AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coronavirus cases in India ಹೊಸ ಕೊವಿಡ್-19 ಪ್ರಕರಣ 3 ಲಕ್ಷಕ್ಕಿಂತ ಕಡಿಮೆ; ಧನಾತ್ಮಕ ದರ ಶೇ 15.52

Covid 19: ದೈನಂದಿನ ಧನಾತ್ಮಕತೆಯ ದರವು 15.52 ಶೇಕಡಾಕ್ಕೆ ಇಳಿದಿದೆ. 2,67,753 ಜನರು ಚೇತರಿಸಿಕೊಂಡಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,70,71,898 ಕ್ಕೆ ತಲುಪಿದೆ. ಪ್ರಸ್ತುತ ಚೇತರಿಕೆ ದರವು 93.15 ಪ್ರತಿಶತದಷ್ಟಿದೆ.

Coronavirus cases in India ಹೊಸ ಕೊವಿಡ್-19 ಪ್ರಕರಣ 3 ಲಕ್ಷಕ್ಕಿಂತ ಕಡಿಮೆ; ಧನಾತ್ಮಕ ದರ ಶೇ 15.52
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jan 25, 2022 | 10:38 AM

Share

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,55,874 ಕೊವಿಡ್ -19 (Covid-19) ಪ್ರಕರಣಗಳು ದಾಖಲಾಗಿದ್ದು ನಿನ್ನೆಯಿಂದ 50,190 ಪ್ರಕರಣಗಳ ಇಳಿಕೆ ಕಂಡಿದೆ .ಇದೇ ಅವಧಿಯಲ್ಲಿ 614 ಸಾವುಗಳು ಸಂಭವಿಸಿದ್ದು, ಸಾವಿನ ಸಂಖ್ಯೆ 4,90,462 ಕ್ಕೆ ತಲುಪಿದೆ. ದೈನಂದಿನ ಧನಾತ್ಮಕತೆಯ ದರವು 15.52 ಶೇಕಡಾಕ್ಕೆ ಇಳಿದಿದೆ. 2,67,753 ಜನರು ಚೇತರಿಸಿಕೊಂಡಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,70,71,898 ಕ್ಕೆ ತಲುಪಿದೆ. ಪ್ರಸ್ತುತ ಚೇತರಿಕೆ ದರವು 93.15 ಪ್ರತಿಶತದಷ್ಟಿದೆ. ಮಂಗಳವಾರದ ದೈನಂದಿನ ಪ್ರಮಾಣವು ಜನವರಿ 19 ರಿಂದ 282,970 ಪ್ರಕರಣಗಳು ವರದಿಯಾದ ನಂತರ ಅತ್ಯಂತ ಕಡಿಮೆಯಾಗಿದೆ. ಸಕ್ರಿಯ ಪ್ರಕರಣಗಳು 2,236,842 ಕ್ಕೆ ಇಳಿದಿವೆ ಮತ್ತು ಪ್ರಕರಣದ ಶೇ 5.69ರಷ್ಟಿದೆ. ಸೋಮವಾರ ದೇಶವು 306,064 ಪ್ರಕರಣಗಳು, 439 ಸಾವುಗಳು ಮತ್ತು 243,495 ಚೇತರಿಕೆಗಳನ್ನು ವರದಿ ಮಾಡಿದೆ. ದೈನಂದಿನ ಕೊವಿಡ್ -19 ಪಾಸಿಟಿವಿಟಿ ದರವು ಶೇ 15.52 ಕ್ಕೆ ಇಳಿದಿದೆ ಆದರೆ ಸಾಪ್ತಾಹಿಕ ಧನಾತ್ಮಕತೆಯು ಶೇ17.17 ಕ್ಕೆ ಸ್ವಲ್ಪ ಏರಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Union Health Ministry)ಮಂಗಳವಾರ ತಿಳಿಸಿದೆ. ಒಟ್ಟಾರೆ ಚೇತರಿಕೆ ದರವು ಶೇ 93.15 ರಷ್ಟಿದೆ ಎಂದು ಸಚಿವಾಲಯ ಹೇಳಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,649,108 ಮಾದರಿಗಳನ್ನು ಕೊವಿಡ್ -19 ಗಾಗಿ ಪರೀಕ್ಷಿಸಲಾಗಿದೆ ಮತ್ತು ಒಟ್ಟು ಸಂಖ್ಯೆ 718,802,433 ಕ್ಕೆ ಏರಿದೆ.

ಕಳೆದ 24 ಗಂಟೆಗಳಲ್ಲಿ ಅರ್ಹ ಫಲಾನುಭವಿಗಳಿಗೆ 6.2 ಮಿಲಿಯನ್ ಡೋಸ್‌ಗಳನ್ನು ನೀಡುವುದರೊಂದಿಗೆ ದೇಶದ ಲಸಿಕೆ ವ್ಯಾಪ್ತಿಯು 1.63 ಶತಕೋಟಿಯ ಸಮೀಪದಲ್ಲಿದೆ. 15-18 ವರ್ಷದೊಳಗಿನ 42.7 ಮಿಲಿಯನ್‌ಗಿಂತಲೂ ಹೆಚ್ಚು ಮಕ್ಕಳಿಗೆ ಮೊದಲ ಡೋಸ್‌ ನೀಡಲಾಗಿದೆ ಮತ್ತು ಇದುವರೆಗೆ 8,802,178 ಫಲಾನುಭವಿಗಳಿಗೆ ಮುಂಜಾಗ್ರತಾ ಡೋಸ್ ನೀಡಲಾಗಿದೆ.

ಈಗಿರುವ ಕೊವಿಡ್ -19 ಪರಿಸ್ಥಿತಿಯ ಮಧ್ಯೆ, ಈ ವರ್ಷ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸಮಾರಂಭವನ್ನು ರದ್ದುಗೊಳಿಸಲಾಗಿದೆ. ಹಲವಾರು ಸಚಿವರು ಮತ್ತು ಅಧಿಕಾರಿಗಳು – ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ವೈರಸ್ ಸೋಂಕಿಗೆ ಒಳಗಾದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೆಚ್ಚುವರಿಯಾಗಿ, ಡಬಲ್ ವ್ಯಾಕ್ಸಿನೇಷನ್ ಪುರಾವೆ ಇಲ್ಲದ ಮತ್ತು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಗಣರಾಜ್ಯೋತ್ಸವದ ಪರೇಡ್‌ಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ.

ತನ್ನ ಆರ್‌ಟಿ-ಪಿಸಿಆರ್ ಪರೀಕ್ಷೆಯು ಕೊರೊನಾವೈರಸ್‌ನ ‘ಎಲ್ಲಾ ಪ್ರಸ್ತುತ, ಹಿಂದಿನ’ ಸಂಬಂಧಿತ ತಳಿಗಳನ್ನು ಪತ್ತೆ ಮಾಡುತ್ತದೆ ಎಂದ ಪುಣೆ ಸಂಸ್ಥೆ

GenePath Dx CoviDelta RT-PCR ಪರೀಕ್ಷೆಯನ್ನು ಪುಣೆ ಮತ್ತು ಅಮೆರಿಕ ಮೂಲದ ಕಂಪನಿಯಾದ GenePath ಡಯಾಗ್ನೋಸ್ಟಿಕ್ಸ್ ಅಭಿವೃದ್ಧಿಪಡಿಸಿದೆ. ಇದು ಕೊವಿಡ್-19 ಧನಾತ್ಮಕ ಮಾದರಿಗಳು ಡೆಲ್ಟಾಗೆ ಸೇರಿದ್ದು ಎಂದು ಗುರುತಿಸುವಲ್ಲಿ ಸಂಪೂರ್ಣ ಜೀನೋಮ್ ಅನುಕ್ರಮದೊಂದಿಗೆ 100 ಪ್ರತಿಶತ ಸಮಂಜಸವಾಗಿದೆ ಎಂದು ಕಂಡುಬಂದಿದೆ. ಡೆಲ್ಟಾ ವಂಶಾವಳಿ ಅಥವಾ ಒಮಿಕ್ರಾನ್-ವಂಶಾವಳಿ – ಪ್ರಸ್ತುತ ಜಾಗತಿಕ ಚಲಾವಣೆಯಲ್ಲಿರುವ ಎರಡು ಅತ್ಯಂತ ವ್ಯಾಪಕವಾದ ವಂಶಾವಳಿಗಳು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.  ಪ್ರಕಟಣೆ ಪ್ರಕಾರ, ಪರೀಕ್ಷೆಯನ್ನು ಈಗಾಗಲೇ SARS-CoV-2 ಪತ್ತೆಗಾಗಿ ICMR ಮತ್ತು ಉತ್ಪಾದನೆಗಾಗಿ CDSCO (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್) ಅನುಮೋದಿಸಿದೆ. SARS-CoV-2 ಜೀನೋಮ್‌ನಾದ್ಯಂತ ಅನೇಕ ವಿಭಿನ್ನ ಮಾರ್ಕರ್‌ಗಳನ್ನು ಬಳಸುವ ಪರೀಕ್ಷೆಯು ಸೂಕ್ಷ್ಮತೆ ಮತ್ತು ವೈರಸ್‌ನಲ್ಲಿ ರೂಪಾಂತರಗಳಿಗೆ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು, ಹೆಚ್ಚಿನ ಸಂವೇದನೆಯೊಂದಿಗೆ SARS-CoV-2 ನ ಎಲ್ಲಾ ಪ್ರಸ್ತುತ ಮತ್ತು ಹಿಂದಿನ ಪ್ರಾಯೋಗಿಕವಾಗಿ ಸಂಬಂಧಿತ ತಳಿಗಳನ್ನು ಪತ್ತೆಹಚ್ಚಲು ಸಮರ್ಥವಾಗಿದೆ.

ಇದನ್ನೂ ಓದಿ: ಇಂದು 9 ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಕೇಂದ್ರ ಆರೋಗ್ಯ ಸಚಿವರಿಂದ ಸಭೆ; ಕೊವಿಡ್​ 19 ಪರಿಸ್ಥಿತಿ ಪರಿಶೀಲನೆ

Published On - 10:26 am, Tue, 25 January 22

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ