ಬೆಂಗಳೂರು: ಬಸ್ನಲ್ಲಿ ತೆರಳುತ್ತಿದ್ದಾಗ ಯುವತಿ ವಿಚಾರಕ್ಕೆ ಯುವಕರ ನಡುವೆ ಜಗಳ ನಡೆದು, ಚಾಕು ಇರಿತ ಆಗಿರುವ ದುರ್ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಇಂದು (ಅಕ್ಟೋಬರ್ 20) ಮಧ್ಯಾಹ್ನ ನಡೆದಿದೆ. ಬಸ್ನಲ್ಲಿ ತೆರಳುತ್ತಿದ್ದ ಯುವಕನಿಗೆ ಇಬ್ಬರಿಂದ ಚಾಕು ಇರಿತ ಆಗಿದೆ. ಸಿಲಿಕಾನ್ ಸಿಟಿಯಲ್ಲಿ ಬಸ್ ನೊಳಗೆ ಯುವಕರ ಕಿರಿಕ್ ಚಾಕು ಇರಿತದವರೆಗೆ ಮುಂದುವರಿದಿದೆ. ಯುವತಿ ವಿಚಾರಕ್ಕೆ ನಡೆದ ಜಗಳದಲ್ಲಿ ಯುವಕನಿಗೆ ಚಾಕು ಇರಿತವಾಗಿದೆ.
ಬಿಕಾಂ ವಿದ್ಯಾರ್ಥಿ ಕೀರ್ತನ್ ಕುಮಾರ್ ಗೆ ಚಾಕುವಿನಿಂದ ಇರಿಯಲಾಗಿದೆ. ಇಂದು ಬ್ಯಾಡರಹಳ್ಳಿಯ ಯುವತಿ ಮನೆ ಬಳಿ ತೆರಳಿದ್ದ ಕೀರ್ತನ್. ಈ ವೇಳೆ ಅಲ್ಲಿಗೆ ಬಂದ ಯುವಕರ ಜೊತೆ ಗಲಾಟೆ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಅಂಜನ್ ನಗರದಲ್ಲಿ ಶುರುವಾದ ಗಲಾಟೆ ಬಳಿಕ ಖಾಸಗಿ ಬಸ್ ಹತ್ತಿ ಮನೆ ಕಡೆ ತೆರಳುತಿರುವವರೆಗೆ ಮುಂದುವರಿದಿದೆ. ಕೀರ್ತನ್ ಬಸ್ನಲ್ಲಿ ತೆರಳುತ್ತಿದ್ದ ವೇಳೆ ಬೈಕ್ನಲ್ಲಿ ಬಸ್ ಹಿಂಬಾಲಿಸಿದ ಇಬ್ಬರು ಯುವಕರು, ಬಳಿಕ ಬಸ್ ಒಳಗೆ ಹತ್ತಿಕೊಂಡು ಕೀರ್ತನ್ ಜೊತೆ ಜಗಳ ಆಡಿದ್ದಾರೆ. ಬಳಿಕ ಬಟನ್ ಚಾಕು ಹಾಗೂ ಬೈಕ್ ಕೀ ನಿಂದ ಹಲ್ಲೆ ಮಾಡಲಾಗಿದೆ.
ಕಾಮಾಕ್ಷಿಪಾಳ್ಯದಲ್ಲಿ ಬಸ್ ತೆರಳುತಿದ್ದ ವೇಳೆ ಹಲ್ಲೆ ಮಾಡಲಾಗಿದೆ. ಈ ವೇಳೆ ಎದೆಯ ಭಾಗಕ್ಕೆ ಹಲ್ಲೆ ಮಾಡಿ ಯುವಕರು ಪರಾರಿಯಾಗಿದ್ದಾರೆ. ಕೂಡಲೇ ಗಾಯಾಳು ಕೀರ್ತನ್ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಕಾಮಾಕ್ಷಿ ಪಾಳ್ಯ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಮಹಿಳೆ ಕೊಲೆ ಪ್ರಕರಣ: ಕೆಲವೇ ಗಂಟೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು
ಬೆಂಗಳೂರಿನ ಬನಶಂಕರಿಯಲ್ಲಿ ಮಹಿಳೆ ಕೊಲೆ ಪ್ರಕರಣದ ಕೃತ್ಯ ಬೆಳಕಿಗೆ ಬಂದ ಕೆಲವೇ ಗಂಟೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಯಾರಬ್ನಗರದಲ್ಲಿ ಅಫ್ರೀನ್ ಖಾನಂ ಕೊಲೆಯಾಗಿತ್ತು. ಈ ಪ್ರಕರಣದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಅಫ್ರೀನ್ ಜತೆ 17 ವರ್ಷದ ಬಾಲಕ ಸಂಬಂಧ ಹೊಂದಿದ್ದ. ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಪ್ರೇಮಾಂಕುರ ಆಗಿತ್ತು ಎಂದು ತಿಳಿದುಬಂದಿದೆ.
ಮೊಬೈಲ್ ಕರೆ, ಮೆಸೇಜ್ ನೋಡಿ ಪತ್ನಿ ಜತೆ ಪತಿ ಜಗಳ ಆಡಿದ್ದ. ಸಂಬಂಧಿಯ ಪುತ್ರನ ಜತೆ ಸಂಬಂಧದ ಬಗ್ಗೆ ಪತಿಗೆ ಗೊತ್ತಿರಲಿಲ್ಲ. ಈ ಮಧ್ಯೆ, ನಿನ್ನೆ ಬಾಲಕನ ಜತೆ ಮಹಿಳೆ ಅಫ್ರೀನ್ ಖಾನಂ ಜಗಳವಾಡಿದ್ದಳು. ಯಾರೂ ಇಲ್ಲದ ವೇಳೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಅಫ್ರೀನ್ ಮೇಲೆ ಕತ್ತರಿಯಿಂದ ಹಲ್ಲೆಮಾಡಿ ಬಾಲಕ ಕೊಲೆ ನಡೆಸಿರುವುದು ತಿಳಿದುಬಂದಿದೆ. ಅಫ್ರೀನ್ ಖಾನಂ ಕೊಲೆ ನಂತರ ಮನೆಯಲ್ಲೇ ಇದ್ದ ಆರೋಪಿಯನ್ನು, ಫೋನ್ ಕರೆ ಆಧಾರದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಬನಶಂಕರಿ ಠಾಣೆ ಪೊಲೀಸರಿಂದ ಆರೋಪಿ ಬಾಲಕನ ವಿಚಾರಣೆ ಮಾಡಲಾಗಿದೆ.
ಇದನ್ನೂ ಓದಿ: ಯಾರಬ್ ನಗರದಲ್ಲಿ ಮಹಿಳೆ ಬರ್ಬರ ಹತ್ಯೆ; ಕೊಲೆ ಮಾಡಿ, ಮನೆಗೆ ಬೀಗ ಹಾಕಿ ಆರೋಪಿ ಪರಾರಿ
ಇದನ್ನೂ ಓದಿ: ರೌಡಿಶೀಟರ್ ಜೈ ಶ್ರೀರಾಮ್ ಕೊಲೆ ಪ್ರಕರಣ; ಶ್ರೀರಾಮ್ ಪತ್ನಿ ಶ್ರೀವಿದ್ಯಾ ಸೇರಿ 10 ಜನ ಅರೆಸ್ಟ್