ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ ನೇಪಾಳ ಮೂಲದವರ ಬಂಧನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2021 | 7:13 PM

ಸಂಚು ರೂಪಿಸಿ ಮನೆ ಮಾಲೀಕರನ್ನು ಬೆದರಿಸಿದ ಹಿನ್ನೆಲೆಯಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳದ ಮೂಲದವರನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ ನೇಪಾಳ ಮೂಲದವರ ಬಂಧನ
ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲೆ ಕಳ್ಳತನ ಎಸಗಿದ ನೇಪಾಳ ಮೂಲದವರ ಬಂಧನ
Follow us on

ಬೆಂಗಳೂರು: ಸಂಚು ರೂಪಿಸಿ ಮನೆ ಮಾಲೀಕರನ್ನು ಬೆದರಿಸಿದ ಹಿನ್ನೆಲೆಯಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳದ ಮೂಲದವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಕ್ಕೆ ಸಂಬಂಧಿಸಿದಂತೆ ಟಿಕಾ ರಾಮ್ ಬಿಸ್ಟಾ, ಪ್ರೇಮ್ ಬಹದ್ದೂರ್ ಬಿಸ್ಟಾ, ಧನಾ ಬಿಸ್ಟಾ, ಜನಕ್ ಕುಮಾರ್, ಕಮಲ್ ಜಾಜೋ, ಜನಕ್ ಜೈಶಿ, ಸುನಿಲ್ ಬಹದ್ದೂರ್ ಅವರನ್ನು ಬಂಧಿಸಲಾಗಿದೆ.

ಮನೆ ಮಾಲೀಕ ಹಾಗೂ ಕುಟುಂಬಸ್ಥರನ್ನು ಕಟ್ಟಿ ಹಾಕಿ ಹೆದರಿಸಿದ್ದಾರೆ. ತದ ನಂತರ ಮನೆಯಲ್ಲಿದ್ದ ದುಬಾರಿ ಮೌಲ್ಯದ ವಾಚ್, 66.96 ಗ್ರಾಂ ವಜ್ರ ಆಭರಣ ಹಾಗೂ ₹ 60 ಲಕ್ಷ ಮೌಲ್ಯದ 857 ಗ್ರಾಂ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ಕದ್ದೊಯ್ದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಕಳ್ಳತನ ಮಾಡಿದ್ದ ವಜ್ರ ಮತ್ತು ಚಿನ್ನ