Crime News: ಅಮ್ಮನಿಗೆ ಔಷಧ ತರಲು ಹೋದ ಬಾಲಕಿ ಮೇಲೆ ಪಕ್ಕದ ಮನೆಯವನಿಂದ ಅತ್ಯಾಚಾರ

Crime News: ಅಮ್ಮನಿಗೆ ಔಷಧ ತರಲು ಹೋದ ಬಾಲಕಿ ಮೇಲೆ ಪಕ್ಕದ ಮನೆಯವನಿಂದ ಅತ್ಯಾಚಾರ
ಸಾಂದರ್ಭಿಕ ಚಿತ್ರ

Rape Case: ಅಮ್ಮನೊಂದಿಗೆ ನಾನು ಮನೆಯಲ್ಲಿ ಒಬ್ಬಳೇ ಇದ್ದೆ. ತಾಯಿಯ ಆರೋಗ್ಯ ಹದಗೆಟ್ಟಿದ್ದರಿಂದ ಪಕ್ಕದ ಮನೆಯವರ ಬಳಿ ಸಹಾಯ ಕೇಳಿದ್ದೆ. ಆದರೆ, ಪಕ್ಕದ ಮನೆಯ ವ್ಯಕ್ತಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. 

TV9kannada Web Team

| Edited By: Sushma Chakre

Jan 26, 2022 | 2:40 PM

ನವದೆಹಲಿ: ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಾಯಿಗೆ ಔಷಧ ತರಲು ಹೊರಟಿದ್ದ ಮಗಳು ಪಕ್ಕದ ಮನೆಯ ಅಂಕಲ್ ಬಳಿ ಸಹಾಯ ಕೋರಿದ್ದಳು. ಆದರೆ, ಆಕೆಗೆ ಸಹಾಯ ಮಾಡಲು ಬಂದ ಅಂಕಲ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿ ತನ್ನ ಅಸ್ವಸ್ಥ ತಾಯಿಗೆ ಸಹಾಯ ಕೇಳಿ ಪಕ್ಕದ ಮನೆಗೆ ಹೋಗಿದ್ದರು. ಆಗ ಅಲ್ಲಿ ಪಕ್ಕದ ಮನೆಯ ಅಂಕಲ್ ಆಕೆಯ ಮೇಲೆ ಅತ್ಯಾಚಾರ (Rape) ನಡೆಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಜನವರಿ 22ರಂದು ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಮರುದಿನ ಪ್ರಕರಣ ದಾಖಲಾಗಿದೆ. ದೆಹಲಿಯ ಪಾಂಡವ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಬಾಲಕಿ, ನನ್ನ ತಂದೆ ಊರಿಗೆ ಹೋಗಿದ್ದರು. ನನ್ನ ತಾಯಿಗೆ ಹುಷಾರಿರಲಿಲ್ಲ. ಅಮ್ಮನೊಂದಿಗೆ ನಾನು ಮನೆಯಲ್ಲಿ ಒಬ್ಬಳೇ ಇದ್ದೆ. ತಾಯಿಯ ಆರೋಗ್ಯ ಹದಗೆಟ್ಟಿದ್ದರಿಂದ ಪಕ್ಕದ ಮನೆಯವರ ಬಳಿ ಸಹಾಯ ಕೇಳಿದ್ದೆ. ಆದರೆ, ಪಕ್ಕದ ಮನೆಯ ವ್ಯಕ್ತಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

ಬಾಲಕಿಯ ಪಕ್ಕದ ಮನೆಯ ಅರುಣ್ ಎಂಬ ವ್ಯಕ್ತಿ ಔಷಧಿ ಕೊಡಿಸುವ ನೆಪದಲ್ಲಿ ಬಾಲಕಿಯನ್ನು ತಮ್ಮ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಇದಲ್ಲದೆ, ಆಕೆಗೆ ಕೊಲೆ ಬೆದರಿಕೆ ಹಾಕಿ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಇದನ್ನೂ ಓದಿ: Gang Rape: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಗುಪ್ತಾಂಗಕ್ಕೆ ಚೂಪಾದ ವಸ್ತು ಹಾಕಿದ ಕಾಮುಕರು!

Rape Case: ಆಟವಾಡುತ್ತಿದ್ದ 6 ವರ್ಷದ ಮಗುವಿನ ಮೇಲೆ ಕಾಮುಕನಿಂದ ಅತ್ಯಾಚಾರ; ಬಾಲಕಿ ಸ್ಥಿತಿ ಗಂಭೀರ

Follow us on

Related Stories

Most Read Stories

Click on your DTH Provider to Add TV9 Kannada