ಲಾಕ್ಡೌನ್ ಉಲ್ಲಂಘಿಸಿ ಕಾರು ಅಪಘಾತ: KAS ಅಧಿಕಾರಿ ವಿರುದ್ಧ FIR
ಬೆಂಗಳೂರು: ಸಂಡೇ ಲಾಕ್ಡೌನ್ ಉಲ್ಲಂಘಿಸಿದ್ದ KAS ಅಧಿಕಾರಿ ವಿರುದ್ಧ FIR ದಾಖಲಿಸಲಾಗಿದೆ. ಟಿವಿ 9 ವರದಿ ಬಳಿಕ ಅಲರ್ಟ್ ಆದ ಕೆ.ಆರ್. ಪುರಂ ಸಂಚಾರಿ ಪೊಲೀಸರು KAS ಅಧಿಕಾರಿ ಡಾ.ಕೆ.ಎನ್.ಅನುರಾಧಾ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ. ಡಾ.ಕೆ.ಎನ್.ಅನುರಾಧಾ KIADB ಯಲ್ಲಿ ADC ಅಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜುಲೈ 26 ರ ಭಾನುವಾರ ಸಂಡೇ ಲಾಕ್ಡೌನ್ ವೇಳೆ ತಮ್ಮ ಖಾಸಗಿ ಕಾರಿನಲ್ಲಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಈಡಾಗಿದ್ದರು. ಇದನ್ನೂ ಓದಿ: ಕಾರು ಅಪಘಾತದಲ್ಲಿ KAS ಅಧಿಕಾರಿ ಪ್ರಾಣಾಪಾಯದಿಂದ […]
ಬೆಂಗಳೂರು: ಸಂಡೇ ಲಾಕ್ಡೌನ್ ಉಲ್ಲಂಘಿಸಿದ್ದ KAS ಅಧಿಕಾರಿ ವಿರುದ್ಧ FIR ದಾಖಲಿಸಲಾಗಿದೆ. ಟಿವಿ 9 ವರದಿ ಬಳಿಕ ಅಲರ್ಟ್ ಆದ ಕೆ.ಆರ್. ಪುರಂ ಸಂಚಾರಿ ಪೊಲೀಸರು KAS ಅಧಿಕಾರಿ ಡಾ.ಕೆ.ಎನ್.ಅನುರಾಧಾ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ.
ಡಾ.ಕೆ.ಎನ್.ಅನುರಾಧಾ KIADB ಯಲ್ಲಿ ADC ಅಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜುಲೈ 26 ರ ಭಾನುವಾರ ಸಂಡೇ ಲಾಕ್ಡೌನ್ ವೇಳೆ ತಮ್ಮ ಖಾಸಗಿ ಕಾರಿನಲ್ಲಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಈಡಾಗಿದ್ದರು. ಇದನ್ನೂ ಓದಿ: ಕಾರು ಅಪಘಾತದಲ್ಲಿ KAS ಅಧಿಕಾರಿ ಪ್ರಾಣಾಪಾಯದಿಂದ ಪಾರು, ಎಲ್ಲಿ?
ಹೀಗಾಗಿ, ಕಾರನ್ನು ವಶಕ್ಕೆ ಪಡೆದು ಐಪಿಸಿ ಸೆಕ್ಷನ್ 279, 337 ಅಡಿ FIR ದಾಖಲಿಸಿರುವ ಕೆ.ಆರ್. ಪುರಂ ಸಂಚಾರಿ ಪೊಲೀಸರು ರಾಮಮೂರ್ತಿನಗರ ಠಾಣೆಗೆ ವರದಿ ನೀಡಿದ್ದಾರೆ. ಲಾಕ್ಡೌನ್ ನಿಯಮಾವಳಿ ಉಲ್ಲಂಘನೆ ಹಿನ್ನೆಲೆಯಲ್ಲಿ NDMA ಕಾಯ್ದೆ ಅಡಿ ಮತ್ತೊಂದು ಕೇಸ್ ದಾಖಲಿಸುವಂತೆ ವರದಿ ನೀಡಿದ್ದಾರೆ. ಇದೀಗ, ನ್ಯಾಯಾಲಯದ ಅನುಮತಿ ಬಳಿಕ ಡಾ. ಅನುರಾಧ ವಿರುದ್ಧ ಕೇಸ್ ದಾಖಲಿಸಲು ರಾಮಮೂರ್ತಿನಗರ ಠಾಣೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.
Published On - 12:18 pm, Tue, 28 July 20