ಪ್ರಕಾಶ್ ರೈಗೆ ಇಷ್ಟವಾಯ್ತು ‘ಫೋಟೋ’ ಸಿನಿಮಾ; ಪ್ರೆಸೆಂಟ್ ಮಾಡಲು ಕಾರಣ ನೀಡಿದ ನಟ
ಡಾಲಿ ಧನಂಜಯ್ ಹಾಗೂ ಲೂಸಿಯಾ ಪವನ್ ಕೂಡ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾಗೆ ಗೆಲುವು ಸಿಗಲಿ ಎಂದು ಹಾರೈಸಿದ್ದಾರೆ. ಪ್ರಕಾಶ್ ರೈ ಅವರಿಗೆ ಸಿನಿಮಾ ಇಷ್ಟ ಆಗಿದೆ. ಪ್ರಕಾಶ್ ರೈ ಅವರು ‘ನಿರ್ದಿಗಂತ’ ಬ್ಯಾನರ್ ಮೂಲಕ ಬೆಂಬಲವಾಗಿ ನಿಂತಿದ್ದಾರೆ. ‘ಮಸಾರಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗಿದೆ.
ಕನ್ನಡ ಚಿತ್ರರಂಗದಲ್ಲಿ ಪ್ರಯೋಗಗಳು ನಡೆಯುತ್ತಲೇ ಇವೆ. ಹೊಸ ತಂಡಗಳು ಚಿತ್ರರಂಗಕ್ಕೆ ಆಗಮನ ಆಗುತ್ತಲೇ ಇರುತ್ತದೆ. ಇದಕ್ಕೆ ಅನುಭವಿ ನಟರು ಹಾಗೂ ನಿರ್ದೇಶಕರು ಬೆಂಬಲ ನೀಡೋದು ನಡೆದು ಬಂದಿದೆ. ಈಗ ‘ಫೋಟೋ’ (Photo Movie) ಹೆಸರಿನ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರ ಕಳೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿತ್ತು. ಈ ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ. ಡಾಲಿ ಧನಂಜಯ್ ಹಾಗೂ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಈ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿ ತಂಡಕ್ಕೆ ಶುಭಕೋರಿದ್ದಾರೆ.
ಶ್ರೀರಂಗಪಟ್ಟದಲ್ಲಿ ಇರುವ ಪ್ರಕಾಶ್ ರಾಜ್ ಅವರ ನಿರ್ದಿಗಂತ ಫಾರಂ ಹೌಸ್ನಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ವೇಳೆ ಪ್ರಕಾಶ್ ರಾಜ್, ಪತ್ರಕರ್ತ ಜೋಗಿ, ನಿರ್ದೇಶಕ ಉತ್ಸವ್ ಗೋನವಾರ ಸೇರಿ ಇಡೀ ಚಿತ್ರತಂಡ ಇದರಲ್ಲಿ ಭಾಗಿ ಆಗಿತ್ತು. ಸಿನಿಮಾದ ಟ್ರೇಲರ್ ಬಗ್ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಕಾಶ್ ರಾಜ್ ಅವರು ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣವಾದ ವಿಚಾರ ಏನು ಎಂಬುದನ್ನು ಅವರು ಹೇಳಿದ್ದಾರೆ. ‘ನಮ್ಮ ದೇಹಕ್ಕೆ ಆದ ಗಾಯ ವಾಸಿಯಾಗುತ್ತದೆ. ಆದರೆ, ಸಮಾಜಕ್ಕೆ ಆಗೋ ಗಾಯಗಳು ಹಾಗಲ್ಲ. ಅವು ಸುಮ್ಮನ್ನಿದ್ದಷ್ಟು ಹೆಚ್ಚುತ್ತವೆ. ಫೋಟೋ ಸಿನಿಮಾ ನೋಡಿ 15ರಿಂದ 20 ನಿಮಿಷ ಮಾತನಾಡಲು ಆಗಲೇ ಇಲ್ಲ. ಅಷ್ಟು ದುಃಖ ಬಂತು. ಇದು ನಾವು ಲಾಕ್ಡೌನ್ನಲ್ಲಿ ನೋಡಿದ ನೈಜ ಸ್ಥಿತಿ ಇದು. ಈ ನೋವುಗಳನ್ನು ದಾಖಲೆ ಮಾಡಬೇಕು ಎಂದು 21 ವರ್ಷದ ಹುಡುಗನಿಗೆ ಅನಿಸಿದ್ದನ್ನು ಮೆಚ್ಚಬೇಕು’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಡಾಲಿ ಪಿಕ್ಚರ್ಸ್’ ಮೂಲಕ ಹೊಸ ಸುದ್ದಿ ನೀಡಿದ ಡಾಲಿ ಧನಂಜಯ್
ಡಾಲಿ ಧನಂಜಯ್ ಹಾಗೂ ಲೂಸಿಯಾ ಪವನ್ ಕೂಡ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾಗೆ ಗೆಲುವು ಸಿಗಲಿ ಎಂದು ಹಾರೈಸಿದ್ದಾರೆ. ಪ್ರಕಾಶ್ ರೈ ಅವರು ‘ನಿರ್ದಿಗಂತ’ ಬ್ಯಾನರ್ ಮೂಲಕ ಬೆಂಬಲವಾಗಿ ನಿಂತಿದ್ದಾರೆ. ‘ಮಸಾರಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಮಹಾದೇವ ಹಡಪದ್, ಜಹಾಂಗೀರ್, ಸಂಧ್ಯಾ ಅರಕೆರೆ, ಮತ್ತು ವೀರೇಶ್ ಗೊನ್ವಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್ ದಿವಾಕರನ್ ಛಾಯಾಗ್ರಹಣ, ರವಿ ಹಿರೇಮಠ್ ಹಿನ್ನೆಲೆ ಸಂಗೀತ, ಶಿವರಾಜ್ ಮೆಹೂ ಸಂಕಲನ ಮಾಡಿದ್ದಾರೆ. ಮಾರ್ಚ್ 15ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ