ಮುಂಬೈ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಹದಿಹರೆಯದ ಇಬ್ಬರು ಆರೋಪಿಗಳ ಬಂಧನ
ಕ್ಯಾಟರಿಂಗ್ ಕೆಲಸ ಮಾಡುತ್ತಿರುವ ಮಹಿಳೆ ಶನಿವಾರ ಮುಂಜಾನೆ 4.30 ರ ಸುಮಾರಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಒಬ್ಬ ಆರೋಪಿ ಸಂತ್ರಸ್ತೆಯ ಪರಿಚಿತನಾಗಿದ್ದ, ಆತ ಆಕೆಯನ್ನು ತಡೆದು ಯಾಕೆ ತಡವಾಗಿ ಹೋಗುತ್ತಿದ್ದಿ ಎಂದು ಕೇಳಿದ್ದನು.
ಮುಂಬೈ: ಮುಂಬೈನಲ್ಲಿ ಶನಿವಾರ ಮುಂಜಾನೆ ಮಹಿಳೆಯೊಬ್ಬರ ಮೇಲೆ ನಾಲ್ವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ(Gangrape) ಎಸಗಿದ್ದಾರೆ. ಇವರಲ್ಲಿ ಇಬ್ಬರು ಹದಿಹರೆಯದವರನ್ನು ಬಂಧಿಸಲಾಗಿದ್ದು, ಪೊಲೀಸರು ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ. ಕ್ಯಾಟರಿಂಗ್ ಕೆಲಸ ಮಾಡುತ್ತಿರುವ ಮಹಿಳೆ ಶನಿವಾರ ಮುಂಜಾನೆ 4.30 ರ ಸುಮಾರಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಒಬ್ಬ ಆರೋಪಿ ಸಂತ್ರಸ್ತೆಯ ಪರಿಚಿತನಾಗಿದ್ದ, ಆತ ಆಕೆಯನ್ನು ತಡೆದು ಯಾಕೆ ತಡವಾಗಿ ಹೋಗುತ್ತಿದ್ದಿ ಎಂದು ಕೇಳಿದ್ದನು. ಅವರಲ್ಲಿ ಒಬ್ಬ ಆಕೆಯಲ್ಲಿ ತನ್ನೊಂದಿಗೆ ಬರುವಂತೆ ಹೇಳಿ ಅವಳನ್ನು ಕೋಣೆಗೆ ಕರೆದೊಯ್ದು ಅಲ್ಲಿ ಆರೋಪಿಗಳು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದರು. ಅವಳು ಬೊಬ್ಬೆ ಹಾಕಿದಾಗ ಇತರರು ಸೇರಿಕೊಂಡರು. ಆಕೆಯ ಬಾಯಿ ಮುಚ್ಚಿ ತಪ್ಪಿಸಿಕೊಳ್ಳುವ ಮೊದಲು ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು ,ಆಕೆಯ ಮತ್ತು ಸ್ಥಳೀಯ ಗುಪ್ತಚರ ನೀಡಿದ ವಿವರಣೆಯನ್ನು ಆಧರಿಸಿ, ಪೊಲೀಸರು ನಾಲ್ವರು ಆರೋಪಿಗಳ ಗುರುತುಗಳನ್ನು ಪತ್ತೆಹಚ್ಚಿದ್ದಾರೆ ಎಂದು ಹೇಳಿದ್ದಾರೆ.
ಇಬ್ಬರು ಹದಿಹರೆಯದವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಕೃತ್ಯವೆಸಗಿ ದ ಮತ್ತಿಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ” ಎಂದು ಅಧಿಕಾರಿ ಹೇಳಿದರು.
ಮುಂಬೈನ ಗೋವಂಡಿ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 19 ವರ್ಷದ ಯುವತಿ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಶಿವಾಜಿ ನಗರದಲ್ಲಿ ನಡೆದ ಘಟನೆಯಲ್ಲಿ ಭಾಗಿಯಾಗಿದ್ದ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದು, ನಾಲ್ಕನೇ ಆರೋಪಿಗಾಗಿ ಶೋಧ ನಡೆಸಿದ್ದಾರೆ.
ವರದಿಗಳ ಪ್ರಕಾರ ಮಹಿಳೆ ಕೆಲಸ ಮುಗಿಸಿ ಹೋಗುತ್ತಿದ್ದಾಗ ಆರೋಪಿ ನಿನ್ನೊಂದಿಗೆ ಮಾತನಾಡಬೇಕು ಎಂದಿದ್ದ. ನಂತರ ಆರೋಪಿ ಮಹಿಳೆಯನ್ನು ಕೊಳೆಗೇರಿ ಕೊಠಡಿಯ ಮೇಲಂತಸ್ತಿಗೆ ಕರೆದೊಯ್ದು, ಅಲ್ಲಿ ಆತನ ಸ್ನೇಹಿತರು ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಕೂಡಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಸಂತ್ರಸ್ತೆ ಪೊಲೀಸರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ವಜ್ರೇಶ್ವರಿ, ಮುಂಬ್ರಾ, ವಾಶಿ, ಬೇಲಾಪುರ, ವಡಾಲಾ, ಸಿಎಸ್‌ಎಂಟಿ, ಎಲ್‌ಟಿ ಮಾರ್ಗ, ಮುಂಬೈ ಸೆಂಟ್ರಲ್ ರೈಲು ನಿಲ್ದಾಣಗಳಿಗೆ ಕನಿಷ್ಠ 10 ಪೊಲೀಸ್ ತಂಡಗಳನ್ನು ರವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ ರೈಲಿನಲ್ಲಿ ಉತ್ತರ ಪ್ರದೇಶದ ಬಸ್ತಿಗೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರು ಅಪ್ರಾಪ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವಿಚಾರಣೆ ಬಳಿಕ ಮತ್ತೊಬ್ಬ ಅಪ್ರಾಪ್ತ ಆರೋಪಿಯ ಬಗ್ಗೆ ಮಾಹಿತಿ ಸಿಕ್ಕಿದ್ದು, ಆತನನ್ನೂ ಬಂಧಿಸಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Coronavirus cases in India: ದೇಶದಲ್ಲಿ ಒಂದೇ ದಿನ 3.33 ಲಕ್ಷ ಹೊಸ ಕೊವಿಡ್ ಪ್ರಕರಣ, ಚೇತರಿಕೆ ಪ್ರಮಾಣ ಶೇ 93.18
Published On - 11:25 am, Sun, 23 January 22