ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೂ ನಗರದಲ್ಲಿ ಮಾದಕ ವಸ್ತುಗಳ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ದಂಧೆಗೆ ಕಡಿವಾಣ ಹಾಕಲು ಪಣತೊಟ್ಟಿರುವ ಪೊಲೀಸರು ಇಂದು ಸಹ ಡ್ರಗ್ ಪೆಡ್ಲರ್ಸ್ಗಳ ವಿರುದ್ಧ ತಮ್ಮ ಕಾರ್ಯಾಚರಣೆ ಮುಂದುವರಿಸಿ ನಗರದ ನಾನಾ ಭಾಗಗಳಲ್ಲಿ ಅವರನ್ನು ಬಂಧಿಸಿದ್ದಾರೆ.
ಬೆಂಗಳೂರು ಪೂರ್ವ ವಿಭಾಗದಲ್ಲಿ 14 ಜನರನ್ನು ಬಂಧಿಸಲಾಗಿದ್ದು, ದಕ್ಷಿಣ ವಿಭಾಗದಲ್ಲಿ 19 ಆರೋಪಿಗಳನ್ನ ತಮ್ಮ ವಶಕ್ಕೆ ಪಡೆದಿದ್ದಾರೆ. ಬಾಣಸವಾಡಿಯಲ್ಲಿ 2 ಜನ ಪೊಲೀಸರ ಬಲೆಗೆ ಬಿದ್ದಿದ್ದರೆ, ಇನ್ನ ಡಿಜೆ ಹಳ್ಳಿಯಲ್ಲಿ 2, ಜೆ.ಬಿ ನಗರದಲ್ಲಿ 5, ಪುಲಿಕೇಶಿ ನಗರದಲ್ಲಿ 2, ಹೆಣ್ಣೂರಿನಲ್ಲಿ 3, ತಲಘಟ್ಟಪುರದಲ್ಲಿ 3 ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ.
ಜೊತೆಗೆ, ಜಯನಗರದಲ್ಲಿ 5, ಕೋಣನಕುಂಟೆಯಲ್ಲಿ 2, ಹನುಮಂತ ನಗರದಲ್ಲಿ 1, ಸುಬ್ರಹ್ಮಣ್ಯಪುರದಲ್ಲಿ 3, ಕೆ.ಎಸ್ ಲೇಔಟ್ ನಲ್ಲಿ 2, ಪುಟ್ಟೇನಹಳ್ಳಿಯಲ್ಲಿ 2 ಡ್ರಗ್ ಪೆಡ್ಲರ್ಸ್ ಗಳನ್ನು ಬಂಧಿಸಿದ್ದು, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
Published On - 6:27 pm, Mon, 27 July 20