ನನಗೆ ಡಿಕೆ ಶಿವಕುಮಾರ್ ಗಾಡ್ ಫಾದರ್; ನನ್ನ ಉಸಿರು ಇರುವವರೆಗೂ ಕಾಂಗ್ರೆಸ್​ನಲ್ಲಿರುತ್ತೇನೆ: ಟಿವಿ9ಗೆ ಸಲೀಂ ಹೇಳಿಕೆ

ಆಯನೂರು ಉಮೇಶ್ ಬಗ್ಗೆ ನಾನು ಮಾತನಾಡಿದ್ದು. ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಾನು ಕ್ಷಮೆ ಕೇಳುತ್ತಿದ್ದೇನೆ. ಕೆಪಿಸಿಸಿ ಸದಸ್ಯನೂ ಆಗಿದ್ದೇನೆ. ಆದರೆ ನನ್ನ ಅಮಾನತು ನೋವು ತಂದಿದೆ. ನೀರಾವರಿ ಇಲಾಖೆಯಲ್ಲಿ ನೂರಾರು ಕೋಟಿ ಅವ್ಯವಹಾರವಾಗಿದೆ.

ನನಗೆ ಡಿಕೆ ಶಿವಕುಮಾರ್ ಗಾಡ್ ಫಾದರ್; ನನ್ನ ಉಸಿರು ಇರುವವರೆಗೂ ಕಾಂಗ್ರೆಸ್​ನಲ್ಲಿರುತ್ತೇನೆ: ಟಿವಿ9ಗೆ ಸಲೀಂ ಹೇಳಿಕೆ
ಕಾಂಗ್ರೆಸ್ ನಾಯಕ ವಿ .ಎಸ್ .ಉಗ್ರಪ್ಪ

ಬೆಂಗಳೂರು: ಇಬ್ಬರು ಕಾಂಗ್ರೆಸ್ ನಾಯಕರಾದ ಸಲೀಂ (Saleem) ಮತ್ತು ವಿಎಸ್ ಉಗ್ರಪ್ಪ (VS Ugrappa) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಬಗ್ಗೆ ಚರ್ಚೆ ನಡೆಸಿದ್ದರು. ಇದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರವೂ ತಂದಿದೆ. ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಸಲೀಂ ನಿನ್ನೆ ನಡೆದ ಘಟನೆಯಿಂದ ನಾನು ಸಾಕಷ್ಟು ನೊಂದಿದ್ದೇನೆ. ನನಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಾಡ್ ಫಾದರ್. ನನ್ನ ಉಸಿರು ಇರುವವೆಗೂ ನಾನು ಕಾಂಗ್ರೆಸ್​ನಲ್ಲಿ ಇರುತ್ತೇನೆ ಅಂತ ಹೇಳಿದ್ದಾರೆ.

ಆಯನೂರು ಉಮೇಶ್ ಬಗ್ಗೆ ನಾನು ಮಾತನಾಡಿದ್ದು. ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಾನು ಕ್ಷಮೆ ಕೇಳುತ್ತಿದ್ದೇನೆ. ಕೆಪಿಸಿಸಿ ಸದಸ್ಯನೂ ಆಗಿದ್ದೇನೆ. ಆದರೆ ನನ್ನ ಅಮಾನತು ನೋವು ತಂದಿದೆ. ನೀರಾವರಿ ಇಲಾಖೆಯಲ್ಲಿ ನೂರಾರು ಕೋಟಿ ಅವ್ಯವಹಾರವಾಗಿದೆ. ನಾನು ಬಿವೈ ವಿಜಯೇಂದ್ರ ಬಗ್ಗೆ ಮಾತನಾಡಿದ್ದೆ. ಮುಂದುವರೆದ ಭಾಗದಲ್ಲಿ ಇದೆ ಅದನ್ನ ತೋರಿಸಿಲ್ಲ. ಡಿಕೆಶಿ ವಿರುದ್ಧ ಐಟಿ ದಾಳಿ ವೇಳೆ ನಾನೇ ಹೋರಾಟ ಮಾಡಿದ್ದೇನೆ. ಕಾಂಗ್ರೆಸ್ ಪರವಾಗಿ ಸಮಾಜ ಸೇವೆ ಮುಂದುವರೆಸುತ್ತೇನೆ ಎಂದು ಟಿವಿ9ಗೆ ಸಲೀಂ ಹೇಳಿಕೆ ನೀಡಿದ್ದಾರೆ.

ಅವರು ಡ್ರಿಂಕ್ಸ್ ಮಾಡಲ್ಲ, ನಾನ್ವೆಜ್ ತಿನ್ನಲ್ಲ. ಅವರ ತೊದಲು ಮಾತನಾಡುತ್ತಾರೆ ಅಂತ ಹೇಳಿದ್ದೆ. ಅದನ್ನ ಸಹ ನಾನು ವೈರಲ್ ವಿಡಿಯೋ ಬಗ್ಗೆ ಚರ್ಚೆ ಮಾಡಿದ್ದೇನೆ. ಅದನ್ನ ಬಿಟ್ಟು ಡಿಕೆಶಿ ಬಗ್ಗೆ ನಾನು ಅವೇಹಳನವಾಗಿ ಮಾತನಾಡಿಲ್ಲ. ನಿನ್ನೆ ಘಟನೆಯಿಂದ ನನಗೆ ಮುಜಗರವಾಗಿದೆ. ಅದಕ್ಕೆ ಯಾರನ್ನ ಸಂಪರ್ಕ ಮಾಡಿಲ್ಲ. ಮುಖ ತೋರಿಸಲು ಸಹ ಮುಜಗರವಾಗುತ್ತಿದೆ. ಡಿಕೆ ಶಿವಕುಮಾರ್ ನನಗೆ ದೇವರ ಇದ್ದ ಹಾಗೆ. ಅವರನ್ನ ಕ್ಷಮೆ ಕೇಳಲು ನನಗೆ ಯಾವುದೇ ಬೇಸರವಿಲ್ಲ. ಅವರಿಗೆ ಮುಖ ತೋರಿಸಲು ಸಹ ನನಗೆ ಆಗುತ್ತಿಲ್ಲ. ಕಾಂಗ್ರೆಸ್ ಪರವಾಗಿಯೇ ನನ್ನ ಹೋರಾಟ ಮುಂದುವರೆಯುತ್ತದೆ. ಟಿವಿ9 ಮೂಲಕವೇ ನಾನು ಡಿಕೆಶಿಗೆ ಕ್ಷಮೆ ಕೇಳುತ್ತೇನೆ ಅಂತ ಸಲೀಂ ಹೇಳಿದ್ದಾರೆ.

ಇದನ್ನೂ ಓದಿ

Ayudha Puja: ರಾಜ್ಯಾದ್ಯಂತ ಆಯುಧ ಪೂಜೆ ಸಂಭ್ರಮ, ತುಂಬಿ ತುಳುಕುತ್ತಿವೆ ಮಾರುಕಟ್ಟೆಗಳು

Petrol Price Today: ಮತ್ತಷ್ಟು ಏರಿಕೆಯಾಯ್ತು ಇಂಧನ ದರ; ಎಷ್ಟಾಯ್ತು ಲೀಟರ್​ ಪೆಟ್ರೋಲ್​, ಡೀಸೆಲ್​ ಬೆಲೆ ಗೊತ್ತಾ?

Read Full Article

Click on your DTH Provider to Add TV9 Kannada