ಹಾಡಹಗಲೇ ಒಂಟಿ ಮಹಿಳೆಯ ಬೆದರಿಸಿ, ಬರ್ಬರ ಹತ್ಯೆ -ಚಿನ್ನಾಭರಣ ದರೋಡೆ
ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪತಿ ಊಟಕ್ಕೆ ಬಂದಾಗ ಪತ್ನಿ ಕೊಲೆಯಾಗಿರುವುದು ಬಯಲಿಗೆ ಬಂದಿದೆ. ಮನೆಗೆ ನುಗ್ಗಿ ಮಹಿಳೆಯ ಬೆದರಿಸಿ, ಲಾಕರ್ ಕೀ ಪಡೆದು ಚಿನ್ನ, ಹಣ ದೋಚಿ ಬಳಿಕ ಮಹಿಳೆ ಹತ್ಯೆಗೈದಿದ್ದಾರೆ ಹಂತಕರು. ಹಾಸನ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾಸನ: ಹಾಡಹಗಲೇ ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯೊಬ್ಬರನ್ನು (Home Alone) ಬರ್ಬರ ಹತ್ಯೆ ಮಾಡಿ, ಚಿನ್ನಾಭರಣ ದರೋಡೆ (robbery) ಮಾಡಲಾಗಿದೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಹಾಸನ ನಗರದ (Hassan) ಲಕ್ಷ್ಮಿಪುರಂ ಬಡಾವಣೆಯಲ್ಲಿ ಮನೆಗೆ ನುಗ್ಗಿ ಕುತ್ತಿಗೆ ಬಿಗಿದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಮಂಜುಳಾ (42) ಹತ್ಯೆಗೀಡಾದ ಮಹಿಳೆ. ಇವರ ಪತಿ ಕುಮಾರ್ ಜ್ಯುವೆಲರಿ ಶಾಪ್ ನಡೆಸುತ್ತಿದ್ದಾರೆ.
ಇಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪತಿ ಊಟಕ್ಕೆ ಬಂದಾಗ ಪತ್ನಿ ಕೊಲೆಯಾಗಿರುವುದು ಬಯಲಿಗೆ ಬಂದಿದೆ. ಮನೆಗೆ ನುಗ್ಗಿ ಮಹಿಳೆಯ ಬೆದರಿಸಿ, ಲಾಕರ್ ಕೀ ಪಡೆದು ಚಿನ್ನ, ಹಣ ದೋಚಿ ಬಳಿಕ ಮಹಿಳೆ ಹತ್ಯೆಗೈದಿದ್ದಾರೆ ಹಂತಕರು. ಹಾಸನ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗು ಶ್ವಾನದಳ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.