ತಡರಾತ್ರಿ 2ಗಂಟೆಗೆ ವ್ಯಾಯಾಮ ಮಾಡುತ್ತಿದ್ದ ಮಗನನ್ನು ತಡೆದ ತಾಯಿ; ಮರುಕ್ಷಣವೇ ಆಕೆಯನ್ನು ಹೊಡೆದು ಕೊಂದ ಪುತ್ರ

ತಡರಾತ್ರಿ 2ಗಂಟೆಗೆ ವ್ಯಾಯಾಮ ಮಾಡುತ್ತಿದ್ದ ಮಗನನ್ನು ತಡೆದ ತಾಯಿ; ಮರುಕ್ಷಣವೇ ಆಕೆಯನ್ನು ಹೊಡೆದು ಕೊಂದ ಪುತ್ರ
ಸಾಂಕೇತಿಕ ಚಿತ್ರ

ಸುಚಿತ್ರಾ ಅಪಾಯದಿಂದ ಪಾರಾಗಿದ್ದಾಳೆ. ಸುಧೀರ್​​ನನ್ನು ಇನ್ನೂ ಬಂಧಿಸಿಲ್ಲ. ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಶೀಘ್ರವೇ ಬಂಧಿಸುತ್ತೇವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 

TV9kannada Web Team

| Edited By: Lakshmi Hegde

Jan 25, 2022 | 9:43 AM

ವ್ಯಾಯಾಮ ಮಾಡಿದ್ದು ಸಾಕು, ನಿಲ್ಲಿಸು ಎಂದು ಹೇಳಿದ ತಾಯಿಯನ್ನು ಡಂಬೆಲ್​​​ನಿಂದ  ಮಗ ಹತ್ಯೆ ಮಾಡಿದ ದುರ್ಘಟನೆ ಹೈದರಾಬಾದ್​​ನ ಸುಲ್ತಾನ್ ಬಜಾರ್​​ನಲ್ಲಿ ನಡೆದಿದೆ. ಅಷ್ಟೇ ಅಲ್ಲ ಈತ ತಾಯಿಯನ್ನು ಕಾಪಾಡಲು ಬಂದ ಸೋದರಿಯ ಮೇಲೆ ಕೂಡ ಹಲ್ಲೆ ನಡೆಸಿದ್ದಾನೆ.  ಆರೋಪಿಯ ಹೆಸರು ಕೊಂಡಾ ಸುಧೀರ್ ಕುಮಾರ್​ (24). ಮೃತ ಮಹಿಳೆ ಹೆಸರು ಕೊಂಡಾ ಪಾಪಮ್ಮ. ಗಾಯಗೊಂಡ ಯುವತಿ ಸುಚಿತ್ರಾ. ಸುಧೀರ್ ಕುಮಾರ್ ಮಾನಸಿಕವಾಗಿ ಸ್ವಲ್ಪ ಮಟ್ಟಿಗೆ ಅಸ್ವಸ್ಥ ಎನ್ನಲಾಗಿದ್ದು, ಜನವರಿ 24ರ ತಡರಾತ್ರಿ 2 ಗಂಟೆ ಹೊತ್ತಿಗೆ ಒಂದೇ ಸಮ ವ್ಯಾಯಾಮ ಮಾಡುತ್ತಿದ್ದ. ಅದನ್ನು ನೋಡಿದ ತಾಯಿ, ಮಗನನ್ನು ಮಲಗುವಂತೆ ಹೇಳಿದರು. ಆದರೆ ಕೋಪಗೊಂಡ ಆತ ಕೈಯಲ್ಲಿ ಹಿಡಿದಿದ್ದ ಡಂಬಲ್ಸ್​ನಿಂದ ಆಕೆಗೆ ಹೊಡೆದು ಕೊಂದಿದ್ದಾನೆ. 

ಸದ್ಯ ಸುಚಿತ್ರಾ ಅಪಾಯದಿಂದ ಪಾರಾಗಿದ್ದಾಳೆ. ಸುಧೀರ್​​ನನ್ನು ಇನ್ನೂ ಬಂಧಿಸಿಲ್ಲ. ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಶೀಘ್ರವೇ ಬಂಧಿಸುತ್ತೇವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.  ಕೊಂಡಾ ಸುಧೀರ್​ ಶಿಕ್ಷಣ ಮುಗಿಸಿದ ಬಳಿಕ ಒಂದು ಫುಡ್​ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ವರ್ಷದ ಹಿಂದೆ ಆ ಕೆಲಸವನ್ನೂ ಬಿಟ್ಟು ಮನೆಯಲ್ಲೇ ಇರುತ್ತಿದ್ದ ಎಂಬ ಮಾಹಿತಿ ಸಿಕ್ಕಿದ್ದಾಗಿ ಪೊಲೀಸರು ತಿಳಿಸಿದ್ದಾರೆ.  ಇನ್ನು ಆತನ ಮಾನಸಿಕ ಸ್ಥಿತಿ ಸ್ಥಿಮಿತದಲ್ಲಿಲ್ಲ. ಇತ್ತೀಚೆಗೆ ಕೋಟಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಕಳೆದ 7 ವರ್ಷಗಳ ಹಿಂದೆಯೇ ಆತನ ತಂದೆ ತೀರಿಕೊಂಡಿದ್ದಾರೆ. ಆಗಿನಿಂದಲೂ ತಾಯಿ, ಸೋದರಿ ಮತ್ತು ಈತ ಒಟ್ಟಿಗೇ ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೈಕ್ ಸವಾರರೇ ಎಚ್ಚರ! ಹಾಫ್ ಹೆಲ್ಮೆಟ್ ಧರಿಸಿದರೆ ಸಾವು ಖಚಿತ; ನಿಮ್ಹಾನ್ಸ್ ತಜ್ಞ ವೈದ್ಯರು, ಪೊಲೀಸರ ಅಧ್ಯಯನದಲ್ಲಿ ಮಹತ್ವದ ಅಂಶ ಬೆಳಕಿಗೆ

Follow us on

Related Stories

Most Read Stories

Click on your DTH Provider to Add TV9 Kannada