AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣಿವೆ, ಕಾಡು, ಸಮುದ್ರದ ಪಕ್ಕ ಮನೆ, ನದಿ ಸಮೀಪ ತೋಟ; ನನಸಾಗಿದೆ ಪ್ರಕಾಶ್ ರೈ ಕನಸು

ಪ್ರಕಾಶ್ ರಾಜ್ ಅವರಿಗೆ ಸಿಟಿ ಎಂದರೆ ಮೊದಲಿನಿಂದಲೂ ಇಷ್ಟವಿಲ್ಲ. ಹೀಗಾಗಿ, ಅವರು ಮೈಸೂರು ಸಮೀಪದ ಶ್ರೀರಂಗಪಟ್ಟಣದಲ್ಲಿರುವ ಫಾರ್ಮ್​ಹೌಸ್​ನಲ್ಲಿ ವಾಸವಿರುತ್ತಾರೆ. ಸಿನಿಮಾ ಕೆಲಸ ಮುಗಿಸಿ ಅವರು ನೇರವಾಗಿ ಇಲ್ಲಿಯೇ ತೆರಳುತ್ತಾರೆ. ಈ ರೀತಿ ಮನೆ ಹೊಂದುವುದು ಅವರ ಕನಸಾಗಿತ್ತಂತೆ.

ಕಣಿವೆ, ಕಾಡು, ಸಮುದ್ರದ ಪಕ್ಕ ಮನೆ, ನದಿ ಸಮೀಪ ತೋಟ; ನನಸಾಗಿದೆ ಪ್ರಕಾಶ್ ರೈ ಕನಸು
ಪ್ರಕಾಶ್ ರಾಜ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 26, 2024 | 12:00 PM

Share

ಪ್ರಕಾಶ್ ರಾಜ್ (Prakash Raj) ಅವರಿಗೆ ಇಂದು (ಮಾರ್ಚ್ 26) ಬರ್ತ್​ಡೇ ಸಂಭ್ರಮ. ಅವರ ಅಭಿಮಾನಿಗಳು ನಟನಿಗೆ ವಿಶ್ ಮಾಡುತ್ತಿದ್ದಾರೆ. ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಅವರ ಬಳಿ ಸಾಕಷ್ಟು ಆಸ್ತಿ ಇದೆ. ಹಾಗಂತ ಅವರು ಐಷಾರಾಮಿ ಜಾಗದಲ್ಲಿ ಹೋಗಿ ಮನೆ ಖರೀದಿಸಿಲ್ಲ. ಮೊದಲಿನಿಂದ ಇದ್ದ ಒಂದು ಕನಸನ್ನು ಅವರು ಈಡೇರಿಸಿಕೊಂಡಿದ್ದಾರೆ. ಕಣಿವೆ, ಕಾಡು, ಸಮುದ್ರ ಪಕ್ಕ ಒಂದು ಮನೆ ಇರಬೇಕು, ನದಿ ಪಕ್ಕ ತೋಟ ಎಂಬುದು ಪ್ರಕಾಶ್ ರಾಜ್ ಕನಸಾಗಿತ್ತು. ಆ ಕನಸು ಈಗ ನನಸಾಗಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

ಪ್ರಕಾಶ್ ರಾಜ್ ಸಂದರ್ಶನಗಳನ್ನು ನೀಡೋದು ತುಂಬಾನೇ ಅಪರೂಪ. ಇತ್ತೀಚೆಗೆ ಅವರು ‘ಫಿಲ್ಮ್​ ಕಂಪಾನಿಯನ್ ಸೌತ್​’ಗೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು ಹಲವು ವಿಚಾರ ಹಂಚಿಕೊಂಡಿದ್ದಾರೆ. ಪ್ರಕಾಶ್ ರಾಜ್​ಗೆ ಜೀವನದಲ್ಲಿ ಬೇಸರ ಎಂಬುದೇ ಬಂದಿಲ್ಲವಂತೆ. ಸಿನಿಮಾ ಕೆಲಸದಿಂದ ಬ್ರೇಕ್ ಪಡೆದರೆ ರಂಗಭೂಮಿಯಲ್ಲಿ ಬ್ಯುಸಿ ಇರುತ್ತಾರೆ. ಇದರ ಜೊತೆಗೆ ಕೃಷಿಯಲ್ಲೂ ತೊಡಗಿಕೊಳ್ಳುತ್ತಾರೆ.

ಪ್ರಕಾಶ್ ರಾಜ್ ಅವರಿಗೆ ಸಿಟಿ ಎಂದರೆ ಮೊದಲಿನಿಂದಲೂ ಇಷ್ಟವಿಲ್ಲ. ಹೀಗಾಗಿ, ಅವರು ಮೈಸೂರು ಸಮೀಪದ ಶ್ರೀರಂಗಪಟ್ಟಣದಲ್ಲಿರುವ ಫಾರ್ಮ್​ಹೌಸ್​ನಲ್ಲಿ ವಾಸವಿರುತ್ತಾರೆ. ಸಿನಿಮಾ ಕೆಲಸ ಮುಗಿಸಿ ಅವರು ನೇರವಾಗಿ ಇಲ್ಲಿಯೇ ತೆರಳುತ್ತಾರೆ. ಈ ರೀತಿ ಮನೆ ಹೊಂದುವುದು ಅವರ ಕನಸಾಗಿತ್ತಂತೆ.

‘ನನಗೆ ಸಿಟಿ ಬೇಡ. 20 ವರ್ಷಗಳ ಹಿಂದೆಯೇ ಈ ವಿಚಾರ ಅರಿವಾಯಿತು. ನದಿ ಸಮೀಪ ಒಂದು ತೋಟ, ಸಮುದ್ರ, ಕಾಡು ಹಾಗೂ ಕಣಿವೆಯಲ್ಲಿ ಒಂದು ಮನೆ ಹೊಂದಬೇಕು ಎಂಬುದು ನನ್ನ ಆಸೆ ಆಗಿತ್ತು. ಆ ಆಸೆ ಈಡೇರಿದೆ. ಕಣಿವೆ ಬೇಕು ಎಂದರೆ ಕೊಡೈಕೆನಲ್​ ಮನೆಗೆ ಹೋಗುತ್ತೇನೆ. ಸಮುದ್ರ ಬೇಕು ಎಂದರೆ ಚೆನ್ನೈ ತೆರಳುತ್ತೇನೆ. ಕಾಡು, ನದಿ ಬೇಕು ಎಂದರೆ ಮೈಸೂರಿನ ಫಾರ್ಮ್​ಹೌಸ್​ಗೆ ಬರುತ್ತೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಹಣಕ್ಕಾಗಿ ನಾನು ಸ್ಟುಪಿಡ್ ಸಿನಿಮಾಗಳನ್ನೂ ಮಾಡಿದ್ದೇನೆ’; ಪ್ರಕಾಶ್ ರೈ ನಿಲುವು ಇದು

‘ಇದೆಲ್ಲ ಸಣ್ಣ ಹೂಡಿಕೆ. ಜುಬ್ಲಿ ಹಿಲ್ಸ್​ನಲ್ಲಿ ಏಕೆ ಮನೆ ಪಡೆಯಬಾರದು ಎಂದು ಕೆಲವರು ಕೇಳಿದ್ದರು. ಅಲ್ಲಿ 10 ಕೋಟಿ ರೂಪಾಯಿ ಕೊಟ್ಟು ಮನೆ ಖರೀದಿಸಬೇಕು. ಬಾಗಿಲು ತೆರೆದರೆ ಬೇರೆ ಯಾರದ್ದೋ ಮನೆ ಕಾಣುತ್ತದೆ. ಆದರೆ, ಒಂದೂವರೆ ಕೋಟಿ ರೂಪಾಯಿಗೆ ಇಲ್ಲಿ ಐದು ಎಕರೆ ಮನೆ ಇದೆ. ಇದು ಹೂಡಿಕೆ ಅಲ್ಲ’ ಎಂದಿದ್ದಾರೆ.

ಪ್ರಕಾಶ್ ರಾಜ್ ಅವರು ಸಾಕಷ್ಟು ಸಮಯವನ್ನು ಮರಗಳ ಜೊತೆ, ಗಿಡಗಳ ಜೊತೆ ಕಳೆಯಲು ಇಷ್ಟಪಡುತ್ತಾರೆ. ಈ ಕಾರಣಕ್ಕೆ ಸಮಯ ಸಿಕ್ಕಾಗ ಅವರು ಫಾರ್ಮ್​ಹೌಸ್​ನಲ್ಲಿ ಇರಲು ಬಯಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ