ಬೆಳಗಾವಿ: ಓಡಿ ಹೋದ ಮಗಳು ಗರ್ಭಿಣಿ ಅಂತ ಅಪಪ್ರಚಾರ, ತಮ್ಮನನ್ನು ಕೊಂದ ಅಣ್ಣ

ಓಡಿ ಹೋದ ಮಗಳು ತವರು ಮನೆಗೆ ಮರಳಿದ್ದಳು. ಮಗಳು ಮನೆಗೆ ಬಂದ ಮೇಲೆ ಅಣ್ಣ-ತಮ್ಮಂದಿರ ನಡುವೆ ಜಗಳ ಆರಂಭವಾಗಿದೆ. ಜಗಳ ತಾರಕಕ್ಕೇರಿ ಗ್ರಾಮದಲ್ಲಿ ಅಣ್ಣ ತಮ್ಮನನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ: ಓಡಿ ಹೋದ ಮಗಳು ಗರ್ಭಿಣಿ ಅಂತ ಅಪಪ್ರಚಾರ, ತಮ್ಮನನ್ನು ಕೊಂದ ಅಣ್ಣ
ಆರೋಪಿಗಳಾದ ಭೀಮಪ್ಪ ಚೌವ್ಹಾನ್ ಮತ್ತು ಲಕ್ಷ್ಮಣ ಪಡತರೆ
Edited By:

Updated on: Sep 09, 2024 | 12:27 PM

ಬೆಳಗಾವಿ, ಸೆಪ್ಟೆಂಬರ್​ 09: ಮೂಡಲಗಿ (Mudalagi) ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದಾನೆ. ವಿಠ್ಠಲ್ ಚೌವ್ಹಾನ್ (51) ಕೊಲೆಯಾದ ವ್ಯಕ್ತಿ. ಭೀಮಪ್ಪ ಚೌವ್ಹಾನ್ ಕೊಲೆ ಮಾಡಿದ ಆರೋಪಿ. ಕೊಲೆ ಆರೋಪಿಗಳಾದ ಭೀಮಪ್ಪ ಚೌವ್ಹಾನ್ ಮತ್ತು ಲಕ್ಷ್ಮಣ ಪಡತರೆಯನ್ನು ಘಟಪ್ರಭಾ ಠಾಣೆ ಪೊಲೀಸರು (Ghataprabha Police) ಬಂಧಿಸಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಭೀಮಪ್ಪ ಚೌವ್ಹಾನ್ ಮಗಳು ಪಕ್ಕದ ಗ್ರಾಮದ ಯುವಕನನ್ನು ಪ್ರೀತಿಸಿದ್ದಳು. ತನ್ನ ಪ್ರಿಯತಮ ಸರ್ಕಾರಿ ನೌಕರಿಯಲ್ಲಿದ್ದಾನೆ ಎಂದು ನಂಬಿ ಯುವತಿ ಪ್ರೀತಿಸಿದ್ದಾಳೆ. ಪ್ರೇಮಿಗಳು ಓಡಿ ಹೋಗಿ ಮದುವೆಯಾಗಿದ್ದಾರೆ. ಮೂರು ತಿಂಗಳು ಜೀವನ ನಡೆಸಿದ ಬಳಿಕ, ಯುವತಿಗೆ ತನ್ನ ಪತಿ ಸರ್ಕಾರಿ ನೌಕರನಲ್ಲ ಎಂದು ತಿಳಿದಿದೆ.

ಇದನ್ನೂ ಓದಿ: ಬೀಡಿ,‌ ಸಿಗರೇಟ್, ಗಾಂಜಾ ಚಟಕ್ಕಾಗಿ ಬಾಲಕಿಯನ್ನು ಅಪಹರಿಸಲು ಯತ್ನ​

ಇದರಿಂದ ಕೋಪಗೊಂಡ ಯುವತಿ ತವರು ಮನೆಗೆ ಮರಳಿದ್ದಾಳೆ. ತವರು ಮನೆಗೆ ಬಂದ ಬಳಿಕ ಯುವತಿಯ ಚಿಕ್ಕಪ್ಪ ವಿಠ್ಠಲ್ ಚೌವ್ಹಾನ್ ಆಕೆಯ ಬಗ್ಗೆ ಊರು ತಂಬ ಸುಳ್ಳು ಸುದ್ದಿ ಹಬ್ಬಿಸಲು ಆರಂಭಿಸಿದ್ದಾನೆ. ನನ್ನ ಅಣ್ಣನ ಮಗಳು ಗರ್ಭಿಣಿಯಾಗಿದ್ದಾಳೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ಈ ವಿಚಾರ ಭೀಮಪ್ಪ ಚೌವ್ಹಾನ್​​ಗೆ ತಿಳಿದಿದೆ. ಇದೇ ವಿಚಾರಕ್ಕೆ ಭೀಮಪ್ಪ ಮತ್ತು ವಿಠ್ಠಲ್ ಮಧ್ಯೆ ಜಗಳವಾಗಿದೆ. ‌

ಭೀಮಪ್ಪ ಚೌವ್ಹಾನ್​ ಕಳೆದ ತಿಂಗಳು 30 ರಂದು ಗ್ಯಾಂಗ್ ಕಟ್ಟಿಕೊಂಡು ಬಂದು, ರಾಡ್ ಹಾಗೂ ಕಟ್ಟಿಗೆಗಳಿಂದ ವಿಠ್ಠಲ್ ಮೇಲೆ ಹಲ್ಲೆ‌ ಮಾಡಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ವಿಠ್ಠಲ್ ಚೌವ್ಹಾನ್​​ನನ್ನು ಬೆಳಗಾವಿ ಖಾಸಗಿ ಆಸ್ಪತ್ರೆ ದಾಖಲು ಮಾಡಿದ್ದರು. ಆದರೆ, ಸೆಪ್ಟೆಂಬರ್ 4 ರಂದು ವಿಠ್ಠಲ್​ ಚೌವ್ಹಾನ್​ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:24 pm, Mon, 9 September 24