Crime News: ಪ್ರತ್ಯೇಕ ಮೂರು ಕೊಲೆ ಪ್ರಕರಣಗಳ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

| Updated By: Rakesh Nayak Manchi

Updated on: Jul 30, 2022 | 10:14 AM

ಬೆಂಗಳೂರು ಗ್ರಾಮಾಂತರ, ಮೈಸೂರು ಮತ್ತು ಮಂಡ್ಯದಲ್ಲಿ ನಡೆದ ಮೂರು ಪ್ರತ್ಯೇಕ ಕೊಲೆ ಪ್ರಕರಣಗಳ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದುರ್ಗದಲ್ಲಿ ಮೂವರು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

Crime News: ಪ್ರತ್ಯೇಕ ಮೂರು ಕೊಲೆ ಪ್ರಕರಣಗಳ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ಸಾಂಧರ್ಬಿಕ ಚಿತ್ರ
Follow us on

ಬೆಂಗಳೂರು ಗ್ರಾಮಾಂತರ: ಮನೆಗೆ ನುಗ್ಗಿ ಒಂಟಿ ಮಹಿಳೆಯ ಹತ್ಯೆಗೈದು ದರೋಡೆ ನಡೆಸಿದ ಪ್ರಕರಣ ಸಂಬಂಧ ಮೂವರು ಹಂತಕರ ಪೈಕಿ ಇಬ್ಬರನ್ನು ದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಪಶುಪತಿ ಅಲಿಯಾಸ್ ಪಪಿಯಾ ಮತ್ತು ಧೀರಜ್ ಕುಮಾರ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಆರೋಪಿಯ ಬಂಧನಕ್ಕೆ ಶೋಧಕಾರ್ಯ ಮುಂದುವರಿದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರು, ಅಂಚನಾ ತುಳಸಿಯಾನ ಎಂಬ ಮಹಿಳೆಯ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆಗೈದು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದರು. ಜು.15ರಂದು ನಡೆದ ಈ ಕೊಲೆ ಪ್ರಕರಣವನ್ನು ಬೇಧಿಸಿದ ದೇವನಹಳ್ಳಿ ಠಾಣಾ ಪೊಲೀಸರು, ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಾರ್ ಮುಂದೆ ವ್ಯಕ್ತಿಯ ಬರ್ಬರ ಕೊಲೆ; ಆರೋಪಿ ಅರೆಸ್ಟ್

ಮಂಡ್ಯ: ಶ್ರೀರಂಗಪಟ್ಟಣದ ಬೆಳಗೊಳದಲ್ಲಿ ಬಾರ್ ಮುಂದೆ ನಡೆದ ವ್ಯಕ್ತಿಯ ಭೀಕರ ಹತ್ಯೆ ಪ್ರಕರಣ ಸಂಬಂಧ ಕೆ.ಆರ್.ಎಸ್ ಠಾಣೆ ಪೊಲೀಸರು ಹಂತಕನನ್ನ ಬಂಧಿಸುವಯಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆ ಶ್ರೀರಂಗಪಟ್ಟಣದ ಬೆಳಗೊಳದ ಬಾರ್ ಮುಂದೆ ರವಿ ಎಂಬ ವ್ಯಕ್ತಿ ಶರತ್ ಎಂಬಾತನ ಅತ್ತೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ಕೋಪಗೊಂಡ ಶರತ್, ಮಾತನಾಡಿಸುವ ನೆಪದಲ್ಲಿ ರವಿ ಬಳಿ ಬಂದು ಮಚ್ಚಿನಿಂದ ದಾಳಿ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದನು. ಘಟನೆಯಲ್ಲಿ ಕತ್ತು ಹಾಗೂ ತಲೆಗೆ ಗಂಭೀರವಾಗಿ ಗಾಯಗೊಂಡು ರವಿ ಸಾವನ್ನಪ್ಪಿದ್ದನು. ಪ್ರಕರಣ ಸಂಬಂಧ ಶರತ್​ನಲ್ಲಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಾಲು ತರಲು ಹೋಗಿದ್ದ ಮಹಿಳೆಯ ಕೊಲೆ; ಆರೋಪಿಯ ಬಂಧನ

ಮೈಸೂರು: ಹಾಲು ತರಲು ಹೋಗಿದ್ದ ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಆರೋಪಿಯನ್ನು ಕೌಲಂದೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶನಿವಾರ ಬೆಳಗ್ಗೆ ಮಿಣುಕಮ್ಮ (45) ಎಂಬವರು ಹಾಲು ಹೋಗಿದ್ದಾಗ ದಾಳಿ ನಡೆಸಿದ ವ್ಯಕ್ತಿಯೋರ್ವ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪರಾರಿಯಾಗಿದ್ದನು. ನಂಜನಗೂಡು ತಾಲ್ಲೂಕು ಹಳೇಪುರ ಗ್ರಾಮದಲ್ಲಿ ನಡೆದ ಈ ಪ್ರಕರಣವನ್ನು ಬೇಧಿಸಿದ ಪೊಲೀಸರು, ಅದೇ ಗ್ರಾಮದ ಮಹದೇವನಾಯಕ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ಗಾಂಜಾ ಮಾರಾಟ; ಮೂವರ ಸೆರೆ

ಚಿತ್ರದುರ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳ ಸಹಿತ 85 ಸಾವಿರ ರೂ. ಮೌಲ್ಯದ 1 ಕೆಜಿ 410 ಗ್ರಾಂ ಗಾಂಜಾವನ್ನು ಜಿಲ್ಲೆಯ ಚಳ್ಳಕೆರೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಳ್ಳಕೆರೆಯ ಪಾವಗಡ ರಸ್ತೆಯಲ್ಲಿ ಮೂವರು ಆರೋಪಿಗಳು ಗಾಂಜಾ ಮಾರಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹರವಿಗೊಂಡನಹಳ್ಳಿ ಗ್ರಾಮದ ಮಾರುತಿ, ಸುಲೇಮಾನ್, ಸಿಕಂದರ್ ಬಂಧಿತ ಆರೋಪಿಗಳು.