ಮುಂಬೈ: ಪ್ರೀತಿ, ಬ್ರೇಕಪ್ ಎಲ್ಲವೂ ಈಗಿನ ಕಾಲದಲ್ಲಿ ಸಾಮಾನ್ಯ. ಆದರೆ, ಕೆಲವೊಬ್ಬರು ತಾವು ಪ್ರೀತಿಸಿದವರು ತನಗೆ ಸಿಗಲಿಲ್ಲ ಎಂಬುದನ್ನೇ ತೀವ್ರವಾಗಿ ಮನಸಿಗೆ ಹಚ್ಚಿಕೊಂಡು ಆತ್ಮಹತ್ಯೆ (Suicide) ಮಾಡಿಕೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಇಲ್ಲೊಬ್ಬಳು ಯುವತಿ ತಾನು ಪ್ರೀತಿಸಿದ ಹುಡುಗಿ ಬೇರೊಬ್ಬಳೊಂದಿಗೆ ಮದುವೆಯಾಗುತ್ತಿರುವ ವಿಷಯ ತಿಳಿದು ಆ ಮದುವೆಯನ್ನು ನಿಲ್ಲಿಸಿದ್ದಾನೆ. ತನ್ನ ಮದುವೆಗೆ (Marriage) ಅಡ್ಡಿಯಾದ ತನ್ನ ಮಾಜಿ ಪ್ರಿಯಕರನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕೆಂದು ಹಠ ತೊಟ್ಟ ಆ ಯುವತಿ ಆತನಿಗೆ ಬೆಂಕಿ ಹಚ್ಚಿ, ಸುಟ್ಟು ಹಾಕಿದ್ದಾಳೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಶುಕ್ರವಾರ ಮಧ್ಯಾಹ್ನ 31 ವರ್ಷದ ವ್ಯಕ್ತಿಯನ್ನು ಆತನ ಮಾಜಿ ಪ್ರೇಯಸಿ ಮತ್ತು ಆಕೆಯ ಕುಟುಂಬದ ಸದಸ್ಯರು ಸುಟ್ಟು ಹಾಕಿದ್ದಾರೆ. ಬೆಂಕಿ ಹಚ್ಚಿದ್ದರಿಂದ ತೀವ್ರವಾದ ಸುಟ್ಟ ಗಾಯಗಳಿಂದ ಭಾನುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಗೋರಖ್ ಬಚಾವ್ ಎಂದು ಗುರುತಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿಕ್ ಪೊಲೀಸರು ಕೊಲೆ ಯತ್ನದ ಆರೋಪದ ಮೇಲೆ ಮೃತ ಯುವಕನ 23 ವರ್ಷದ ಮಾಜಿ ಪ್ರೇಯಸಿ ಕಲ್ಯಾಣಿ ಸೋನಾವಾನೆ ಮತ್ತು ಆಕೆಯ ನಾಲ್ವರು ಕುಟುಂಬ ಸದಸ್ಯರನ್ನು ಬಂಧಿಸಿದ್ದಾರೆ. ಈ ಪ್ರಕರಣದ ಎಲ್ಲಾ ಆರೋಪಿಗಳ ಮೇಲೆ ಇದೀಗ ಕೊಲೆ ಪ್ರಕರಣ ದಾಖಲಾಗಿದೆ. ನಾಸಿಕ್‌ನ ದೇವ್ಲಾ ತಾಲೂಕಿನ ಲೋಹನೇರ್ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಆರೋಪಿ ಯುವತಿ ಕಲ್ಯಾಣಿಯ ತಾಯಿ ನಿರ್ಮಲಾ, ತಂದೆ ಗೋಕುಲ್ ಮತ್ತು ಇಬ್ಬರು ಸಹೋದರರಾದ ಹೇಮಂತ್ ಮತ್ತು ಪ್ರಸಾದ್ ಈ ಕೊಲೆಯನ್ನು ಮಾಡಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಬ್ರೇಕಪ್ ನಂತರ ಕಲ್ಯಾಣಿಯ ಮದುವೆಯ ಪ್ರಯತ್ನವನ್ನು ಹಾಳುಮಾಡುವ ಹಿಂದೆ ಗೋರಖ್ನ ಕೈವಾಡವಿದೆ ಎಂದು ಆರೋಪಿಗಳು ನಂಬಿದ್ದರು. ತನ್ನ ಮದುವೆ ನಿಲ್ಲಿಸಿದ್ದಕ್ಕೆ ಸೇಡಿ ತೀರಿಸಿಕೊಳ್ಳಲು ತನ್ನ ಮನೆಯವರ ಸಹಾಯ ಕೋರಿದ ಆ ಯುವತಿ ಆ ಯುವಕನಿಗೆ ಎಚ್ಚರಿಕೆ ನೀಡಿದ್ದರು. ಆದರೂ ಆತ ಸುಮ್ಮನಾಗಲಿಲ್ಲ. ಇದರಿಂದ ಕೋಪಗೊಂಡ ಅವರು ಆತನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಮೃತ ಗೋರಖ್ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದರು. ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ಕಲ್ಯಾಣಿ ಹಾಗೂ ಆಕೆಯ ಕುಟುಂಬಸ್ಥರು ಮಾರುಕಟ್ಟೆಯಲ್ಲಿ ನಿಂತಿದ್ದ ಆತನಿಗೆ ಮೊದಲು ಕಬ್ಬಿಣದ ರಾಡ್‌ಗಳಿಂದ ಥಳಿಸಿದ್ದಾರೆ. ಈ ಮಧ್ಯೆ ಕಲ್ಯಾಣಿಯ ತಾಯಿ ನಿರ್ಮಲಾ ಆ ಯುವಕನ ಮೇಲೆ ಪೆಟ್ರೋಲ್ ಸುರಿದಿದ್ದಾರೆ. ನಂತರ ಕಲ್ಯಾಣಿ ಬೆಂಕಿಕಡ್ಡಿ ಗೀರಿ ಬೆಂಕಿ ಹಚ್ಚಿದ್ದಾಳೆ ಎಂದು ಡಿಯೋಲಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿಲೀಪ್ ಲಾಂಡ್ಜೆ ತಿಳಿಸಿದ್ದಾರೆ.
ಬೆಂಕಿ ಹಚ್ಚಿದ್ದರಿಂದ ಕೂಗುತ್ತಿದ್ದ ಆತನನ್ನು ಸ್ಥಳೀಯ ನಿವಾಸಿಗಳು ಸಂತ್ರಸ್ತೆಯನ್ನು ನಾಗ್ಪುರ ಸಿವಿಲ್ ಆಸ್ಪತ್ರೆಗೆ ಸಾಗಿಸಿದರು. ಬೆಂಕಿ ಹಚ್ಚಿದ್ದರಿಂದ ಆ ಯುವಕನ ದೇಹದಲ್ಲಿ ಶೇ. 80ರಿಂದ 90ರಷ್ಟು ಸುಟ್ಟ ಗಾಯಗಳಾಗಿತ್ತು. ಗೋರಖ್ ಮೇಲಿನ ದಾಳಿಯ ಬಗ್ಗೆ ಸ್ಥಳೀಯ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಐವರು ಕುಟುಂಬ ಸದಸ್ಯರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಂಗಳವಾರದವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅವರನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಾಸಿಕ್) ಮಾಧುರಿ ಕಂಗನೆ ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಅಮ್ಮನಿಗೆ ಔಷಧ ತರಲು ಹೋದ ಬಾಲಕಿ ಮೇಲೆ ಪಕ್ಕದ ಮನೆಯವನಿಂದ ಅತ್ಯಾಚಾರ
Murder: ಸ್ನಾನಕ್ಕೆ ಹೋದ ಗಂಡನಿಗೆ ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ