ಬದುಕನ್ನೇ ನರಕವಾಗಿಸಿದ ಪ್ರವಾಸ; ಮುಂಬೈ ಬಾಲಕಿ ಮೇಲೆ ಪುದುಚೆರಿಯಲ್ಲಿ ಸಾಮೂಹಿಕ ಅತ್ಯಾಚಾರ

ಪುದುಚೆರಿಯಲ್ಲಿ ಸಾಮೂಹಿಕ ಅತ್ಯಾಚಾರವೊಂದು ನಡೆದಿದ್ದು, ಈ ಭಯಾನಕ ಘಟನೆ ಆತಂಕ ಸೃಷ್ಟಿಸಿದೆ. ಮುಂಬೈನ ಹದಿಹರೆಯದ ಬಾಲಕಿ ಪುದುಚೇರಿಗೆ ಟ್ರಿಪ್ ಹೋಗಿದ್ದಾಗ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ.

ಬದುಕನ್ನೇ ನರಕವಾಗಿಸಿದ ಪ್ರವಾಸ; ಮುಂಬೈ ಬಾಲಕಿ ಮೇಲೆ ಪುದುಚೆರಿಯಲ್ಲಿ ಸಾಮೂಹಿಕ ಅತ್ಯಾಚಾರ
ಅತ್ಯಾಚಾರ
Follow us
ಸುಷ್ಮಾ ಚಕ್ರೆ
|

Updated on: Nov 06, 2024 | 6:23 PM

ಚೆನ್ನೈ: ಪುದುಚೆರಿಯಲ್ಲಿ ಲೈಂಗಿಕ ದೌರ್ಜನ್ಯದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪ್ರವಾಸಕ್ಕೆ ಬಂದಿದ್ದ ಮುಂಬೈನ 16 ವರ್ಷದ ಬಾಲಕಿಯ ಮೇಲೆ ಆಟೋ ಚಾಲಕ ಸೇರಿದಂತೆ ನಾಲ್ವರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಅಕ್ಟೋಬರ್ 30ರಂದು ಪುದುಚೇರಿಯಲ್ಲಿರುವ ತನ್ನ ಸಂಬಂಧಿಕರ ಮನೆಯಿಂದ ಆ ಹುಡುಗಿ ಕಾಣೆಯಾಗಿದ್ದು, ಆಕೆಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು. ರಜೆಯ ಹಿನ್ನೆಲೆಯಲ್ಲಿ ಮುಂಬೈನಿಂದ ಪುದುಚೆರಿಯ ಸಂಬಂಧಿಕರ ಮನೆಗೆ ಆಕೆ ಪ್ರವಾಸ ಹೋಗಿದ್ದಳು. ಆಗ ಈ ಘಟನೆ ನಡೆದಿದೆ.

ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದರು. ಆ ಹುಡುಗಿ ಆಟೋ ಹತ್ತಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆಟೋ ಚಾಲಕ ಕಾಜಾ ಮೊಯ್ದೀನ್‌ನನ್ನು ವಿಚಾರಣೆಗೊಳಪಡಿಸಿದಾಗ ಆತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ತಂತಿರಾಯನ್ ಕುಪ್ಪಂನ ಬೀಚ್ ರೆಸಾರ್ಟ್‌ಗೆ ಇಳಿಸಿದ್ದು, ಚೆನ್ನೈನ ಮೂವರು ಯುವಕರು ಆಕೆಯ ಮೇಲೆ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Crime News: ಮದುವೆಯಾಗಬೇಕಿದ್ದ ಯುವಕನೆದುರು ಕಾಡಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಆಟೊ ಚಾಲಕ 16 ವರ್ಷದ ಬಾಲಕಿಗೆ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸುವ ಆಮಿಷವೊಡ್ಡಿ ಅತ್ಯಾಚಾರ ನಡೆಸಿದ್ದಾನೆ. ನವೆಂಬರ್ 2ರಂದು ಪುದುಚೇರಿ ಬೀಚ್‌ನಿಂದ ಆ ಬಾಲಕಿಯನ್ನು ರಕ್ಷಿಸಲಾಗಿದ್ದು, ವಿಚಾರಣೆ ವೇಳೆ ಆಟೋ ಚಾಲಕ ಮತ್ತು ಮೂವರು ಯುವಕರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮತ್ತಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳು ಪುದುಚೇರಿ ಸುತ್ತಮುತ್ತ ತೋರಿಸುವುದಾಗಿ ಭರವಸೆ ನೀಡಿ ಬಾಲಕಿಯನ್ನು ವಂಚಿಸಿ, ಮದ್ಯ ಕುಡಿಸಿ, ನಂತರ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದರು. ಬಳಿಕ ಬಾಲಕಿಯನ್ನು ಹಾಸ್ಟೆಲ್‌ಗೆ ಕರೆದೊಯ್ದು ಮತ್ತೆ ಮೂವರು ಯುವಕರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾಜಾ ಮೊಯ್ದೀನ್ ಸೇರಿ ಮೂವರನ್ನು ಬಂಧಿಸಿದ್ದಾರೆ. ಈ ಪ್ರಕರಣವು ಈ ವರ್ಷದ ಆರಂಭದಲ್ಲಿ ಪುದುಚೇರಿಯಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆಯನ್ನು ಹೋಲುತ್ತದೆ. ಅಲ್ಲಿ 9 ವರ್ಷದ ಬಾಲಕಿಯ ಶವ ಚರಂಡಿಯಲ್ಲಿ ಪತ್ತೆಯಾಗಿತ್ತು. ಕೊಲೆ ಮಾಡುವ ಮೊದಲು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ