ಬನಶಂಕರಿಯಲ್ಲಿ ವ್ಯಕ್ತಿ ಕೊಲೆ! ಮೂಟೆ ಕಟ್ಟಿ ಕೆರೆಗೆ ಶವ ಎಸೆದ ದುಷ್ಕರ್ಮಿಗಳು
ಮಂಜುನಾಥ್ ಎಂಬುವವನು ದಿವಾಕರ್ ಶೆಟ್ಟಿ ಜೊತೆ ಕೊನೆಯದಾಗಿ ಮಾತನಾಡಿದ್ದನಂತೆ. ಈ ಹಿಂದೆ 20 ಗ್ರಾಂ ಚಿನ್ನವನ್ನ ಮಂಜುನಾಥ್ ಗಿರವಿ ಇಟ್ಟಿದ್ದ. ಹಣ ನೀಡದಿದ್ದಕ್ಕೆ ಮೃತ ದಿವಾಕರ್ ಶೆಟ್ಟಿ ಧಮ್ಕಿ ಹಾಕಿದ್ದಾರೆ.
ಬೆಂಗಳೂರು: ದುಷ್ಕರ್ಮಿಗಳು ವ್ಯಕ್ತಿಯನ್ನ ಕೊಲೆಗೈದು (Murder) ಮಾಗಡಿಯ ಹೊನ್ನಾಪುರ ಕೆರೆಗೆ (Lake) ಶವ ಎಸೆದು ಹೋಗಿದ್ದಾರೆ. ಕೊಲೆಗೈದ ಬಳಿಕ ಮೃತದೇಹವನ್ನ ಮೂಟೆ ಕಟ್ಟಿ ಬೈಕ್ನಲ್ಲಿ ಸಾಗಿಸಿದ್ದಾರೆ. ದಿವಾಕರ್ ಶೆಟ್ಟಿ ಕೊಲೆಯಾದ ದುರ್ದೈವಿ. ಮೃತ ದಿವಾಕರ್ ಶೆಟ್ಟಿ ಚಿನ್ನದ ವ್ಯಾಪಾರ ಮಾಡಿ ಕೊಂಡಿದ್ದರು. ದಿವಾಕರ್ ನಾಪತ್ತೆಯಾಗಿರುವ ಕುರಿತು ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಹೊನ್ನಾಪುರ ಕೆರೆಯಲ್ಲಿ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಬೆಂಗಳೂರಿನ ಬನಶಂಕರಿಯಲ್ಲಿ ಕೊಲೆಗೈದು ಮಾಗಡಿಯ ಹೊನ್ನಾಪುರ ಕೆರೆಗೆ ಶವ ಹಾಕಿದ್ದಾರೆ.
ಮಂಜುನಾಥ್ ಎಂಬುವವನು ದಿವಾಕರ್ ಶೆಟ್ಟಿ ಜೊತೆ ಕೊನೆಯದಾಗಿ ಮಾತನಾಡಿದ್ದನಂತೆ. ಈ ಹಿಂದೆ 20 ಗ್ರಾಂ ಚಿನ್ನವನ್ನ ಮಂಜುನಾಥ್ ಗಿರವಿ ಇಟ್ಟಿದ್ದ. ಹಣ ನೀಡದಿದ್ದಕ್ಕೆ ಮೃತ ದಿವಾಕರ್ ಶೆಟ್ಟಿ ಧಮ್ಕಿ ಹಾಕಿದ್ದಾರೆ. ಈ ಹಿನ್ನೆಲೆ ದಿವಾಕರ್ನ ಕತ್ತು ಹಿಸುಕಿ ಕೊಂದಿದ್ದ ಮಂಜುನಾಥ್ ಮತ್ತು ರಾಜು ಎಂಬುವವರು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್, ರಾಜು ಅರೆಸ್ಟ್ ಆಗಿದ್ದಾರೆ.
ಸದ್ಯ ಮಾಗಡಿಯ ಹೊನ್ನಾಪುರ ಕೆರೆಯಲ್ಲಿ ದಿವಾಕರ್ ಶೆಟ್ಟಿ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಮಾಗಡಿ ಹಾಗೂ ಪುಟ್ಟೇನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಪೊಲೀಸರು ಕಿಮ್ಸ್ ಅಸ್ಪತ್ರೆಗೆ ಸಾಗಿಸಿದ್ದಾರೆ. ಕೆರೆಯಲ್ಲಿ ಮೃತನ ಬೈಕ್ ಸಹ ಪತ್ತೆಯಾಗಿದೆ.
10 ಗಂಟೆ ಬಳಿಕ ಮರಣೋತ್ತರ ಪರೀಕ್ಷೆ: ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತದೇಹ ಇದೆ. 10 ಗಂಟೆ ಬಳಿಕ ಮರಣೋತ್ತರ ಪರೀಕ್ಷೆ ನಡೆಯುತ್ತದೆ. ಮಣರೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ.
ಅಪರಿಚಿತ ವೃದ್ಧನ ಶವ ಪತ್ತೆ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದುರ್ಗಾವರ ಗ್ರಾಮದ ಬಳಿ ರೈಲು ಹಳಿಯ ಮೇಲೆ ಅಪರಿಚಿತ ವೃದ್ಧನ ಶವ ಪತ್ತೆಯಾಗಿದೆ. ರೈಲಿಗೆ ತಲೆ ಕೊಟ್ಟು 65 ವರ್ಷದ ವೃದ್ಧ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಲಾರಿ ತಡೆದು ದರೋಡೆಗೆ ಯತ್ನ ಲಾರಿ ತಡೆದು ದರೋಡೆಗೆ ಯತ್ನಿಸಿದ ಯುವಕನಿಗೆ ಲಾರಿ ಚಾಲಕರು ಥಳಿಸಿದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ನಡೆದಿದೆ. ಆರೋಪಿ ಯುವಕನನ್ನು ಲಾರಿ ಚಾಲಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ
ಸಲ್ಮಾನ್ ಕಡೆಗೆ ವಿಚಿತ್ರ ಲುಕ್ ನೀಡಿದ ದೀಪಿಕಾ; ಎಲ್ಲಕ್ಕೂ ಕಾರಣ ಭಾಯಿ ಇಟ್ಟ ಹೊಸ ಹೆಸರು!
ಮುಳುಗುವ ಹಡಗಿನಲ್ಲಿ ಯಾರಾದರೂ ಕುಳಿತುಕೊಳ್ತಾರಾ; ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಕಾರಜೋಳ ತಿರುಗೇಟು
Published On - 9:21 am, Wed, 26 January 22