ಬೆಳಗಾವಿ: ಚುನಾವಣೆಗೆ ಇನ್ನೂ ಒಂದು ವರ್ಷ ಮೂರು ತಿಂಗಳು ಇದೆ. ಯಾರು ಮುಳುಗುತ್ತಾರೆ ಯಾರು ತೇಲುತ್ತಾರೆ ಗೊತ್ತಾಗುತ್ತದೆ. ಮುಳುಗುವ ಹಡಗಿನಲ್ಲಿ ಯಾರಾದರೂ ಕುಳಿತುಕೊಳ್ತಾರಾ? ಕಾಂಗ್ರೆಸ್ ಮುಕ್ತ ಭಾರತ ಆಗುತ್ತದೆ ಅಂತಾ ಪ್ರಧಾನಿ ಮೋದಿ (Narendra modi) ಹೇಳಿದ್ದರು. ಈ ಚುನಾವಣೆ ಬಳಿಕ ಕಾಂಗ್ರೆಸ್(Congress) ಮುಕ್ತ ಭಾರತ ಆಗುತ್ತದೆ ಎಂದು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಗೋವಿಂದ ಕಾರಜೋಳ (Govind Karjol) ತಿರುಗೇಟು ನೀಡಿದ್ದಾರೆ.
ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ರಹಸ್ಯ ಸಭೆ ವಿಚಾರ
ಯಾವ ಬಣನೂ ಇಲ್ಲ, ಏನೂ ಇಲ್ಲ, ಬಿಜೆಪಿ ಒಂದೇ ಇದೆ ಎಲ್ಲರೂ ಒಗ್ಗಟ್ಟಿದ್ದಾರೆ. ಬಜೆಟ್ ಹಿನ್ನೆಲೆ ಹೆಚ್ಚು ಅನುದಾನ ಪಡೆಯಲು ಸಭೆ ಮಾಡಿರುತ್ತ್ತಾರೆ ಎಂದು ಕತ್ತಿ, ಸವದಿ ನೇತೃತ್ವದ ಸಭೆಗೆ ಗೋವಿಂದ ಕಾರಜೋಳ ಸಮಜಾಯಿಷಿ ನೀಡಿದ್ದಾರೆ.
ಬೆಳಗಾವಿಯಲ್ಲಿ ಸಚಿವ ಗೋವಿಂದ ಕಾರಜೋಳ ಟಾಂಗ್
ನಮ್ಮದು ರಾಷ್ಟ್ರೀಯ ಪಕ್ಷ ಒಂದು ನೀತಿ ತೆಗೆದುಕೊಂಡಿದ್ದಾರೆ. ಆಯಾ ಜಿಲ್ಲೆಯವರಿಗೆ ಆ ಸಚಿವರು ಬೇಡ ಎಂಬ ನಿಯಮ. ಪಕ್ಕದ ಜಿಲ್ಲೆಗೆ ಹೋಗಿ ಇನ್ನಷ್ಟು ಹೆಚ್ಚು ಪಕ್ಷ ಸಂಘಟಿಸಲಿ ಎಂಬ ನಿಯಮ. ಇದರಲ್ಲಿ ಏನು ರಾಜಕಾರಣ ಇಲ್ಲ. ಚುನಾವಣಾ ವರ್ಷದಲ್ಲಿ ನಮ್ಮ ಊರಲ್ಲೇ ಇರಬೇಕು, ಕ್ಷೇತ್ರದಲ್ಲೇ ಇರಬೇಕು ಅಂದರೆ ಪಂಚಾಯತಿ ಮೆಂಬರ್ ತರಹ ಆಗುತ್ತದೆ. ನೀವು ಕರ್ನಾಟಕದ ಎಂಎಲ್‌ಎಗಳು, ಕರ್ನಾಟಕದ ಮಂತ್ರಿಗಳು. ಎಲ್ಲಾ ಕಡೆ ಸುತ್ತಾಡಿ ಸಂಘಟನೆ ಮಾಡಬೇಕು. ಹಾಗೆಲ್ಲಾ ಪಂಚಾಯಿತಿ ಮೆಂಬರ್ ರೀತಿ ಇರಲು ಆಗಲ್ಲ ಎಂದು ಸ್ವಂತ ಜಿಲ್ಲೆಗೆ ಉಸ್ತುವಾರಿ ಸಚಿವ ಸ್ಥಾನ ಕೇಳೋರಿಗೆ ಗೋವಿಂದ್ ಕಾರಜೋಳ ತಿರುಗೇಟು ನೀಡಿದ್ದಾರೆ.
ಮಹದಾಯಿ ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ವಿಚಾರ
60 ವರ್ಷ ಕಾಂಗ್ರೆಸ್ನವರು ಕುಂಭಕರ್ಣ ನಿದ್ದೆ ಮಾಡಿದ್ದಾರೆ. ಈಗ ಪಾದಯಾತ್ರೆ ಅಂದರೆ ಜನರಿಗೆ ಏನು ಲಾಭ ಆಗುತ್ತದೆ. ಜನರಿಗೆ ಮೋಸ, ಜನರನ್ನು ಮರುಳು ಮಾಡಲು ಪಾದಯಾತ್ರೆ ಮಾಡಿದ್ದಾರೆ. ಅಧಿಕಾರದಲ್ಲಿದ್ದಾಗ ಕುಂಭಕರ್ಣ ನಿದ್ದೆ ಮಾಡಿ ಈಗ ಭಂಡತನ ತೋರುತ್ತಾರೆ. 5 ರಾಜ್ಯಗಳ ಚುನಾವಣೆ ನಂತರ ಕಾಂಗ್ರೆಸ್ ನಿರ್ನಾಮವಾಗುತ್ತದೆ. ಮಹದಾಯಿ ಸಲುವಾಗಿ 780 ದಿನ ರೈತರು ಹೋರಾಟ ಮಾಡಿದ್ರೂ. ಸಿದ್ದರಾಮಯ್ಯ ಸರ್ಕಾರದಲ್ಲಿ ಲಾಠಿ ಏಟು ಕೊಟ್ಟು ಜೈಲಿಗೆ ಹಾಕಿದ್ದರು. ಇದರಿಂದಲೇ ಕಾಂಗ್ರೆಸ್ ಇಡೀ ದೇಶದಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ ಎಂದು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ಕಾರಜೋಳ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಯೋಜನೆ: ಡಿಪಿಆರ್ಗೆ 5 ವರ್ಷ ಬೇಕಿತ್ತಾ? ಕಾಂಗ್ರೆಸ್ ವಿರುದ್ಧ ನೀರಾವರಿ ಸಚಿವ ಗೋವಿಂದ ಕಾರಜೋಳ ಟೀಕೆ
ಬೇಡವೆಂದರೂ ತಲೆಗೆ ಸುತ್ತಿದ ರುಮಾಲನ್ನು ಕಿತ್ತು ಬಿಸಾಡಿದ ಸಿದ್ದರಾಮಯ್ಯ ಆಮೇಲೆ ತಮ್ಮ ಕ್ರಾಪು ಸರಿಮಾಡಿಕೊಂಡರು!!