ಬೆಂಗಳೂರು: ಹಲವು ವರ್ಷಗಳ ಹಿಂದೆ ರಾಜ್ಯ ರಾಜಕೀಯವನ್ನೇ ತಲೆಕೆಳಗಾಗಿ ಮಾಡಿದ್ದ ಅತಿದೊಡ್ಡ ಹಗರಣವೆಂದರೆ ಅದು ನಕಲಿ ಛಾಪಾ ಕಾಗದ ಹಗರಣ. ಪ್ರಕರಣದಲ್ಲಿ ಹಲವು ಪ್ರಭಾವಿ ನಾಯಕರ ಹೆಸರು ತಳುಕು ಹಾಕಿದ್ದರೂ ಕೊನೆಗೆ ಹಗರಣದ ಕಿಂಗ್ಪಿನ್ ಅಬ್ದುಲ್ ಕರೀಂ ಲಾಲಾ ತೆಲಗಿಗೆ ಶಿಕ್ಷೆ ಆಗಿತ್ತು. ಆ ನಂತರ, ತೆಲಗಿ ಜೈಲಿನಲ್ಲೇ ಕೊಳೆಯುತ್ತಾ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದ.
ಸ್ವಾರಸ್ಯಕರ ಸಂಗತಿಯೆಂದರೆ ಈ ನಕಲಿ ಛಾಪಾ ಕಾಗದ ದಂಧೆಯ ಕಿಂಗ್ಪಿನ್ ಹೆಸರು ಛೋಟಾ ತೆಲಗಿ! ಹೌದು, ಇದೀಗ ಛೋಟಾ ತೆಲಗಿ ಸೇರಿದಂತೆ ನಾಲ್ವರು ಆರೋಪಿಗಳನ್ನ SJ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಮಾರ್ಗದರ್ಶನದಲ್ಲಿ ಆರೋಪಿಗಳು ಸೆರೆಯಾಗಿದ್ದು ದಂಧೆಯ ಕಿಂಗ್ಪಿನ್ ಆಗಿದ್ದ ಹುಸೇನ್ ಮೋದಿ ಬಾಬು ಅಲಿಯಾಸ್ ಛೋಟಾ ತೆಲಗಿ ಸೇರಿದಂತೆ ಸಿಟಿ ಸಿವಿಲ್ ಕೋರ್ಟ್ ಬಳಿ ಟೈಪ್ರೈಟಿಂಗ್ಮಾಡುತ್ತಿದ್ದ ಹರೀಶ್, ಶವರ್ ಅಲಿಯಾಸ್ ಸೀಮಾ ಹಾಗೂ ಕಂದಾಯ ಭವನದಲ್ಲಿ ಟೈಪಿಸ್ಟ್ ಆಗಿದ್ದ ನಜ್ಮಾ ಫಾತಿಮಾರನ್ನು ಖಾಕಿ ಪಡೆ ಅರೆಸ್ಟ್ ಮಾಡಿದೆ.
Published On - 4:05 pm, Sat, 10 October 20