Crime News: ಮದುವೆಗೆ ಹೋಗಿದ್ದ ಎಂಬಿಬಿಎಸ್ ವಿದ್ಯಾರ್ಥಿಗಳ ದಾರುಣ ಸಾವು; ಈಜಲು ಹೋದವರು ಮಸಣ ಸೇರಿದರು

|

Updated on: May 06, 2024 | 8:13 PM

ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದ ಐವರು ವಿದ್ಯಾರ್ಥಿಗಳ ಗುಂಪು ಗೆಳೆಯರ ಮದುವೆಗೆ ಭಾಗವಹಿಸಲು ಹೋಗಿತ್ತು. ಆಗ ಎಲ್ಲರೂ ಎಂಜಾಯ್ ಮಾಡಲು ಸಮುದ್ರದಲ್ಲಿ ಈಜಲು ಹೋಗಿದ್ದಾಗ ದಾರುಣ ಘಟನೆಯೊಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Crime News: ಮದುವೆಗೆ ಹೋಗಿದ್ದ ಎಂಬಿಬಿಎಸ್ ವಿದ್ಯಾರ್ಥಿಗಳ ದಾರುಣ ಸಾವು; ಈಜಲು ಹೋದವರು ಮಸಣ ಸೇರಿದರು
ಸಾಂದರ್ಭಿಕ ಚಿತ್ರ
Follow us on

ಚೆನ್ನೈ: ತಮಿಳುನಾಡಿನ (Tamil Nadu) ಖಾಸಗಿ ವೈದ್ಯಕೀಯ ಕಾಲೇಜಿನ ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ತಮಿಳುನಾಡಿನ ಖಾಸಗಿ ಬೀಚ್‌ನಲ್ಲಿ ಸೋಮವಾರ ಈಜಲು ಹೋದಾಗ ಕನ್ಯಾಕುಮಾರಿಯ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅವರೆಲ್ಲರೂ ತಮ್ಮ ಗೆಳೆಯರೊಬ್ಬರ ಮದುವೆಯಲ್ಲಿ ಭಾಗವಹಿಸಲು ಹೋಗಿದ್ದರು. ಈ ನಡುವೆ ಸಮಯವಿದ್ದುದರಿಂದ ಅವರು ಸಮುದ್ರದಲ್ಲಿ (Beach) ಎಂಜಾಯ್ ಮಾಡಿ, ಸಮಯ ಕಳೆಯಲು ಹೋಗಿದ್ದರು. ಆಗ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ತಿರುಚಿರಾಪಳ್ಳಿಯ ಎಸ್‌ಆರ್‌ಎಂ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ತೆಂಗಿನ ತೋಟದ ಮೂಲಕ ಲೆಮೂರ್ ಬೀಚ್‌ಗೆ ರಹಸ್ಯವಾಗಿ ಪ್ರವೇಶಿಸಿದ್ದರು. ಆ ಸಮುದ್ರ ಅಪಾಯಕಾರಿಯಾಗಿದ್ದರಿಂದ ಅದನ್ನು ಮುಚ್ಚಲಾಗಿತ್ತು. ಆದರೆ ವಿದ್ಯಾರ್ಥಿಗಳು ಹೇಗಾದರೂ ಅಲ್ಲಿಗೆ ಹೋಗಿ ಈಜಲು ನಿರ್ಧರಿಸಿದರು. ದುರದೃಷ್ಟವಶಾತ್ ಹಠದಿಂದ ಸಮುದ್ರಕ್ಕೆ ಇಳಿದ ಅವರು ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಮದುವೆಯಾಗು ಎಂದು ಒತ್ತಾಯ, ಕೋಪದಲ್ಲಿ ಮಹಿಳೆಯ ಕೊಲೆ ಮಾಡಿದ ಟ್ಯಾಕ್ಸಿ ಡ್ರೈವರ್

ಸಮುದ್ರದ ಪ್ರಕ್ಷುಬ್ಧತೆಯಿಂದಾಗಿ ಮುಚ್ಚಿಹೋಗಿದ್ದ ತೆಂಗಿನ ತೋಟದ ಮೂಲಕ ವಿದ್ಯಾರ್ಥಿಗಳ ಗುಂಪು ಲೆಮೂರ್ ಬೀಚ್ ಅನ್ನು ರಹಸ್ಯವಾಗಿ ಪ್ರವೇಶಿಸಿತು. ಅವರು ಈಜಲು ಹೋಗಿ ದುರದೃಷ್ಟವಶಾತ್ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಿರುಚಿರಾಪಳ್ಳಿ ಕಾಲೇಜಿನಲ್ಲಿ ಹೌಸ್ ಸರ್ಜನ್‌ಶಿಪ್ ಮಾಡುತ್ತಿರುವ ಎಂಬಿಬಿಎಸ್ ವಿದ್ಯಾರ್ಥಿಗಳ ತಂಡ ರಾಜಕ್ಕಮಂಗಲಂನ ಲೆಮೂರ್ ಬೀಚ್‌ಗೆ ತೆರಳಿದ್ದು, ಭಾrಈ ಅಲೆಯೊಂದು ಅವರಲ್ಲಿ ಹಲವರನ್ನು ಸಮುದ್ರಕ್ಕೆ ಎಳೆದೊಯ್ದಿದೆ ಎಂದು ಕನ್ಯಾಕುಮಾರಿ ಪೊಲೀಸ್ ವರಿಷ್ಠಾಧಿಕಾರಿ ಇ. ಸುಂದರವತನಂ ತಿಳಿಸಿದ್ದಾರೆ.

ಸರ್ಕಾರದ ಅಧಿಕೃತ ಪ್ರಕಟಣೆಯ ಪ್ರಕಾರ, ಗಾಯತ್ರಿ (25) ಮತ್ತು ಚಾರುಕವಿ (23) ಮತ್ತು ಮೂವರು ಪುರುಷರಾದ ಸರ್ವದರ್ಶಿತ್ (23), ಪ್ರವೀಣ್ ಸ್ಯಾಮ್ (23) ಮತ್ತು ವೆಂಕಟೇಶ್ (24) ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಗಂಡ-ಹೆಂಡತಿ ಜಗಳ: ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಪತ್ನಿಯ ಭೀಕರ ಕೊಲೆ

ಚಾರುಕವಿ ತಂಜಾವೂರಿನ ನಿವಾಸಿ, ನೇವೇಲಿಯ ಗಾಯತ್ರಿ, ಕನ್ನಿಯಾಕುಮಾರಿಯ ಸರ್ವದರ್ಶಿತ್, ದಿಂಡಿಗಲ್‌ನ ಪ್ರವೀಣ್ ಸ್ಯಾಮ್ ಮತ್ತು ಸಮೀಪದ ಆಂಧ್ರಪ್ರದೇಶದ ವೆಂಕಟೇಶ್ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಜೊತೆಗಿದ್ದ ವಿದ್ಯಾರ್ಥಿಯ ಸಹೋದರನ ವಿವಾಹದಲ್ಲಿ ಪಾಲ್ಗೊಳ್ಳಲು ಮೇ 5 ರಂದು ಕನ್ಯಾಕುಮಾರಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಹಠಾತ್ ಅಲೆಗಳ ಅಲೆಗಳ ಬಗ್ಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದರೂ ಹಠ ತೊಟ್ಟು ಸಮುದ್ರಕ್ಕೆ ಇಳಿದಿದ್ದರು. ಕಡಲತೀರದ ತೆಂಗಿನ ತೋಟದ ಮೂಲಕ ಮೃತದೇಹಗಳನ್ನು ಕುಟುಂಬಗಳಿಗೆ ಕಳುಹಿಸಲಾಗುತ್ತಿದೆ.

ಗುಂಪಿನಲ್ಲಿದ್ದ ಇನ್ನೂ ಮೂವರು ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೂರಿನ ನೇಶಿ, ತೇಣಿಯ ಪ್ರೀತಿ ಪ್ರಿಯಾಂಕಾ ಮತ್ತು ಮಧುರೈನ ಶರಣ್ಯ ಎಂದು ಗುರುತಿಸಲಾದ ಮೂವರನ್ನು ಎಸ್‌ಆರ್‌ಎಂ ವೈದ್ಯಕೀಯ ಕಾಲೇಜಿನಲ್ಲಿ ರಕ್ಷಿಸಲಾಗಿದ್ದು, ಆಸರಿಪಳ್ಳಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ