ಮಾದಕವಸ್ತು ದಂಧೆಕೋರರ ವಿರುದ್ಧ ಮತ್ತೆ ಬೆಂಗಳೂರು ಪೊಲೀಸರ ಕಾರ್ಯಾಚರಣೆ

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೂ ನಗರದಲ್ಲಿ ಮಾದಕ ವಸ್ತುಗಳ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ದಂಧೆಗೆ ಕಡಿವಾಣ ಹಾಕಲು ಪಣತೊಟ್ಟಿರುವ ಪೊಲೀಸರು ಇಂದು ಸಹ ಡ್ರಗ್ ಪೆಡ್ಲರ್ಸ್​ಗಳ ವಿರುದ್ಧ ತಮ್ಮ ಕಾರ್ಯಾಚರಣೆ ಮುಂದುವರಿಸಿ ನಗರದ ನಾನಾ ಭಾಗಗಳಲ್ಲಿ ಅವರನ್ನು ಬಂಧಿಸಿದ್ದಾರೆ. ಬೆಂಗಳೂರು ಪೂರ್ವ ವಿಭಾಗದಲ್ಲಿ 14 ಜನರನ್ನು ಬಂಧಿಸಲಾಗಿದ್ದು, ದಕ್ಷಿಣ ವಿಭಾಗದಲ್ಲಿ 19 ಆರೋಪಿಗಳನ್ನ ತಮ್ಮ ವಶಕ್ಕೆ ಪಡೆದಿದ್ದಾರೆ. ಬಾಣಸವಾಡಿಯಲ್ಲಿ 2 ಜನ ಪೊಲೀಸರ ಬಲೆಗೆ ಬಿದ್ದಿದ್ದರೆ, ಇನ್ನ ಡಿಜೆ ಹಳ್ಳಿಯಲ್ಲಿ 2, ಜೆ.ಬಿ ನಗರದಲ್ಲಿ […]

ಮಾದಕವಸ್ತು ದಂಧೆಕೋರರ ವಿರುದ್ಧ ಮತ್ತೆ ಬೆಂಗಳೂರು ಪೊಲೀಸರ ಕಾರ್ಯಾಚರಣೆ
Follow us
ಸಾಧು ಶ್ರೀನಾಥ್​
| Updated By:

Updated on:Jul 28, 2020 | 12:59 AM

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೂ ನಗರದಲ್ಲಿ ಮಾದಕ ವಸ್ತುಗಳ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ದಂಧೆಗೆ ಕಡಿವಾಣ ಹಾಕಲು ಪಣತೊಟ್ಟಿರುವ ಪೊಲೀಸರು ಇಂದು ಸಹ ಡ್ರಗ್ ಪೆಡ್ಲರ್ಸ್​ಗಳ ವಿರುದ್ಧ ತಮ್ಮ ಕಾರ್ಯಾಚರಣೆ ಮುಂದುವರಿಸಿ ನಗರದ ನಾನಾ ಭಾಗಗಳಲ್ಲಿ ಅವರನ್ನು ಬಂಧಿಸಿದ್ದಾರೆ.

ಬೆಂಗಳೂರು ಪೂರ್ವ ವಿಭಾಗದಲ್ಲಿ 14 ಜನರನ್ನು ಬಂಧಿಸಲಾಗಿದ್ದು, ದಕ್ಷಿಣ ವಿಭಾಗದಲ್ಲಿ 19 ಆರೋಪಿಗಳನ್ನ ತಮ್ಮ ವಶಕ್ಕೆ ಪಡೆದಿದ್ದಾರೆ. ಬಾಣಸವಾಡಿಯಲ್ಲಿ 2 ಜನ ಪೊಲೀಸರ ಬಲೆಗೆ ಬಿದ್ದಿದ್ದರೆ, ಇನ್ನ ಡಿಜೆ ಹಳ್ಳಿಯಲ್ಲಿ 2, ಜೆ.ಬಿ ನಗರದಲ್ಲಿ 5, ಪುಲಿಕೇಶಿ ನಗರದಲ್ಲಿ 2, ಹೆಣ್ಣೂರಿನಲ್ಲಿ 3, ತಲಘಟ್ಟಪುರದಲ್ಲಿ 3 ಆರೋಪಿಗಳನ್ನ ಅರೆಸ್ಟ್​ ಮಾಡಲಾಗಿದೆ.

ಜೊತೆಗೆ, ಜಯನಗರದಲ್ಲಿ 5, ಕೋಣನಕುಂಟೆಯಲ್ಲಿ 2, ಹನುಮಂತ ನಗರದಲ್ಲಿ 1, ಸುಬ್ರಹ್ಮಣ್ಯಪುರದಲ್ಲಿ 3, ಕೆ.ಎಸ್ ಲೇಔಟ್ ನಲ್ಲಿ 2, ಪುಟ್ಟೇನಹಳ್ಳಿಯಲ್ಲಿ 2 ಡ್ರಗ್ ಪೆಡ್ಲರ್ಸ್ ಗಳನ್ನು ಬಂಧಿಸಿದ್ದು, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Published On - 6:27 pm, Mon, 27 July 20