವವಾಗಿ ಪತ್ತೆ, ಕೊಲೆ ಶಂಕೆ

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಇಸ್ರೇಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಅವರ ಮನೆಯಲ್ಲಿಯೇ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮಹಿಳೆ ಲಿವ್ ಇನ್ ಸಂಗಾತಿಯ ಮೇಲೆ ಅನುಮಾನ ಮೂಡಿದೆ.ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಸಾವು
ನಯನಾ ರಾಜೀವ್
|

Updated on: Dec 01, 2023 | 10:09 AM

Share

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಇಸ್ರೇಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಅವರ ಮನೆಯಲ್ಲಿಯೇ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮಹಿಳೆ ಲಿವ್ ಇನ್ ಸಂಗಾತಿಯ ಮೇಲೆ ಅನುಮಾನ ಮೂಡಿದೆ.ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಆರೋಪಿಯು ಯೋಗ ಶಿಕ್ಷಕ ಎಂದು ತನ್ನನ್ನು ತಾನು ಗುರುತಿಸಿಕೊಂಡಿದ್ದಾನೆ. ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಈ ನಿರ್ಧಾರದ ಭಾಗವಾಗಿ ಮಹಿಳೆಯ ಕತ್ತು ಸೀಳಿದ್ದಾನೆ. ತನ್ನ ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದುಕೊಂಡಿದ್ದಾನೆ.

ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರ ಕಣ್ಗಾವಲಿನಲ್ಲಿದ್ದಾನೆ. ಮಹಿಳೆಯ ಕುತ್ತಿಗೆ ಭಾಗವನ್ನು ಹೊರತುಪಡಿಸಿ ಆಕೆಯ ದೇಹದ ಇತರೆ ಭಾಗಗಳಲ್ಲಿ ಚಾಕು ಇರಿತದ ಗಾಯಗಳಿವೆ.

ಮತ್ತಷ್ಟು ಓದಿ: ತುಮಕೂರು: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣು

ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎನ್ನಲಾಗಿದೆ, ಆರೋಪಿಯ ಸಂಬಂಧಿಯೊಬ್ಬರು ಇಬ್ಬರು ಗಾಯಗೊಂಡಿರುವುದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ ಮಹಿಳೆ ಖಿನ್ನತೆಗೆ ಒಳಗಾಗಿದ್ದಳು, ಯೋಗಾಭ್ಯಾಸ ಮಾಡಿದರೂ ಕೂಡ ಆರೋಗ್ಯ ಸ್ಥಿತಿ ಹಾಗೆಯೇ ಇತ್ತು ಎನ್ನುವ ವಿಚಾರ ತಿಳಿದುಬಂದಿದೆ. ಆರೋಪಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ

ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ

ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ

ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ

ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ

ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ

ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ

ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ

ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ

ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ