ಬೇಡವೆಂದರೂ ತಲೆಗೆ ಸುತ್ತಿದ ರುಮಾಲನ್ನು ಕಿತ್ತು ಬಿಸಾಡಿದ ಸಿದ್ದರಾಮಯ್ಯ ಆಮೇಲೆ ತಮ್ಮ ಕ್ರಾಪು ಸರಿಮಾಡಿಕೊಂಡರು!!

ಅವನ ಉದ್ದೇಶ ತಿಳಿದ ಸಿದ್ದರಾಮಯ್ಯ ಬೇಡ, ರುಮಾಲು ಬೇಡ ಅನ್ನುತ್ತಾರೆ. ಆದರೆ, ಅಭಿಮಾನಿ ಸಿದ್ದರಾಮಯ್ಯನವರ ತಲೆಗೆ ರುಮಾಲು ಸುತ್ತಿಯೇ ವಾಪಸ್ಸು ಬರುತ್ತೇನೆ ಅಂತ ತನ್ನ ಸ್ನೇಹಿತರೊಂದಿಗೆ ಪಣವೊಡ್ಡಿದ್ದ ಅಂತ ಕಾಣುತ್ತೆ. ಸಿದ್ದರಾಮಯ್ಯ ಬೇಡವೆಂದರೂ ರುಮಾಲು ಸುತ್ತಲಾರಂಭಿಸುತ್ತಾನೆ. ಅವನ ಚೇಷ್ಟೆಯಿಂದ ಕೋಪೋದ್ರಿಕ್ತರಾಗುವ ಸಿದ್ದರಾಮಯ್ಯ ತಲೆಗೆ ಸ್ವಲ್ಪ ಸುತ್ತಿದ್ದ ರುಮಾಲನ್ನು ಕಿತ್ತಿ ಬಿಸಾಡುತ್ತಾರೆ.

TV9kannada Web Team

| Edited By: Arun Belly

Jan 25, 2022 | 9:30 PM

ಬಾದಾಮಿ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಮಂಗಳವಾರದಂದು ದಿನವಿಡೀ ಬ್ಯುಸಿಯಾಗಿದ್ದರು. ತಮ್ಮ ಕ್ಷೇತ್ರದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದರು. ಒಂದೂರಲ್ಲಿ ಶಾಲಾ ಕಟ್ಟಡವೊಂದರ ಶಂಕುಸ್ಥಾಪನೆ ನೆರವೇರಿಸಿದರೆ ಮತ್ತೊಂದು ಗ್ರಾಮದಲ್ಲಿ ಪಂಚಾಯ್ತಿ ಕಟ್ಟಡವನ್ನು ಉದ್ಘಾಟಿಸಿದರು. ಅವರು ನಿಸ್ಸಂದೇಹವಾಗಿ ಕ್ರೌಡ್ (crowd puller) ಪುಲ್ಲರ್, ಹೋದೆಡೆಯೆಲ್ಲ ಜನ ಸೇರುತ್ತಾರೆ. ಬಾದಾಮಿ (Badami) ತಾಲ್ಲೂಕಿನ ಕಾತರಿಕಿ ಗ್ರಾಮದಲ್ಲಿ ಅವರು ಮಂಗಳವಾರ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸುವ ಸಂದರ್ಭದಲ್ಲಿ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಅದ್ಯಾವ ಕಾರಣಕ್ಕೋ ಏನೋ ಅವರು ಭುಸುಗುಡುತ್ತಿದ್ದರು. ಮಾಸ್ಕ್ ಧರಿಸಿದ್ದರೂ ಮುಖದಲ್ಲಿ ಸಿಡಿಮಿಡಿ ಭಾವ ಸ್ಪಷ್ಟವಾಗಿ ಕಾಣುತ್ತಿತ್ತು. ಪಂಚಾಯಿತಿ ಕಚೇರಿಯಲ್ಲಿ ಅವರು ಒಂದು ಹಾಳೆಯಲ್ಲಿ ಬರೆದಿರುವುದನ್ನು ಓದುವಾಗ ಅವರ ಅಭಿಮಾನಿಯೊಬ್ಬ (ಕಾರ್ಯಕರ್ತನೂ ಅಗಿರಬಹುದು) ರುಮಾಲು ತೊಡಿಸಿ ಸತ್ಕರಿಸುವ ಉದ್ದೇಶದಿಂದ ಅವರಿದ್ದಲ್ಲಿಗೆ ಬರುತ್ತಾನೆ.

ಅವನ ಉದ್ದೇಶ ತಿಳಿದ ಸಿದ್ದರಾಮಯ್ಯ ಬೇಡ, ರುಮಾಲು ಬೇಡ ಅನ್ನುತ್ತಾರೆ. ಆದರೆ, ಅಭಿಮಾನಿ ಸಿದ್ದರಾಮಯ್ಯನವರ ತಲೆಗೆ ರುಮಾಲು ಸುತ್ತಿಯೇ ವಾಪಸ್ಸು ಬರುತ್ತೇನೆ ಅಂತ ತನ್ನ ಸ್ನೇಹಿತರೊಂದಿಗೆ ಪಣವೊಡ್ಡಿದ್ದ ಅಂತ ಕಾಣುತ್ತೆ. ಸಿದ್ದರಾಮಯ್ಯ ಬೇಡವೆಂದರೂ ರುಮಾಲು ಸುತ್ತಲಾರಂಭಿಸುತ್ತಾನೆ. ಅವನ ಚೇಷ್ಟೆಯಿಂದ ಕೋಪೋದ್ರಿಕ್ತರಾಗುವ ಸಿದ್ದರಾಮಯ್ಯ ತಲೆಗೆ ಸ್ವಲ್ಪ ಸುತ್ತಿದ್ದ ರುಮಾಲನ್ನು ಕಿತ್ತಿ ಬಿಸಾಡುತ್ತಾರೆ.

ಅಲ್ಲಿದ್ದವರು ರುಮಾಲು ಸುತ್ತಲು ಬಂದ ಅಭಿಮಾನಿಗೆ ಗದರುತ್ತಾರೆ. ಅವನು ನಿರಾಶೆ ಮತ್ತು ಅವಮಾನದೊಂದಿಗೆ ಹ್ಯಾಪುಮೋರೆ ಹಾಕಿಕೊಂಡು ಅಲ್ಲಿಂದ ನಿರ್ಗಮಿಸುತ್ತಾನೆ.

ತಲೆಯಿಂದ ರುಮಾಲನ್ನು ಕಿತ್ತಿ ಬಿಸಾಡುವ ಭರದಲ್ಲಿ ಕ್ರಾಪು ಕೆಟ್ಟಿತೇನೋ ಅಂತ ಆತಂಕಕ್ಕೊಳಗಾಗುವ ಸಿದ್ದರಾಮಯ್ಯ ಅದನ್ನು ಕೈಯಿಂದಲೇ ಸರಿಮಾಡಿಕೊಳ್ಳುತ್ತಾರೆ!

ಆದಾದ ಮೇಲೆ ಉತ್ತರ ಕರ್ನಾಟಕದ ತಿಂಡಿಯೊಂದನ್ನು ತಟ್ಟೆಯಲ್ಲಿ ಹಾಕಿ ಸಿದ್ದರಾಮಯ್ಯನವರಿಗೆ ಕೊಡಲಾಗುತ್ತದೆ. ಆಗಲೂ ಕೋಪದಲ್ಲೇ ಇದ್ದ ಸಿದ್ದರಾಮಯ್ಯ ತನಗೆ ಬೇಡ ಅಂತ ಸನ್ನೆ ಮಾಡುತ್ತಾರೆ.

‘ರುಚಿನಾದ್ರೂ ನೋಡ್ರಿ ಸರಾ,’ ಅಂತ ಕಾರ್ಯಕರ್ತರು ಒತ್ತಾಯಿಸಿದಾಗ ಅವರು ಮಾಸ್ಕ್ ಸರಿಸದೆ ಅದನ್ನು ಬಾಯಿಗೆ ಹಾಕಿಕೊಳ್ಳಲು ಹೋಗುತ್ತಾರೆ. ಮಾಸ್ಕ್ ಇರುವುದು ಅರಿವಿಗೆ ಬಂದ ಮೇಲೆ ಅದನ್ನು ಸರಿಸಿ ತಿಂಡಿಯನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ.

ಇದನ್ನೂ ಓದಿ:  ಶಮಂತ್​ ಬ್ರೋ ಗೌಡ ಖರೀದಿಸಿದ ಐಷಾರಾಮಿ ಕಾರು ರೈಡ್​ ಮಾಡಿದ ಕಿಚ್ಚ ಸುದೀಪ್​; ವೈರಲ್​ ಆಯ್ತು ವಿಡಿಯೋ

Follow us on

Click on your DTH Provider to Add TV9 Kannada