ಡಿಕೆ ಶಿವಕುಮಾರ್ ವಿರುದ್ಧ ಪರ್ಸೆಂಟೇಜ್ ಆರೋಪ: ತನಿಖೆಗೆ ಸದಾನಂದಗೌಡ, ಸೊಗಡು ಶಿವಣ್ಣ ಆಗ್ರಹ

ಡಿ.ಕೆ.ಶಿವಕುಮಾರ್ ಅವರ ಬೇನಾಮಿ ಆಸ್ತಿ ಸಾಕಷ್ಟು ಪ್ರಮಾಣದಲ್ಲಿದೆ ಎಂದು ಬಿಜೆಪಿ ನಾಯಕ ಸೊಗಡು ಶಿವಣ್ಣ ನೇರ ಆರೋಪ ಮಾಡಿದ್ದಾರೆ

ಡಿಕೆ ಶಿವಕುಮಾರ್ ವಿರುದ್ಧ ಪರ್ಸೆಂಟೇಜ್ ಆರೋಪ: ತನಿಖೆಗೆ ಸದಾನಂದಗೌಡ, ಸೊಗಡು ಶಿವಣ್ಣ ಆಗ್ರಹ
ಡಿ.ವಿ.ಸದಾನಂದಗೌಡ, ಡಿ.ಕೆ.ಶಿವಕುಮಾರ್ ಮತ್ತು ಸೊಗಡು ಶಿವಣ್ಣ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 14, 2021 | 5:11 PM

ಬೆಂಗಳೂರು/ತುಮಕೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಲೀಂ ಮತ್ತು ವಿ.ಎಸ್.ಉಗ್ರಪ್ಪ ಮಾಡಿರುವ ಭ್ರಷ್ಟಾಚಾರ, ಪರ್ಸೆಂಟೇಜ್ ಆರೋಪಗಳ ಬಗ್ಗೆ ಸ್ವತಂತ್ರ ಏಜೆನ್ಸಿಯಿಂದ ತನಿಖೆ ನಡೆಸಬೇಕು ಎಂದು ಸಂಸದ ಡಿ.ವಿ.ಸದಾನಂದಗೌಡ ಒತ್ತಾಯಿಸಿದ್ದಾರೆ. ಮತ್ತೊಂದೆಡೆ ತುಮಕೂರು ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಬೇನಾಮಿ ಆಸ್ತಿ ಸಾಕಷ್ಟು ಪ್ರಮಾಣದಲ್ಲಿದೆ ಎಂದು ಬಿಜೆಪಿ ನಾಯಕ ಸೊಗಡು ಶಿವಣ್ಣ ನೇರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಂಸದ ಡಿ.ವಿ.ಸದಾನಂದಗೌಡ, ಕಾಂಗ್ರೆಸ್ ಪಕ್ಷವು ಈಗಾಗಲೇ ಅಧಃಪತನದತ್ತ ಸಾಗಿದೆ. ಆ ಪಕ್ಷದ ಕಚೇರಿಯಲ್ಲಿಯೇ ಪ್ರಮುಖ ನಾಯಕರು ಹೀಗೆ ಮಾತನಾಡಿದ್ದಾರೆ. ಇದರ ಹಿಂದೆ ಬಲಿಷ್ಠರು ಯಾರಾದರೂ ಇರಲೇಬೇಕಲ್ಲವೇ? ಅದು ಯಾರು, ಏನು ಎಂದು ಡಿಕೆಶಿಯವರೇ ತಿಳಿದುಕೊಳ್ಳಲಿ ಎಂದು ಸಲಹೆ ಮಾಡಿದ್ದಾರೆ.

ಅವರ ಪಕ್ಷದ ಆಂತರಿಕ ವಿಚಾರದ ಬಗ್ಗೆ ಹೆಚ್ಚು ಮಾತಾಡಲು ಇಷ್ಟಪಡುವುದಿಲ್ಲ ಎಂದು ಹೇಳಿದ ಸದಾನಂದಗೌಡ, ಡಿ.ಕೆ.ಶಿವಕುಮಾರ್ ಬಗ್ಗೆ ಅವರ ಪಕ್ಷದವರೇ ಮಾತಾಡುತ್ತುರುವುದು ನೋಡಿದರೆ ಅವರ ಪಕ್ಷದಲ್ಲೇ ಷಡ್ಯಂತ್ರ ನಡೆಯುತ್ತಿರುವುದು ಗೊತ್ತಾಗುತ್ತದೆ. ಕಾಂಗ್ರೆಸ್ ಈಗಾಗಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಂತಾ ಎರಡು ಬಣಗಳಾಗಿ ಒಡೆದುಹೋಗಿದೆ. ಪ್ರತಿದಿನವೂ ಇದಕ್ಕೆ ಆಧಾರಗಳು ಸಿಗುತ್ತಿವೆ. ಇದೀಗ ಹೊರಬಂದಿರುವ ಆರೋಪದ ಹಿಂದೆ ಯಾರಿದ್ದಾರೆ ಅಂತಾ ನಾನು ಹೇಳಲ್ಲ ಎಂದು ತಿಳಿಸಿದ್ದಾರೆ.

ತುಮಕೂರಿನಲ್ಲಿ ಬೇನಾಮಿ ಆಸ್ತಿ ಡಿ.ಕೆ.ಶಿವಕುಮಾರ್ ಅವರ ಸಾವಿರಾರು ಕೋಟಿ ಮೊತ್ತದ ಬೇನಾಮಿ ಆಸ್ತಿಯು ತುಮಕೂರಿನಲ್ಲಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಡಿಕೆಶಿ ರಿಟೇಲ್ ವ್ಯಾಪಾರಿಯಲ್ಲ, ಹೋಲ್​​ಸೇಲ್ ವ್ಯಾಪಾರಿ. ವಿ.ಎಸ್​.ಉಗ್ರಪ್ಪ ಹಾಗೂ ಸಲೀಂ ಮಾತನಾಡಿರುವುದು ಸತ್ಯ. ಕೃಷ್ಣಮೂರ್ತಿ ಎಂಬುವರ ಹೆಸರಿನಲ್ಲಿ ಶಿವಕುಮಾರ್​ಗೆ ಬೇನಾಮಿ ಆಸ್ತಿಯಿದೆ. ಪಾವಗಡ ಸೋಲಾರ್ ಪಾರ್ಕ್, ಚಿಕ್ಕನಾಯಕನಹಳ್ಳಿ ಗಣಿಗಾರಿಕೆ ಮತ್ತು ತುಮಕೂರಿನಲ್ಲಿ ₹ 100 ಕೋಟಿ ಮೌಲ್ಯದ ಹೆಂಚಿನ ಫ್ಯಾಕ್ಟರಿ ಇದೆ. ಎಸ್​.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಆರೋಪ ಮಾಡಿದರು.

ಇದನ್ನೂ ಓದಿ: ನನಗೆ ಡಿಕೆ ಶಿವಕುಮಾರ್ ಗಾಡ್ ಫಾದರ್; ನನ್ನ ಉಸಿರು ಇರುವವರೆಗೂ ಕಾಂಗ್ರೆಸ್​ನಲ್ಲಿರುತ್ತೇನೆ: ಟಿವಿ9ಗೆ ಸಲೀಂ ಹೇಳಿಕೆ ಇದನ್ನೂ ಓದಿ: ಏನೂ ಹೇಳಬೇಡ ಸುಮ್ನಿರಪ್ಪ, ಸ್ಪಷ್ಟನೆ ನೀಡುವುದಕ್ಕೆ ಮುಂದಾದ ಉಗ್ರಪ್ಪ ವಿರುದ್ಧ ಡಿಕೆ ಶಿವಕುಮಾರ್ ಉಗ್ರ ರೂಪ!

Published On - 5:10 pm, Thu, 14 October 21