ಅಪ್ರಾಪ್ತರ ಅಶ್ಲೀಲ ವಿಡಿಯೋ ಮಾರಾಟ ಮಾಡ್ತಿದ್ದ ಅಯೋಗ್ಯ.. ಖಾಕಿ ವಶಕ್ಕೆ
ಬೆಂಗಳೂರು: ಆನ್‌ಲೈನ್‌ನಲ್ಲಿ ಅಪ್ರಾಪ್ತ ವಯಸ್ಸಿನವರ ಅಶ್ಲೀಲ ವಿಡಿಯೋಗಳನ್ನ ಮಾರಾಟ ಮಾಡುತ್ತಿದ್ದವನನ್ನ ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ಮೂಲದ ಸೌರವ್ ಶೆಟ್ಟಿ (21) ಬಂಧಿತ ಆರೋಪಿ. Instagram ಮೂಲಕ ಅಪ್ರಾಪ್ತ ವಯಸ್ಸಿನವರ ಅಶ್ಲೀಲ ವಿಡಿಯೋಗಳಿರುವ ಲಿಂಕ್ಗಳನ್ನ ಆರೋಪಿ ಗ್ರಾಹಕರೊಂದಿಗೆ ಶೇರ್ ಮಾಡ್ತಿದ್ದ ಎಂದು ತಿಳಿದುಬಂದಿದೆ. ಇನ್ನು ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕದ (NCRB) ಮಾಹಿತಿಯನ್ನ ಆಧರಿಸಿ ಸೈಬರ್ ಕ್ರೈಂ ವಿಭಾಗದಲ್ಲಿ ದೂರು ದಾಖಲಾಗಿತ್ತು. ಬಂಧಿತ ಆರೋಪಿಯ ತನಿಖೆ ವೇಳೆ ಆತನ ಆನ್‌ಲೈನ್ ಸ್ಟೋರೇಜ್ನಲ್ಲೂ ಇಂಥದ್ದೆ ಸಾಕಷ್ಟು […]
ಬೆಂಗಳೂರು: ಆನ್‌ಲೈನ್‌ನಲ್ಲಿ ಅಪ್ರಾಪ್ತ ವಯಸ್ಸಿನವರ ಅಶ್ಲೀಲ ವಿಡಿಯೋಗಳನ್ನ ಮಾರಾಟ ಮಾಡುತ್ತಿದ್ದವನನ್ನ ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ಮೂಲದ ಸೌರವ್ ಶೆಟ್ಟಿ (21) ಬಂಧಿತ ಆರೋಪಿ.
Instagram ಮೂಲಕ ಅಪ್ರಾಪ್ತ ವಯಸ್ಸಿನವರ ಅಶ್ಲೀಲ ವಿಡಿಯೋಗಳಿರುವ ಲಿಂಕ್ಗಳನ್ನ ಆರೋಪಿ ಗ್ರಾಹಕರೊಂದಿಗೆ ಶೇರ್ ಮಾಡ್ತಿದ್ದ ಎಂದು ತಿಳಿದುಬಂದಿದೆ. ಇನ್ನು ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕದ (NCRB) ಮಾಹಿತಿಯನ್ನ ಆಧರಿಸಿ ಸೈಬರ್ ಕ್ರೈಂ ವಿಭಾಗದಲ್ಲಿ ದೂರು ದಾಖಲಾಗಿತ್ತು.
ಬಂಧಿತ ಆರೋಪಿಯ ತನಿಖೆ ವೇಳೆ ಆತನ ಆನ್‌ಲೈನ್ ಸ್ಟೋರೇಜ್ನಲ್ಲೂ ಇಂಥದ್ದೆ ಸಾಕಷ್ಟು ವಿಡಿಯೋಗಳನ್ನ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಜೊತೆಗೆ, ಆರೋಪಿಯ ಡಿಜಿಟಲ್ ಉಪಕರಣಗಳು ಹಾಗೂ ಕ್ಲೌಡ್ ಡಾಟಾ ಖಾತೆ ಸಹ ಜಪ್ತಿ ಮಾಡಲಾಗಿದೆ. ಇದಲ್ಲದೆ, ಪ್ರಕರಣದಲ್ಲಿ ಅನ್ಯ ರಾಜ್ಯಗಳ ಇತರೆ ಆರೋಪಿಗಳೂ ಶಾಮೀಲಾಗಿರುವುದು ಕಂಡು ಬಂದಿದೆ. ಹಾಗಾಗಿ, ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
Published On - 7:14 pm, Tue, 28 July 20