‘ಹಣಕ್ಕಾಗಿ ನಾನು ಸ್ಟುಪಿಡ್ ಸಿನಿಮಾಗಳನ್ನೂ ಮಾಡಿದ್ದೇನೆ’; ಪ್ರಕಾಶ್ ರೈ ನಿಲುವು ಇದು
ಬಹುತೇಕ ಎಲ್ಲರೂ ಹಣಕ್ಕಾಗಿ ನಟನೆ ಮಾಡುತ್ತಾರೆ. ಕೆಲವರು ಇದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ಪ್ರಕಾಶ್ ರಾಜ್ ಆ ರೀತಿ ಅಲ್ಲ. ಈ ವಿಚಾರದಲ್ಲಿ ಅವರದ್ದು ನೇರ ಮಾತು. ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನೂ ಮಾಡಿದ್ದು ಇದೆ ಎಂದು ಅವರು ಹೇಳಿದ್ದಾರೆ.
ಪ್ರಕಾಶ್ ರಾಜ್ (Prakash Rai) ಅವರಿಗೆ ಇಂದು (ಏಪ್ರಿಲ್26) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ನೇರ ನುಡಿಗಳಿಂದ ಪ್ರಕಾಶ್ ರಾಜ್ ಅನೇಕರಿಂದ ಟೀಕೆಗೆ ಒಳಗಾಗಿದ್ದೂ ಇದೆ. ಪ್ರಕಾಶ್ ರಾಜ್ ಓರ್ವ ಶ್ರೇಷ್ಠ ನಟ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಎಂತಹುದೇ ಪಾತ್ರ ಕೊಟ್ಟರೂ ಮಾಡಿ ತೋರಿಸುತ್ತಾರೆ. ಅವರು ಹಿಟ್ ಸಿನಿಮಾಗಳ ಜೊತೆ ಫ್ಲಾಪ್ ಸಿನಿಮಾಗಳನ್ನೂ ನೀಡಿದ್ದೂ ಇದೆ. ಈ ಬಗ್ಗೆ ಅವರು ಮಾತನಾಡಿದ್ದರು.
ಬಹುತೇಕ ಎಲ್ಲರೂ ಹಣಕ್ಕಾಗಿ ನಟನೆ ಮಾಡುತ್ತಾರೆ. ಕೆಲವರು ಇದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ಪ್ರಕಾಶ್ ರಾಜ್ ಆ ರೀತಿ ಅಲ್ಲ. ಈ ವಿಚಾರದಲ್ಲಿ ಅವರದ್ದು ನೇರ ಮಾತು. ‘ಫಿಲ್ಮ್ ಕಂಪಾನಿಯನ್ ಸೌತ್’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನೂ ಮಾಡಿದ್ದು ಇದೆ ಎಂದು ಅವರು ಹೇಳಿದ್ದಾರೆ.
‘ಈ ಸಿನಿಮಾ ಮಾಡಿದರೆ ನನಗೆ ಹಣ ಸಿಗುತ್ತದೆ ಎಂದು ಯಾವಾಗಲೂ ಯೋಚನೆ ಮಾಡಿದ್ದೀರೇ’ ಎಂದು ಸಂದರ್ಶಕಿ ಪ್ರಕಾಶ್ ರಾಜ್ಗೆ ಪ್ರಶ್ನೆ ಮಾಡಿದ್ದಾರೆ. ‘ನಾನು ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನು ಮಾಡಿದ್ದೂ ಇದೆ. ನನಗೆ ಬ್ಯಾಲೆನ್ಸ್ ಮಾಡುವ ಅಗತ್ಯವಿಲ್ಲ. ಕಮರ್ಷಿಯಲ್ ಚಿತ್ರಗಳನ್ನು ನಾನು ಹೇಟ್ ಮಾಡಲ್ಲ. ಅವುಗಳಿಗೂ ದೊಡ್ಡ ಪ್ರೇಕ್ಷಕ ವರ್ಗ ಇದೆ. ಎಲ್ಲರೂ ಎಷ್ಟು ಶ್ರಮ ಹಾಕುತ್ತಾರೋ ಅಷ್ಟೇ ಶ್ರಮವನ್ನು ಅವರೂ ಹಾಕುತ್ತಾರೆ. ಅವರು ವಿಲನ್ ಆಗಿ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನನ್ನ ಮನಸ್ಸು ಅರೇ ಎಂಥ ಸಿನಿಮಾ ಮಾಡ್ತಾ ಇದೀಯಾ ಎನ್ನುತ್ತದೆ. ಆದರೆ, ನನಗೆ ಹಣ ಬೇಕಲ್ಲ’ ಎಂದಿದ್ದಾರೆ ಪ್ರಕಾಶ್ ರಾಜ್.
ಕೆಲವು ಸಿನಿಮಾಗಳನ್ನು ಪ್ರಕಾಶ್ ರೈ ಸಿನಿಮಾ ಫ್ರೀ ಆಗಿ ಮಾಡಿದ್ದಿದೆ. ಈ ಬಗ್ಗೆ ಪ್ರಕಾಶ್ ರೈ ಮಾತನಾಡಿದ್ದಾರೆ. ‘ಆ ಸಿನಿಮಾನ ಉಚಿತವಾಗಿ ಏಕೆ ಮಾಡುತ್ತಾ ಇದೀಯಾ ಎಂದು ಕೆಲವರು ಕೇಳುತ್ತಾರೆ. ಅದು ನನಗೆ ಬಿಟ್ಟ ನಿರ್ಧಾರ. ನಾನು ಸಿನಿಮಾನ ಫ್ರೀ ಆಗಿ ಮಾಡುತ್ತಾ ಇದೀನಿ ಎಂದು ಅವರಿಗೆ ಹೇಳಿದವರು ಯಾರು? ಒಂದು ಸಿನಿಮಾ ಮಾಡುವುದರಿಂದ ಸಿಗುವ ರಿವಾರ್ಡ್ಗಳು ಅವರಿಗೆ ಕಾಣುವುದಿಲ್ಲ’ ಎಂದಿದ್ದಾರೆ ಪ್ರಕಾಶ್ ರೈ.
‘ಮರದ ಸುತ್ತುತ್ತಾ ಡ್ಯಾನ್ಸ್ ಮಾಡೋದನ್ನು ಮಿಸ್ ಮಾಡಿಕೊಳ್ತೀರಾ’ ಎಂಬ ಪ್ರಶ್ನೆಗೆ, ‘ನಿಜವಾಗಿಯೂ ಇಲ್ಲ. ನನಗೆ ಹಾಗಿಲ್ಲ. ಅದಕ್ಕೆ ಸಾಕಷ್ಟು ಎಕ್ಸೈಸ್, ಪ್ರ್ಯಾಕ್ಟಿಸ್ ಬೇಕು. ನನಗೆ ಅದು ಇಷ್ಟ ಆಗುವುದಿಲ್ಲ ಎಂದರ್ಥವಲ್ಲ. ನನಗೆ ಕಂಫರ್ಟ್ ಇಲ್ಲ’ ಎಂದಿದ್ದಾರೆ ಪ್ರಕಾಶ್ ರೈ.
ಇದನ್ನೂ ಓದಿ: ಪ್ರಕಾಶ್ ರೈಗೆ ಇಷ್ಟವಾಯ್ತು ‘ಫೋಟೋ’ ಸಿನಿಮಾ; ಪ್ರೆಸೆಂಟ್ ಮಾಡಲು ಕಾರಣ ನೀಡಿದ ನಟ
ಪ್ರಕಾಶ್ ರೈ ಅವರು ನಟಿಸಿರುವ ‘ಗುಂಟೂರು ಖಾರಂ’ ಸಿನಿಮಾ ಈ ವರ್ಷ ರಿಲೀಸ್ ಆಯಿತು. ಈ ಸಿನಿಮಾಗೆ ಪ್ರಕಾಶ್ ರಾಜ್ ಹೀರೋ. ‘ಪುಷ್ಪ 2’, ‘ದೆ ಕಾಲ್ ಹಿಮ್ ಒಜಿ’, ‘ದೇವರ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಏಳು ಭಾಷೆಗಳನ್ನು ಅವರು ಮಾತನಾಡಬಲ್ಲರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ