ಬಾಗಲಕೋಟೆಯಲ್ಲಿ ಗುದ್ದಲಿ ಪೂಜೆ ನೆರವೇರಿಸುವಾಗಲೂ ಪಾದರಕ್ಷೆ ಕಳಚಲಿಲ್ಲ ಸಿದ್ದರಾಮಯ್ಯನವರು!

ಮುತ್ತಲಗೇರಿಯಲ್ಲಿ ಸಿದ್ದರಾಮಯ್ಯ ಪೂಜೆ ಸಲ್ಲಿಸುವಾಗ ಮತ್ತು ಗುದ್ದಲಿಯಿಂದ ಎರಡು ಬಾರಿ ಭೂಮಿಯನ್ನು ಅಗಿಯುವಾಗ ಪಾದರಕ್ಷೆ ಬಿಚ್ಚಿದ್ದರೆ ಆಕಾಶವೇನೂ ತಲೆ ಮೇಲೆ ಬೀಳುತ್ತಿರಲಿಲ್ಲ. ಅವರಿಗದು ಸರಿ ಕಂಡರಿಬಹುದು. ಆದರೆ, ನೋಡುವವರಿಗೆ ಸರಿಕಾಣುವುದಿಲ್ಲ ಮತ್ತು ಒಂದು ಒಳ್ಳೆಯದಲ್ಲದ ಸಂದೇಶ ರವಾನೆಯಾಗುತ್ತದೆ.

TV9kannada Web Team

| Edited By: Arun Belly

Jan 25, 2022 | 8:17 PM

ವಿರೋಧ ಪಕ್ಷದ ನಾಯಕ (Leader of Opposition) ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಕೆಲವರು ನಾಸ್ತಿಕ ಅಂತ ಕರೆಯುವುದುಂಟು. ಆದರೆ ಅವರು, ನಾನು ನಾಸ್ತಿಕ ಅಲ್ಲ ಅದರೆ ಮೂಢನಂಬಿಕೆಗಳಲ್ಲಿ ನನಗೆ ವಿಶ್ವಾಸವಿಲ್ಲ, ದೇವರ ಮೇಲೆ ವಿಶ್ವಾಸವಿದೆ ಎಂದು ಹಲವು ಬಾರಿ ಹೇಳಿದ್ದಾರೆ. ಸಿದ್ದರಾಮಯ್ಯನವರು ಹೆಚ್ ಡಿ ರೇವಣ್ಣ (HD Revanna) ಹಾಗೆ ಕೈಯಲ್ಲಿ ನಿಂಬೆ ಹಣ್ಣು ಹಿಡಿದುಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಸಂದರ್ಭಗಳೂ ಇವೆ. ಬಿಡಿ, ಅದು ನಮ್ಮ ಚರ್ಚೆಯ ವಿಷಯ ಅಲ್ಲ. ದೇವರನ್ನು ನಂಬುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ. ನಂಬಲೇಬೇಕು ಅಂತ ಯಾರೂ ಹೇಳಲಾರರು ಮತ್ತು ನಂಬಬೇಡಿ ಅಂತಲೂ ಯಾರೂ ಒತ್ತಾಯಿಸುವುದಿಲ್ಲ. ಆದರೆ, ಸಿದ್ದರಾಮಯ್ಯ ಮಂಗಳವಾರದಂದು ಬಾಗಲಕೋಟೆಯ ಮುತ್ತಲಗೇರಿ ಗ್ರಾಮದಲ್ಲಿ ಕಾಲಲ್ಲಿ ಶೂ ಧರಿಸಿಯೇ ಶಾಲಾ ಕಟ್ಟಡವೊಂದಕ್ಕೆ ಗುದ್ದಲಿ ಪೂಜೆ ನಡೆಸಿದ್ದು ಮಾತ್ರ ಅವರ ಕಟ್ಟಾ ಅಭಿಮಾನಿಗಳಿಗೂ ಸರಿಕಂಡಿಲ್ಲ.

ಭೂಮಿಪೂಜೆ ಬಯಲು ಪ್ರದೇಶದಲ್ಲೇ ನಡೆಯುತ್ತದೆ ಅದನ್ನು ದೇವಸ್ಥಾನಗಳಲ್ಲಿ ನಡೆಸಲಾಗದು. ಮುತ್ತಲಗೇರಿಯಲ್ಲಿ ಅವರು ಪೂಜೆ ಸಲ್ಲಿಸುವಾಗ ಮತ್ತು ಗುದ್ದಲಿಯಿಂದ ಎರಡು ಬಾರಿ ಭೂಮಿಯನ್ನು ಅಗಿಯುವಾಗ ಪಾದರಕ್ಷೆ ಬಿಚ್ಚಿದ್ದರೆ ಆಕಾಶವೇನೂ ತಲೆ ಮೇಲೆ ಬೀಳುತ್ತಿರಲಿಲ್ಲ. ಅವರಿಗದು ಸರಿ ಕಂಡರಿಬಹುದು. ಆದರೆ, ನೋಡುವವರಿಗೆ ಸರಿಕಾಣುವುದಿಲ್ಲ ಮತ್ತು ಒಂದು ಒಳ್ಳೆಯದಲ್ಲದ ಸಂದೇಶ ರವಾನೆಯಾಗುತ್ತದೆ.

ಸೋಜಿಗದ ವಿಷಯವೆಂದರೆ ಅವರ ಜೊತೆಯಲ್ಲಿರುವ ಕಾರ್ಯಕರ್ತರಲ್ಲಿ ಕೆಲವರು ಪೂಜೆ ನಡೆಯುವ ಸಮಯದಲ್ಲಿ ಚಪ್ಪಲಿ ಕಳಚಿ ಪಕ್ಕಕ್ಕಿಡುವ ಗೋಜಿಗೆ ಹೋಗಿಲ್ಲ. ನಮ್ಮ ನಾಯಕರೇ ತೆಗೆದಿಲ್ಲ, ನಾವ್ಯಾಕೆ ಕಳಚೋದು ಅಂತ ಅವರು ಅಂದುಕೊಂಡಿರಬಹುದು!

ಸಿದ್ದರಾಮಯ್ಯನವರ ಅಭಿಮಾನಿಗಳ ಗುಂಪಿನಲ್ಲಿ ಕೆಲವು ಭಟ್ಟಂಗಿಗಳೂ ಇದ್ದರು ಮಾರಾಯ್ರೇ. ವಿರೋಧ ಪಕ್ಷದ ನಾಯಕ ಗುದ್ದಲಿಯನ್ನು ನೆಲಕ್ಕೆ ತಾಕಿಸುತ್ತಿದ್ದಂತೆ ಅವರು, ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯವಾಗಲಿ,’ ಅಂತ ಕೂಗುತ್ತಾರೆ!

ಇದನ್ನೂ ಓದಿ: UP Diwas 2022: ಉತ್ತರ ಪ್ರದೇಶ ಜನರಿಗೆ ರಾಷ್ಟ್ರಪತಿ, ಗೃಹ ಸಚಿವರಿಂದ ಶುಭಾಶಯ; ಸಿಎಂ ಯೋಗಿ ವಿಡಿಯೋ ಶೇರ್​ ಮಾಡಿದ ಪ್ರಧಾನಿ ಮೋದಿ

Follow us on

Click on your DTH Provider to Add TV9 Kannada