ರೌಡಿಶೀಟರ್‌ ಜೈ ಶ್ರೀರಾಮ್ ಕೊಲೆ ಪ್ರಕರಣ; ಶ್ರೀರಾಮ್ ಪತ್ನಿ ಶ್ರೀವಿದ್ಯಾ ಸೇರಿ 10 ಜನ ಅರೆಸ್ಟ್

TV9 Digital Desk

| Edited By: Ayesha Banu

Updated on: Oct 13, 2021 | 9:11 PM

ದುಷ್ಮನ್ ಕಹಾ ಹೈ ಅಂದ್ರೆ ಬಗಲ್ ಮೇ ಹೈ ಎನ್ನುವ ಮಾತು ನೀವು ಕೇಳಿರುತ್ತೀರಿ. ಆದೇ ರೀತಿ ಮೃತ ಜೈ ಶ್ರೀರಾಮ್ ಜೊತೆಯಲ್ಲಿದ್ದ ಬಾಳ ಸಂಗತಿ ಶ್ರೀವಿದ್ಯಾ ತನ್ನ ಪತಿಯನ್ನೇ ಕೊಲೆ ಮಾಡಿಸಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ.

ರೌಡಿಶೀಟರ್‌ ಜೈ ಶ್ರೀರಾಮ್ ಕೊಲೆ ಪ್ರಕರಣ; ಶ್ರೀರಾಮ್ ಪತ್ನಿ ಶ್ರೀವಿದ್ಯಾ ಸೇರಿ 10 ಜನ ಅರೆಸ್ಟ್
ಹತ್ಯೆಗೀಡಾದ ಜೈಶ್ರೀರಾಮ್

ತುಮಕೂರು: ವಾರದ ಹಿಂದೆ ನೆಲಮಂಗಲದ ಇಂದಿರಾನಗರ ಬಳಿ 9 ಜನರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಜೈ ಶ್ರೀರಾಮ್ ಕೊಲೆ ಮಾಡಿದ್ದರು. ಬೈಕ್ನಲ್ಲಿ ಹೋಗುತ್ತಿದ್ದ ಜೈ ಶ್ರೀರಾಮ್ನನ್ನು ಕಾರಿನಲ್ಲಿ ಬಂದ ತಂಡ ಡಿಕ್ಕಿ ಹೊಡೆದು ಕೆಳಕ್ಕೆ ಬೀಳಿಸಿ ಕೊಚ್ಚಿ ಕೊಲೆ ಮಾಡಿದ್ದರು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೃತ ರೌಡಿಶೀಟರ್‌ ಜೈ ಶ್ರೀರಾಮ್ ಪತ್ನಿ ಸೇರಿ 10 ಜನರನ್ನು ಬಂಧಿಸಿದ್ದಾರೆ.

ದುಷ್ಮನ್ ಕಹಾ ಹೈ ಅಂದ್ರೆ ಬಗಲ್ ಮೇ ಹೈ ಎನ್ನುವ ಮಾತು ನೀವು ಕೇಳಿರುತ್ತೀರಿ. ಆದೇ ರೀತಿ ಮೃತ ಜೈ ಶ್ರೀರಾಮ್ ಜೊತೆಯಲ್ಲಿದ್ದ ಬಾಳ ಸಂಗತಿ ಶ್ರೀವಿದ್ಯಾ ತನ್ನ ಪತಿಯನ್ನೇ ಕೊಲೆ ಮಾಡಿಸಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಆರೋಪಿಯಾಗಿರುವ ಶ್ರೀವಿದ್ಯಾ ಪತಿ ಕೊಲೆ ಮಾಡಲು ಹಂತಕರಿಗೆ ಜೈ ಶ್ರೀರಾಮನ ಇಂಚಿಂಚು ಮಾಹಿತಿ ನೀಡುತ್ತಿದ್ದಳಂತೆ. ರೌಡಿಶೀಟರ್‌ ಜೈ ಶ್ರೀರಾಮ್, ತನ್ನ ಪತ್ನಿ ಶ್ರೀವಿದ್ಯಾಳ ಆಸ್ತಿ ಮೇಲೆ ಕಣ್ಣಿಟ್ಟಿದ್ದನಂತೆ. ಆಸ್ತಿ ತನ್ನ ಹೆಸರಿಗೆ ಬರೆಯುವಂತೆ ಟಾರ್ಚರ್ ನೀಡ್ತಿದ್ದನಂತೆ. ಅಲ್ಲದೆ ಲೈಂಗಿಕವಾಗಿ ಹಿಂಸೆ ನೀಡ್ತಿದ್ದನಂತೆ. ಹೀಗಾಗಿ ಪತಿಯ ಮೇಲೆ ಮುಂಚಿನಿಂದಲೂ ಶ್ರೀವಿದ್ಯಾಳಿಗೆ ಅಸಮಾಧಾನವಿತ್ತಂತೆ. ಇನ್ನು ಇದಕ್ಕೆ ಪುಷ್ಟಿ ನೀಡುವಂತೆ ರೌಡಿಶೀಟರ್ ರಾಜೇಶನ ಬಳಿ ಜೈ ಶ್ರೀರಾಮ್ 15 ಲಕ್ಷ ಪಡೆದು ವಂಚಿಸಿದ್ದ. ಕೊಟ್ಟ ಹಣ ವಾಪಸ್ ಕೇಳಿದ್ರೆ ಕೊಲೆ ಬೆದರಿಕೆ ಹಾಕ್ತಿದ್ದ. ಹೀಗಾಗಿ ರೌಡಿಶೀಟರ್ ರಾಜೇಶ್ ಕೂಡ ಜೈ ಶ್ರೀರಾಮ್ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ.

ಇವರಿಬ್ಬರ ಸೇಡು ಈಗ ಕೊಲೆಯಲ್ಲಿ ಅಂತ್ಯವಾಗಿದೆ. ಜೈ ಶ್ರೀರಾಮ್ ಪತ್ನಿ ರಾಜೇಶ್ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿಸಲು ಸಹಾಯ ಮಾಡಿದ್ದಾಳೆ. ಜೈ ಶ್ರೀರಾಮ್ ಮನೆಯಿಂದ ಎಲ್ಲಿಗೆ ಹೋಗ್ತಿದ್ದ ಏನ್ನು ಮಾಡುತ್ತಿದ್ದ ಎಂಬ ಮಾಹಿತಿಯನ್ನ ರಾಜೇಶ್ಗೆ ಮೆಸೇಜ್ ಮಾಡ್ತಿದ್ದಳಂತೆ. ಅದರಂತೆಯೇ ಕೊಲೆಯಾದ ದಿನವೂ ಮಾಹಿತಿ ನೀಡಿದ್ದಾಳೆ. ಶ್ರೀವಿದ್ಯಾ ಕೊಟ್ಟ ಮೆಸೇಜ್ ಮೇರೆಗೆ ರಾಜೇಶ್ ಸ್ಕೆಚ್ ಹಾಕಿ ಶ್ರೀ ರಾಮ್ ಬೈಕ್ಗೆ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದಾರೆ. ಸದ್ಯ ಘಟನೆ ಸಂಬಂಧ ಶ್ರೀವಿದ್ಯಾ ಸೇರಿ 10 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀವಿದ್ಯಾ, ರಾಜೇಶ್, ಶಿವರಾಜ್@ರಾಜಣ್ಣ. ಅಮೃತ್, ರಾಮ, ಗಜೇಂದ್ರ, ಶರತ್, ಪ್ರಸನ್ನ ಹರ್ಷ, ಅಶ್ವಿನ್ ಕುಮಾರ್ @ ರಾಕಿ ಬಂಧಿತ ಆರೋಪಿಗಳು.

ಇದನ್ನೂ ಓದಿ: Bengaluru Crime: ಮಾರಕಾಸ್ತ್ರಗಳಿಂದ ಹೊಡೆದು ಬೈಕ್​ನಲ್ಲಿ ತೆರಳುತ್ತಿದ್ದ ರೌಡಿ ಶೀಟರ್​​ ಹತ್ಯೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada